ಎ.ಬಿ.ವಿ.ಪಿ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

Spread the love

ಎ.ಬಿ.ವಿ.ಪಿ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಪ್ರಾಂತ್ಯದ 39ನೇ ರಾಜ್ಯ ಸಮ್ಮೇಳನದ ಆತಿತ್ಯವನ್ನು ಮಂಗಳೂರು ವಿಭಾಗ ವಹಿಸಲಿದೆ. 20 ವರ್ಷಗಳ ಬಳಿಕ ಮಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭಗೊಂಡಿದೆ.

ಫೆಬ್ರವರಿ 7 ರಿಂದ 9 ರವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಮ್ಮೇಳನ ನಡೆಯಲಿದೆ. ಇದರಲ್ಲಿ ರಾಜ್ಯದ 15 ವಿಭಾಗಗಳಿಂದ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ವಿವಿಧ ಘೋಷ್ಠಿಗಳಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತಗಾರರು ಸಮ್ಮೇಳನದಲ್ಲಿ ಪಾಲ್ಗೊಂಡು ಶೈಕ್ಷಣಿಕ, ಸಾಮಾಜಿಕ ಸಮಸ್ಯೆ ಮತ್ತು ಸವಾಲುಗಳ ಕುರಿತು ಚರ್ಚಿಸಲಿದ್ದಾರೆ. ಎ.ಬಿ.ವಿ.ಪಿ ರಾಷ್ಟ್ರೀಯ ಸಂಘಟನಾ ಪ್ರಮುಖರು, ರಾಜ್ಯ ಸಂಘಟನಾ ಪ್ರಮುಖರು ಸಮ್ಮೇಳನದಲ್ಲಿ ಭಾಗಿಗಳಾಗಲಿದ್ದಾರೆ. ಇದರ ಅಂಗವಾಗಿ ದಿನಾಂಕ 08.01.2020ರಂದು ಸಂಜೆ 5.30ಕ್ಕೆ ಮಂಗಳೂರಿನ ಓಶಿಯನ್ ಪರ್ಲ್ ನಲ್ಲಿ ಸ್ವಾಗತ ಸಮಿತಿ ಸಭೆಯನ್ನು ಕರೆಯಲಾಗಿತ್ತು ಮತ್ತು ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಾಪುರ ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಕೆ.ಸಿ ನಾಯಕ್, ಎಕ್ಸ್ಪರ್ಟ್ ಕಾಲೇಜಿನ ಮುಖ್ಯಸ್ಥರಾದ ನರೇಂದ್ರ ನಾಯಕ್, ನಿತ್ಯಾನಂದ ಶೆಟ್ಟಿ, ಗಿರೀಶ್ ಆಳ್ವ, ಸಿ.ಎ ಶಾಂತರಾಮ್ ಶೆಟ್ಟಿ, ಚ.ನ ಶಂಕರರಾವ್, ಪೆÇ್ರ ಬಿ.ಎಲ್ ಧರ್ಮ, ಕೇಶವ ಬಂಗೇರ, ರಮೇಶ್ ಕೆ, ರವಿಚಂದ್ರ ಪಿ, ಬಸವೇಶ್ ಕೋರಿ, ಉಪಸ್ಥಿತರಿದ್ದರು.


Spread the love