Spread the love
ಎಕೆ ಎಮ್ ಎಸ್ ಬಸ್ಸಿನ ಮ್ಹಾಲಕ, ರೌಡಿ ಶೀಟರ್ ಸೈಫುದ್ದೀನ್ ಹತ್ಯೆ
ಉಡುಪಿ: ರೌಡಿ ಶೀಟರ್ ಸೈಫುದ್ದೀನ್ ನನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿದ ಘಟನೆ ಶನಿವಾರ ಮಲ್ಪೆ ಸಮೀಪದ ಕೊಡವೂರು ಬಳಿ ನಡೆದಿದೆ.
ಮಣಿಪಾಲದಲ್ಲಿ ಸಾರಿಗೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದ ಸೈಫುದ್ದೀನ್, ಅಪರಿಚಿತ ದಾಳಿಕೋರರು ಗುಂಡು ಹಾರಿಸಿದಾಗ ದಾಳಿಗೆ ಗುರಿ ಯಾದರು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಗುಂಡೇಟಿನ ಬಳಿಕ ಆರೋಪಿಗಳು ಅವರನ್ನು ಮತ್ತಷ್ಟು ಹಲ್ಲೆಗೊಳಪಡಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿದ್ದು ಮಾಹಿತಿ ಪಡೆದಿದ್ದಾರೆ. ಪ್ರಕರಣದ ಸಂಬಂಧ ಮಲ್ಪೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Spread the love