ಎ.ಜೆ. ಆಸ್ಪತ್ರೆ ಪ್ರೋಸ್ಟೇಟ್ ವೃದ್ಧಿಗೆ ‘ರೀಜಮ್’ ಹೊಸ ಥೆರಪಿ ಪರಿಚಯ ದಕ್ಷಿಣ ಕನ್ನಡ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರಥಮ ಪ್ರಯೋಗ

Spread the love

ಎ.ಜೆ. ಆಸ್ಪತ್ರೆ ಪ್ರೋಸ್ಟೇಟ್ ವೃದ್ಧಿಗೆ “ರೀಜಮ್” ಹೊಸ ಥೆರಪಿ ಪರಿಚಯ ದಕ್ಷಿಣ ಕನ್ನಡ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪ್ರಥಮ ಪ್ರಯೋಗ

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು, ವಿಸ್ತರಿಸಿದ ಪ್ರಾಸ್ಟೇಟ್‌ಗೆ ಚಿಕಿತ್ಸೆ ನೀಡುವ, ಅತ್ಯಾಧುನಿಕ ಹಾಗೂ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾದ REZUM ಅನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಪರಿಚಯಿಸಿದೆ. ಇದರ ಬಗ್ಗೆ ಘೋಷಿಸಲು ನಾವು ಹೆಮ್ಮೆ ಪಡುತ್ತೇವೆ.

ರೀಜಮ್ ಥೆರಪಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ನೀರಿನ ವಾಷ್ಪದ ಶಕ್ತಿಯನ್ನು ಬಳಸುವ ಪರಿಣಾಮಕಾರಿಯಾದ ವಿಧಾನವಾಗಿದೆ. ಇದು ದೀರ್ಘಕಾಲದ ಮೂತ್ರ ತೊಂದರೆಗಳಿಗೆ ಪರಿಹಾರ ನೀಡುತ್ತದೆ ಮತ್ತು ಲೈಂಗಿಕ, ಮೂತ್ರ ಕ್ರಿಯೆಗಳ ರಕ್ಷಣೆ ಮಾಡುತ್ತದೆ. ದಿನದೊಳಗಿನ ಚಿಕಿತ್ಸೆ (ಡೇ ಕೇರ್) ಆಗಿದ್ದು, ಇದು ಸುರಕ್ಷಿತ ಮತ್ತು ಸೌಲಭ್ಯಪೂರ್ಣವಾಗಿದೆ.

ರೋಗಿಗಳಿಗೆ ಈ ಚಿಕಿತ್ಸೆಯಿಂದ ಲಭ್ಯವಾಗುವ ಲಾಭಗಳು:

ಪ್ರಕ್ರಿಯೆ ಸಮಯ ಬಹಳ ಕಡಿಮೆ

ಚಿಕಿತ್ಸೆ ನೋವಿಲ್ಲದೆ ನಡೆಯುತ್ತದೆ

ರಕ್ತಹಾನಿಯಿಲ್ಲ

ಆಸ್ಪತ್ರೆ ವಾಸದ ಅವಧಿ ಬಹಳ ಕಡಿಮೆ

ಯಾವುದೇ ಗಂಭೀರ ಪಾರ್ಶ್ವ ಪರಿಣಾಮಗಳಿಲ್ಲ

ಈ ಚಿಕಿತ್ಸೆಯನ್ನು ಈಗಾಗಲೇ ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಚಿಕಿತ್ಸೆ ಪಡೆದ ರೋಗಿಗಳು ತಮ್ಮ ಮೂತ್ರದ ತೊಂದರೆಗಳಿಂದ ಸಾಕಷ್ಟು ಶಮನ ಪಡೆದಿದ್ದು, ಅವರು ಬೇಗನೆ ಚೇತರಿಸಿಕೊಂಡಿದ್ದಾರೆ.

ಡಾ. ಪ್ರಶಾಂತ್ ಮಾರ್ಲಾ, ವೈದ್ಯಕೀಯ ನಿರ್ದೇಶಕರು ಮತ್ತು ಯುರಾಲಜಿ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ:

“ರೀಜಮ್ ಥೆರಪಿಯ ಮೂಲಕ ಜಗತ್ತಿನ ತಂತ್ರಜ್ಞಾನವನ್ನು ನಮ್ಮ ಜನರಿಗೆ ತಲುಪಿಸುತ್ತಿದ್ದೇವೆ. ಇದು ಪುರುಷರ ಪ್ರೋಸ್ಟೇಟ್ ಸಮಸ್ಯೆಗಳಿಗೆ ಅತಿ ಸುಲಭ, ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಈಗಾಗಲೇ ಮಾಡಿರುವ ಪ್ರಕರಣಗಳು ಯಶಸ್ವಿಯಾಗಿ ಫಲಿತಾಂಶ ತೋರಿಸುತ್ತಿವೆ. ನಮ್ಮ ಜಿಲ್ಲೆಯಲ್ಲಿ ನಾವು ಮೊದಲಾಗಿ ಇದನ್ನು ಪರಿಚಯಿಸೆರುವುದು ನೆಮಗೆ ಹೆಮ್ಮೆ.

ಈ ಸಾಧನೆಯ ಮೂಲಕ ಎ.ಜೆ. ಆಸ್ಪತ್ರೆಯು ತನ್ನ ವೈದ್ಯಕೀಯ ಗುಣಮಟ್ಟ ಮತ್ತು ಹೊಸ ತಂತ್ರಜ್ಞಾನದ ಮೇಲಿರುವ ನಿಷ್ಠೆಯನ್ನು ಮತ್ತಷ್ಟು ಬಲಪಡಿಸಿದೆ. ಇದರೊಂದಿಗೆ ಕರಾವಳಿ ಕರ್ನಾಟಕದ ರೋಗಿಗಳಿಗೆ ಅತ್ಯಾಧುನಿಕ ಮೂತ್ರಾಂಗ ಸಂಬಂಧಿತ ಚಿಕಿತ್ಸೆಗಳು ಈಗ ಲಭ್ಯವಾಗಿವೆ.


Spread the love
Subscribe
Notify of

0 Comments
Inline Feedbacks
View all comments