ಎಂಪಿಇಡಿಎ ವತಿಯಿಂದ ಮೇ 14- 16ರವರೆಗೆ ಅಕ್ವಾ ಅಕ್ವೇರಿಯಾ ಇಂಡಿಯಾ 2017

Spread the love

ಎಂಪಿಇಡಿಎ ವತಿಯಿಂದ ಮೇ 14- 16ರವರೆಗೆ ಅಕ್ವಾ ಅಕ್ವೇರಿಯಾ ಇಂಡಿಯಾ 2017

ಮಂಗಳೂರು: ಏಷ್ಯಾದ ಅತಿ ದೊಡ್ಡ ಪ್ರದರ್ಶನ ಎನಿಸಿಕೊಂಡಿರುವ ಅಕ್ವಾ ಅಕ್ವೇರಿಯಾ ಇಂಡಿಯಾ (ಎಎಐ)ದ 4ನೇ ಆವೃತ್ತಿ ಮೇ 14ರಿಂದ 16ರವರೆಗೆ ನಗರದಲ್ಲಿ ಜರುಗಲಿದೆ. ಜಲಕೃಷಿ ಮತ್ತು ಅಲಂಕಾರಿಕ ಮೀನುಗಾರಿಕೆ ಕ್ಷೇತ್ರದ ಹೊಸ ಹೆಜ್ಜೆಗಳನ್ನು ಪ್ರದರ್ಶಿಸುವುದು ಮತ್ತು ಈ ಕೃಷಿಯಲ್ಲಿ ತೊಡಗಿಕೊಂಡವರು ಹೆಚ್ಚಿನ ಪ್ರಗತಿಯನ್ನು ಕಾಣುವುದು ಹಾಗೂ ಆಮದು ಉದ್ಯಮಿದಲ್ಲಿ ಹೇಗೆ ಹೆಚ್ಚಿನ ಗಳಿಕೆಯನ್ನು ಸಾಧಿಸುವುದಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳುವುದಕ್ಕೆ ವೇದಿಕೆಯಾಗಲಿದೆ.

ಸಾಗರ ಉತ್ಪನ್ನಗಳ ಆಮದು ಮತ್ತು ಅವುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ವಹಿಸುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಭಾಗವಾಗಿರುವ ಸಾಗರ ಉತ್ಪನ್ನಗಳ ಆಮದು ಅಭಿವೃದ್ಧಿ ಪ್ರಾಧಿಕಾರ (ಎಂಪಿಇಡಿಎ) ಸಂಘಟಿಸುತ್ತಿರುವ ಈ ಕಾರ್ಯಕ್ರಮ “ ಸುಸ್ಥಿರ ಕೃಷಿಯಲ್ಲಿ ವೈವಿಧ್ಯತೆ’ ಎಂಬ ವಿಷಯದಡಿ ಮೂರು ದಿನಗಳ ಕಾಲ ಜರುಗಲಿದೆ.

ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಯುವ ಜನ ಸೇವಾ ಹಾಗೂ ಕ್ರೀಡಾ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಡಾ ಕೆ ಹರಿಬಾಬು ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸುಸ್ಥಿರವಾದ ಜಲಕೃಷಿಯಲ್ಲಿ ವೈವಿಧ್ಯತೆ ಮತ್ತು ತೀವ್ರತೆಯನ್ನು ತರುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಮತ್ತು ಅಲಂಕಾರಿಕ ಮೀನುಗಳ ತಳಿ ಅಭವೃದ್ಧಿಯ ಹೊಸ ಬೆಳವಣಿಗೆಗಳನ್ನು ಅಕ್ವಾ ಅಕ್ವೇರಿಯಾ ಇಂಡಿಯಾ ಪ್ರದರ್ಶಿಸಲಿದೆ.

ಅಕ್ವಾ ಅಕ್ವೇರಿಯಾ ಇಂಡಿಯಾ 2017, ಜಲಕೃಷಿ ಮಾಡುವ ಕೃಷಿಕರಿಗೆ ಮತ್ತು ಅಲಂಕಾರಿಕ ಮೀನುಗಳನ್ನು ಸಾಕುವವರಿಗೆ ಜಲಕೃಷಿ ಹೊಸ ಮಾಹಿತಿ ಮತ್ತು ಪ್ರಾಯೋಗಿಕ ಅಭ್ಯಾಸಗಳ ಮಾಹಿತಿಯನ್ನು ನೀಡಲಿದೆ.

