ಓಸ್ಕರ್ ಫೆರ್ನಾಂಡಿಸ್ ಯುವ ನಾಯಕತ್ವವನ್ನು ಬೆಳೆಸಿದವರು – ಅಭಯಚಂದ್ರ ಜೈನ್

Spread the love

ಓಸ್ಕರ್ ಫೆರ್ನಾಂಡಿಸ್ ಯುವ ನಾಯಕತ್ವವನ್ನು ಬೆಳೆಸಿದವರು – ಅಭಯಚಂದ್ರ ಜೈನ್

ಉಡುಪಿ: ಓಸ್ಕರ್ ಫೆರ್ನಾಂಡಿಸ್ ಪಕ್ಷದಲ್ಲಿ ತಮಗಿರುವ ಪ್ರಭಾವವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳದೆ ಯುವ ನಾಯಕತ್ವವನ್ನು ಬೆಳೆಸುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾದರು. ಅವರ ನಿಧನದ ಬಳಿಕವೂ ಕಾರ್ಯಕರ್ತರು ಅವರನ್ನು ನೆನಪಿಸುವಂತಹ ಸಜ್ಜನ ರಾಜಕಾರಣಿಯಾಗಿದ್ದಾರೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಹೇಳಿದರು.

ಅವರು ಶನಿವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಓಸ್ಕರಣ್ಣನ ಕನಸಿನ ಮತ್ತು ನನಸಿನ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಓಸ್ಕರ್ ಫೆರ್ನಾಂಡಿಸ್ ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಓಸ್ಕರ್ ಫೆರ್ನಾಂಡಿಸ್ ತಮ್ಮ ಜೀವನದುದ್ದಕ್ಕೂ ಜನರ ಭಾವನೆಗಳಿಗೆ ಬೆಲೆ ನೀಡಿದ ಒರ್ವ ಮುತ್ಸದ್ದಿ ನಾಯಕ. ಯಾವುದೇ ಪ್ರಚಾರ ಬಯಸದೆ ಅಭಿವೃದ್ಧಿ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದರು. ಶಿಕ್ಷಣಕ್ಕೆ ಸದಾ ಬೆಂಬಲ ನೀಡುವ ಮೂಲಕ ಆ ಕ್ಷೇತ್ರಕ್ಕೆ ಯಾವುದೇ ರಾಜಕಾರಣಿ ಅನುದಾನ ಕೇಳಿದಷ್ಟು ಕೊಡುವ ಉದಾರ ಮನಸ್ಸನ್ನು ಹೊಂದಿದ್ದರು. ಅವರ ಸಂಯಮ ಹಾಗೂ ತಾಳ್ಮೆ ಇಂದಿನ ಯುವ ರಾಜಕಾರಣಿಗಳಿ ಮಾದರಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ ತನ್ನ ಇಂದಿನ ರಾಜಕೀಯ ಏಳಿಗೆಯಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಸಹಕಾರ ಮತ್ತು ಬೆಂಬಲ ಮಹತ್ತರವಾದುದು. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದ ನಾಯಕ ಅವರಾಗಿದ್ದರು. ಅವರ ದೆಹಲಿಯ ಕಚೇರಿಗೆ ಯಾವುದೇ ರೀತಿಯ ಅಪಾಯ್ಟೆಂಟ್ ಮೆಂಟ್ ಪಡೆಯದೆ ನೇರವಾಗಿ ಹೋಗಿ ಯಾವುದೇ ಕೆಲಸವನ್ನು ಮಾಡಿಕೊಂಡು ಬರಲು ಸಾಧ್ಯವಾಗುತ್ತಿತ್ತು. ಬೆಳಗಿನ ಜಾವ 3 ಗಂಟೆಯ ವರೆಗೂ ಸಹ ತಮ್ಮ ಕಚೇರಿಯಲ್ಲಿ ತಮ್ಮ ಜಿಲ್ಲೆಯ ರಾಜ್ಯದ ಜನರ ನೋವಿಗೆ ದನಿಯಾಗುತ್ತಿದ್ದ ಅಪರೂಪದ ರಾಜಕಾರಣಿ ಅವರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಸಹಿತ ಹಲವು ನಾಯಕರು ಮಾತನಾಡಿದರು.

ಬೆಳಗ್ಗಿನ ಹೊತ್ತು ಹಾಗೂ ಸೆ. 7 ರಂದು ನಡೆದ ವಿವಿಧ ಸ್ಪರ್ಧೆಗಳಲ್ಲಿ, ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ ಆರ್ ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಮ್ ಎ ಗಫೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯ ಕ್ಷರಾದ ರಮೇಶ್ ಕಾಂಚನ್, ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಹರಿಪ್ರಸಾದ್ ರೈ ರಾಜುಪೂಜಾರಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ಆಸ್ಕರ್ ಫೆರ್ನಾಂಡಿಸ್ ಅವರ ಧರ್ಮಪತ್ನಿ ಬ್ಲೋಸಮ್ ಫೆರ್ನಾಂಡಿಸ್, ಮುಖಂಡರಾದ ಸೂರ್ಯ ಪ್ರಕಾಶ್, ಮೇರಿ ಶ್ರೇಷ್ಠ, ಓಸ್ಕರಣ್ಣನ ಕನಸಿನ ಮತ್ತು ನನಸಿನ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಸಮಿತಿಯ ಮಹಾಬಲ ಕುಂದರ್, ಯತೀಶ್ ಕರ್ಕೇರಾ, ಮುರಳಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಉಪೇಂದ್ರ ಮೆಂಡನ್, ಮನೋಜ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments