ಎಸ್‌ಪಿ ಅಣ್ಣಾಮಲೈ ವರ್ಗಾವಣೆ ರದ್ದು

Spread the love

ಎಸ್‌ಪಿ ಅಣ್ಣಾಮಲೈ ವರ್ಗಾವಣೆ ರದ್ದು

ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರ ವರ್ಗಾವಣೆ ಆದೇಶವನ್ನು ಭಾನುವಾರ ರದ್ದುಗೊಳಿಸಲಾಗಿದೆ.

ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಪಿಎಆರ್‌) ಅಧೀನ ಕಾರ್ಯದರ್ಶಿ ಮಹಂತಯ್ಯ ಎಸ್.ಹೊಸಮಠ ಅವರು ಈ ಆದೇಶ ನೀಡಿದ್ದಾರೆ. ಮುಂದಿನ ಸೂಚನೆ ನೀಡುವವರೆಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಮುಂದುವರಿಯುವಂತೆಅಣ್ಣಾಮಲೈ ಅವರಿಗೆ ಆದೇಶದಲ್ಲಿ ಅವರು ತಿಳಿಸಿದ್ದಾರೆ.

ಇದೇ 17ರಂದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಸಂಜೆ ವೇಳೆಗೆ ಅಣ್ಣಾಮಲೈ ಅವರನ್ನು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಿದ್ದರು.


Spread the love