ಕರ್ನಾಟಕದಲ್ಲಿ ಇದೇ ಮೊದಲಬಾರಿಗೆ ಎಂಪಿಇಡಿಎ ಅವರು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಅಕ್ವಾ ಅಕ್ವೇರಿಯಾ ಇಂಡಿಯಾವನ್ನು ಮೊದಲ ಬಾರಿಗೆ ಪಶ್ಚಿಮ ಕರಾವಳಿಯಲ್ಲಿ ಸಂಘಟಿಸಲಾಗುತ್ತಿದೆ. ಮೊದಲ ಎಎಐಯನ್ನು 2011ರಲ್ಲಿ ಚೆನ್ನೈನಲ್ಲಿ 2013 ಮತ್ತು 2015ರ ಎಎಐ ಅನ್ನು ವಿಜಯವಾಡದಲ್ಲಿ ಆಯೋಜಿಸಲಾಗಿತ್ತು.

ಕೃಷಿಕರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜಲಕೃಷಿ ಮಾಡುವಂತಾಗಬೇಕು ಮತ್ತು ಅಲಂಕಾರಿಕ ಮೀನುಗಳ ಉತ್ಪತ್ತಿ ಮತ್ತು ಆಮದು ಹೆಚ್ಚಾಗಬೇಕು, ಜೊತೆಗೇ ಉದ್ಯೋಗ ಸೃಷ್ಟಿಯೂ ಆಗಬೆಕು ಎಂಬುದು ಅಕ್ವ ಅಕ್ವೇರಿಯಾ ಇಂಡಿಯಾದ ಗುರಿಯಾಗಿದೆ. ಜಲಕೃಷಿ ಮತ್ತು ಅಲಂಕಾರಿಕ ಮೀನುಗಾರಿಕೆಗಳ ಬಗ್ಗೆ ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬಂದರು ನಗರದಲ್ಲಿ ಇದೊಂದು ಮಹತ್ವದ ಕಾರ್ಯಕ್ರಮವಾಗಲಿದೆ.

ಭಾರತ ಮತ್ತು ವಿದೇಶಗಳಿಂದ 3000 ಸಾವಿರ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, 200 ಸ್ಟಾಲ್‍ಗಳಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು, ತಂತ್ರಜ್ಞಾನಗಳು, ಮಷಿನ್‍ಗಳು ಮತ್ತು ಆಮದು ಅವಲಂಬಿಸಿದ್ದ ಜಲಕೃಷಿಗೆ ಅಗತ್ಯವಾಗುವ ಪರಿಕರಗಳು ಮತ್ತು ಅಲಂಕಾರಿಕ ಮೀನುಗಳಿಗೆ ಸಂಬಂಧಿಸಿದ ವಿಷಯಗಳು ಪ್ರದರ್ಶನಗೊಳ್ಳಲಿವೆ. ಕೃಷಿಕರು, ಉದ್ಯಮಿಗಳು, ಹ್ಯಾಚರಿ ಆಪರೇಟರ್‍ಗಳು, ಜಲಚರಗಳ ಆಹಾರ ಉತ್ಪಾದಕರು, ಪೂರೈಕೆದಾರರು, ಉತ್ಪಾದಕರು ಮತ್ತು ಜಲಕೃಷಿಗೆ ಸಂಬಂಧಿಸಿದ ಪೂರೈಕೆದಾರರು ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸಲಿದ್ದು, ಈ ದೊಡ್ಡ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ.

ಭಾರತೀಯ ತಜ್ಞರ ಜೊತೆಗೆ, ಜಲಕೃಷಿಯಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದ ತಜ್ಞರು, ಆಸ್ಟ್ರೇಲಿಯಾ, ಅಮೆರಿಕ, ಸಿಂಗಪುರ್, ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷಿಯiÁ ಮತ್ತು ಇಸ್ರೇಲ್‍ನಿಂದ ಆಗಮಿಸಲಿದ್ದು, ವಿವಿಧ ವಿಷಯಗಳನ್ನು ಕಾರ್ಯಕ್ರಮದಲ್ಲಿ ಕುರಿತು ಮಾಹಿತಿ ನೀಡಲಿದ್ದಾರೆ.

