ಉಪ್ಪಿನಂಗಡಿಯಲ್ಲಿ ಹನಿ ಟ್ರ್ಯಾಪ್ ದಂಧೆ- ಆರೋಪಿಗಳ ಬಂಧನ

Spread the love

ಉಪ್ಪಿನಂಗಡಿಯಲ್ಲಿ ಹನಿ ಟ್ರ್ಯಾಪ್ ದಂಧೆ- ಆರೋಪಿಗಳ ಬಂಧನ

ಉಪ್ಪಿನಂಗಡಿ: ರೆಸಾರ್ಟ್ ಒಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದು ಇತರ ಮೂವರು ಪರಾರಿಯಾಗಿದ್ದಾರೆ.

ಕುಶಾಲನಗರದ ಲೋಹಿತ್ ಮತ್ತು ವಿಟ್ಟಲದ ಶರೀಫ್ ಬಂಧಿತರಾಗಿದ್ದು ಪ್ರಕರಣದ ಪ್ರಮುಖ ಆರೋಪಿ ವಿಟ್ಲದ ಜಮಾಲು, ಜೀವನ್ ಹಾಗೂ ನೌಶಾದ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನಾಂಕ 07.01.2020 ರಂದು ಪೆರುಬುಲ್ಲಿ ಕೆರಿ ಕುಟ್ಯಾಟೂರ್ ತಳಿಪರಂಬ ತಾಲೂಕು ಕಣ್ಣೂರು ಜಿಲ್ಲೆ ಕೇರಳ ನಿವಾಸಿ ದಿಲೀಪ್ ಟಿ ಎಂಬವರ ಮೋಬೈಲ್ ಗೆ ಹುಡುಗಿಯೊಬ್ಬಳು ಕರೆ ಮಾಡಿ ಕಲ್ಲು ಕೋರೆಗೆ ಕೆಲಸಕ್ಕೆ ಜನ ಬೇಕಿದ್ದರೆ ಕಾಸರಗೋಡಿಗೆ ಬನ್ನಿ ಎಂದು ತಿಳಿಸಿದಂತೆ ಪಿರ್ಯಾದಿ ಹಾಗೂ ಸ್ನೇಹಿತರಾದ ಜನಾರ್ಧನನ್,  ಪ್ರಶಾಂತ್, ಪ್ರವೀಣ್  ಎಂಬವರೊಂದಿಗೆ ಕೆ ಎಲ್ 59 ಇ 2625 ನೇ ಇನ್ನೋವಾ ಕಾರಿನಲ್ಲಿ  ಕಣ್ಣೂರಿನಿಂದ ಸದರಿ ಹುಡುಗಿಗೆ ಮೋಬೈಲ್ ಕರೆ ಮಾಡಿ ದಾರಿ ಕೇಳುತ್ತಾ ಬಂದು ಪುತ್ತೂರು ಬೈಪಾಸ್ ರಸ್ತೆಯಲ್ಲಿ ರಾತ್ರಿ 12:00 ಗಂಟೆಗೆ ಸದರಿ ಹುಡುಗಿ ಭೇಟಿಯಾಗಿ ಆಕೆಯೊಂದಿಗೆ ಕಾರಿನಲ್ಲಿ ಸುಮಾರು ಅರ್ಧ ಕೀ ಮೀ ಒಂದು ಮನೆಗೆ ರಾತ್ರಿ ಸುಮಾರು 12:30 ಗಂಟೆಗೆ ಬಂದಿರುತ್ತಾರೆ. ಆ ಮನೆಯಲ್ಲಿ ಮತ್ತೋಬ್ಬಳು  ಹುಡುಗಿಯಿದ್ದು ಆ ಸಮಯ ಇಬ್ಬರು  ಗಂಡಸರು ಬಂದು ಏಕಾಏಕಿ ಪಿರ್ಯಾದಿ ಹಾಗೂ ಇತರರಿಗೆ ಹಲ್ಲೆ ನಡೆಸಿದ್ದು ಆ ಬಳಿಕ ರೂಮಿನಲ್ಲಿ  ಅಕ್ರಮ ಬಂಧನಲ್ಲಿ ಕೂಡಿಟ್ಟು  ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೋಲಿಸರಿಗೆ ಹಾಗೂ ಚಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ.

ಈ ವೇಳೆ ಪೊಲೀಸರು ಎಂಬುವುದಾಗಿ ಹೇಳಿಕೊಂಡು ಬಂದ 3 ಜನ ಹೊಡೆದು 10 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟು,  ಇಲ್ಲವಾದಲ್ಲಿ ಚಾನೆಲ್ ಗೆ ಕೊಡುವುದಾಗಿ ಬೆದರಿಸಿದ್ದು ಈ ಸಮಯ ಪಿರ್ಯಾದಿದಾರರು ಹಾಗೂ ಇತರರು ಅಷ್ಟು ಹಣ ಇಲ್ಲವೆಂದು ತಿಳಿಸಿದಾಗ  ಪಿರ್ಯಾದಿದಾರರು ಹಾಗೂ ಇತರರ ಮೋಬೈಲ್ಗಳನ್ನು , ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತು ಯಾವುದೋ ದಾಖಲಾತಿಗೆ ಸಹಿ ಮತ್ತು  ಬೆರಳಚ್ಚು ತೆಗೆದು ಮನೆಯಲ್ಲಿ ಕೂಡಿ ಹಾಕಿ ಮರುದಿನ ದಿನಾಂಕ 08.01.2020 ರಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ಪೊಲೀಸ್ ಎಂದು ಹೇಳಿಕೊಂಡಿದ್ದಾತ  ಬಂದು ಪಿರ್ಯಾದಿಯನ್ನು ಹಾಗೂ ಇತರರನ್ನು ಪೊಲೀಸ್ ಠಾಣೆಗೆಂದು ಹೇಳಿ ಪಿರ್ಯಾದಿಯ ಇನ್ನೋವ ಕಾರಿನಲ್ಲಿ ಸುಮಾರು 15 ಕೀ ಮೀ ದೂರ ಒಂದು ರೆಸಾರ್ಟ್ ನಲ್ಲಿ ಅಕ್ರಮ ಬಂಧನದಲ್ಲಿರಿಸಿರುತ್ತಾನೆ. ಈ ಸಮಯ ಪೊಲೀಸರು ರೆಸಾರ್ಟ್ ಗೆ ಧಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿರುವುದಾಗಿದ್ದು , ಈ ಬಗ್ಗೆ ದಿಲೀಪ್ ಟಿರವರು ನೀಡಿದ ದೂರಿನಂತೆ ದಿನಾಂಕ 08.01.2020 ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ:365,323,384,419,342, ಜೊತೆಗೆ 149 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿದ್ದು,ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಪ್ರಗತಿಯಲ್ಲಿದೆ


Spread the love