ಉಪ್ಪಿನಂಗಡಿ : ಕ್ಷುಲ್ಲಕ ವಿಚಾರಕ್ಕೆ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಮಕ್ಕಳು

Spread the love

ಉಪ್ಪಿನಂಗಡಿ : ಕ್ಷುಲ್ಲಕ ವಿಚಾರಕ್ಕೆ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಮಕ್ಕಳು

ಮಂಗಳೂರು: ಸೀಯಾಳದ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕರಾಯ ನಿವಾಸಿ ಧರ್ನಪ್ಪ ಪೂಜಾರಿ (65) ಎಂದು ಗುರುತಿಸಲಾಗಿದ್ದು ಇವರ ಮಕ್ಕಳಾದ ಮೋನಪ್ಪ ಮತ್ತು ನವೀನ ಎಂಬವರು ತಂದೆಯನ್ನು ಕತ್ತಿಯಿಂದ ಕೊಲೆ ಮಾಡಿದವರೆನ್ನಲಾಗಿದ್ದು, ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಸಿಯಾಳ ವಿಚಾರದಲ್ಲಿ ತಂದೆ ಮಕ್ಕಳೊಳಗೆ ಜಗಳವಾಗಿದ್ದು ಈ ಸಂದರ್ಭ ತಂದೆಗೆ ಮಕ್ಕಳು ಕತ್ತಿಯಿಂದ ಕಡಿದಿದ್ದು, ಗಂಭೀರ ಗಾಯಗೊಂಡ ಧರ್ನಪ್ಪ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love