ಜಲಕೃಷಿಯ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲೇ 2ನೇ ರಾಷ್ಟ್ರವಾಗಿದ್ದು, ಕಪ್ಪೆ ಚಿಪ್ಪುಗಳ ರಫ್ತಿನಲ್ಲಿ 2ನೇ ಅತಿ ದೊಡ್ಡ ದೇಶ ಎನಿಸಿಕೊಂಡಿದೆ. ಯುರೋಪ್‍ಗೆ ಅತಿ ಹೆಚ್ಚು ಕಪ್ಪೆ ಚಿಪ್ಪು ರಫ್ತು ಮಾಡುವುದಲ್ಲದೆ, ಅಮೆರಿಕಕ್ಕೆ ಸಾಗರಜೀವಿಗಳ ರಫ್ತಿನಲ್ಲೂ ಎರಡನೆ ಸ್ಥಾನವನ್ನು ಪಡೆದಿದ್ದು, ಕಳೆದ ಐದು ವರ್ಷಗಳಲ್ಲಿ ಮಹತ್ವದ ಪ್ರಗತಿಯನ್ನು ಕಂಡಿದೆ. 2014-15ರಲ್ಲಿ 5.5 ಬಿಲಿಯನ್ ಅಮೆರಿಕನ್ ಡಾಲರ್‍ನಷ್ಟು ಗಳಿಕೆಯನ್ನು ಸಾಧಿಸಿದೆ. 2015-16ರ ಅವಧಿಯಲ್ಲಿ 4.7 ಬಿಲಿಯನ್ ಡಾಲರ್ ಮೌಲ್ಯದ ಆಹಾರಕ್ಕಾಗಿ ಸಾಗರ ಜೀವಿಗಳನ್ನು 9,45, 892 ಮೆಟ್ರಿಕ್‍ಟನ್ ರಫ್ತು ಮಾಡಿದೆ.

ಭಾರತದಿಂದ ರಫ್ತಾಗುವ ಸಾಗರ ಉತ್ಪನ್ನದ ಒಟ್ಟು ಪ್ರಮಾಣದಲ್ಲಿ ಶೇ. 70ರಷ್ಟು ಜಲಕೃಷಿಯಿಂದಲೇ ಲಭಿಸುತ್ತದೆ. ಅಮೆರಿಕ, ಆಗ್ನೇಯ ಏಷ್ಯಾಕ್ಕೆ ಅತಿ ಹೆಚ್ಚು ಸಮುದ್ರಾಹಾರವನ್ನು ಪೂರೈಸುವುದು ಭಾರತದೇಶ. ಶೀಲತೀಕೃತ ಮೀನು ಅಲ್ಲದೆ, ಕಪ್ಪೆ ಚಿಪ್ಪು ಕೂಡ ರಫ್ತಾಗುವ ಅತಿ ಹೆಚ್ಚು ಬೇಡಿಕೆ ಇರುವ ಪದಾರ್ಥ.

ಅಲಂಕಾರಿಕ ಮೀನು ಮತ್ತು ಜಲ ಸಸ್ಯಗಳ ಉದ್ಯಮಗಳು ಅಗಾಧವಾದ ಆರ್ಥಿಕ ಸಾಧ್ಯತೆಗಳು ಮತ್ತು ಪ್ರಗತಿ ಅವಕಾಶಗಳಿರುವುದರಿಂದ ವೇಗವಾಗಿ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಜಾಗತಿಕವಾಗಿ 2500 ಪ್ರಬೇಧದ ಮೀನುಗಳು ಮಾರಾಟವಾಗುತ್ತಿದ್ದು, ಅವುಗಳ ಪೈಕಿ 30-35ಪ್ರಬೇಧಗಳು ಸಿಹಿನೀರಿನ ಮೀನು ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಶೇ. 90ಕ್ಕೂ ಹೆಚ್ಚು ಸಿಹಿ ನೀರಿನ ಮೀನುಗಳು ಸಂಗ್ರಹಿಸಿ ಬೆಳೆಸಬಹುದಾಗಿದೆ. ಸಾಗರದ ಜೀವಿಗಳ ಪೈಕಿ ಇವುಗಳ ಸಂಖ್ಯೆ ಕಡಿಮೆ.

ಮೇ 14ರ ಮಧ್ಯಾಹ್ನದಿಂದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದುಉ. 100 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ವಿದ್ಯಾರ್ಥಿಗಳು ಜಲಕೃಷಿ ಮತ್ತು ಅಕ್ವೇರಿಯಂ ಕುರಿತು ತಿಳಿಯಲು ಇದೊಂದು ಸದಾವಕಾಶವಾಗಿದೆ. ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿಯೊಂದಿಗೆ 20 ರೂ.ಗಳಿಗೆ ಪ್ರವೇಶ ಪಾಸ್ ಪಡೆದು ಪ್ರದರ್ಶನ ವೀಕ್ಷಿಸಬಹುದು.


Spread the love