ಎಜೆ ಆಸ್ಪತ್ರೆ ವತಿಯಿಂದ ಹೃದ್ರೋಗ ಸಮ್ಮೇಳನ “ಸ್ಪೆಕ್ರೈಮ್ – 2026”
ಒಂದು ದಿನದ ಹೃದ್ರೋಗ ಸಮ್ಮೇಳನ “ಸ್ಪೆಕ್ರೈಮ್ – 2026” ಅನ್ನು ಶನಿವಾರ, 10 ಜನವರಿ 2026ರಂದು, ಕೊಡ್ಯಾಲಬೈಲ್ನಲ್ಲಿರುವ ಹೋಟೆಲ್ ‘ದಿ ಓಶನ್ ಪರ್ಳ್’ ನಲ್ಲಿ ಆಯೋಜಿಸಲಾಗಿದೆ.
ಈ ಸಮ್ಮೇಳನವು 2012ರಲ್ಲಿ ಆರಂಭವಾದ ‘ಸ್ಪೆಕ್ಟಮ್’ ಕಾರ್ಯಕ್ರಮದ 15ನೇ ಆವೃತ್ತಿ (ಕ್ರಿಸ್ಟಲ್ ಜುಬಿಲಿ ಆಚರಣೆ) ಆಗಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸುವ ಸುಮಾರು 250 ಪ್ರತಿನಿಧಿಗಳು, ಇದರಲ್ಲಿ ಹೃದ್ರೋಗ ತಜ್ಞರು, ವೈದ್ಯರು, ಹೃದ್ರೋಗ ಮತ್ತು ವೈದ್ಯಕೀಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಆಗಮಿಸುವ ಖ್ಯಾತ ವಕ್ತಾರರು ಈ ಸಮ್ಮೇಳನವನ್ನು ಅಲಂಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೃದ್ರೋಗ ಕ್ಷೇತ್ರದ ವಿವಿಧ ವಿಷಯಗಳ ಕುರಿತು ಸರಳ ಹಾಗೂ ಸ್ಪಷ್ಟ ಉಪನ್ಯಾಸಗಳು, ಚರ್ಚೆಗಳು ಮತ್ತು ಸಂವಾದಾತ್ಮಕ ಅಧಿವೇಶನಗಳು ನಡೆಯಲಿವೆ.
ಈ ವಿಷಯವನ್ನು ಸಮ್ಮೇಳನದ ಆಯೋಜನಾ ಅಧ್ಯಕ್ಷರಾದ ಡಾ. ಬಿ. ವಿ. ಮಂಜುನಾಥ್, ಮುಖ್ಯ ಹೃದ್ರೋಗ ತಜ್ಞರು, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಪ್ರಾಧ್ಯಾಪಕರು ಮತ್ತು ವಿಭಾಗಾಧ್ಯಕ್ಷರು, ಹೃದ್ರೋಗ ವಿಭಾಗ, ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಮಂಗಳೂರು – ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













