ಒಳಚರಂಡಿ ಯೋಜನೆ ಕಾಲಮಿತಿಯೊಂದಿಗೆ ಮುಗಿಯಲಿ – ಕೆ. ವಿಕಾಸ್ ಹೆಗ್ಡೆ

Spread the love

ಒಳಚರಂಡಿ ಯೋಜನೆ ಕಾಲಮಿತಿಯೊಂದಿಗೆ ಮುಗಿಯಲಿ – ಕೆ. ವಿಕಾಸ್ ಹೆಗ್ಡೆ

ಕುಂದಾಪುರ ಪುರಸಭೆಯ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಯ ಕಾಯಕಲ್ಪಕ್ಕೆ ನಗರಾಭಿವೃದ್ಧಿ ಸಚಿವರು ಹೆಚ್ಚುವರಿ ಅನುದಾನವನ್ನು ನೀಡುವ ಭರವಸೆಯನ್ನು ನೀಡಿರುವುದು ಅತ್ಯಂತ ಸಂತೋಷದ ವಿಚಾರವೆಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಆದರೆ ಈಗಾಗಲೇ ಬಹು ನಿರೀಕ್ಷೆಯ ಒಳಚರಂಡಿ ಯೋಜನೆಯು ನಿಗದಿತ ಅವಧಿಯಲ್ಲಿ ಮುಗಿಯದೆ ಇರಲು ಕಾರಣ ವೆಟ್ ವೆಲ್ ಮತ್ತು ಎಸ್ ಟಿ ಪಿ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಗುರುತಿಸಿ ಅದು ಖಾಸಗಿ ಸ್ಥಳವಾಗಿದ್ದರೆ ಅದನ್ನು ಖರೀದಿ ಮಾಡಿಯೋ ಇಲ್ಲಾ ಭೂ ಸ್ವಾದಿನ ಪ್ರಕ್ರಿಯೆಗಳಾದ 4(1) ಹಾಗೂ 6(1) ಪ್ರಕಿಯೆಗಳನ್ನು ಮಾಡದೆ ಇದ್ದದ್ದು ಈ ಮಹತ್ವದ ಯೋಜನೆ ಹಿನ್ನಡೆಗೆ ಕಾರಣ. ಅದರ ಜೊತೆ ಇಂದೂ ಕೂಡ ವೆಟ್ ವೆಲ್ ಮತ್ತು ಎಸ್ ಟಿ ಪಿ ನಿರ್ಮಾಣಕ್ಕೆ ಸ್ಥಳ ಗುರುತಿಸಿದ ಭಾಗದ ಸಾರ್ವಜನಿಕರ ವಿರೋಧವಿರುವುದು ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಜನಪ್ರತಿನಿದಿನಗಳಿಗೆ ಹಾಗೂ ಪುರಸಭಾ ಆಡಳಿತಕ್ಕೆ ತಿಳಿದ ವಿಚಾರ. ಆದರೆ ಈಗ ಸರ್ಕಾರ ಒಳಚರಂಡಿ ಯೋಜನೆ ಮುಕ್ತಾಯಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದರೂ ಸಹ ವೆಟ್ ವೆಲ್ ಮತ್ತು ಎಸ್ ಟಿ ಪಿ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಿ ಅದನ್ನು ಸಾರ್ವಜನಿಕರ ವಿರೋಧವಿಲ್ಲದ ರೀತಿಯಲ್ಲಿ ಅದರ ಸಾದಕ ಬಾದಕಗಳ ಕುರಿತು ಜನಸಾಮಾನ್ಯರ ಅನುಮಾನಗಳನ್ನು ನಿವಾರಣೆ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಬಲಾತ್ಕಾರದ ಕ್ರಮಕೂಡ ಅನುಸರಿಸಬಾರದು. ಹಾಗೂ ಮೊದಲು ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಕಂಪನಿ ಗುಣಮಟ್ಟ ಕಾಮಗಾರಿ ನಿರ್ವಹಿಸದೆ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳಿದ್ದು ಮುಂದುವರಿದ ಕಾಮಗಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ನಡೆಸಬೇಕು ಹಾಗೂ ಗುಣಮಟ್ಟದ ಕಾಮಗಾರಿಗೆ ಕ್ರಮವಹಿಸಬೇಕು ಎಂದು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹ


Spread the love
Subscribe
Notify of

0 Comments
Inline Feedbacks
View all comments