ಕಂಬಳಕ್ಕೆ ಇನ್ನೂ 4 ತಿಂಗಳು ಬಾಕಿ; ಆಗಲೇ ‘ಕುದಿ’ ಆರಂಭ
ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳ ಆರಂಭಕ್ಕೆ ಇನ್ನೂ ಸುಮಾರು ಕನಿಷ್ಠ ನಾಲ್ಕು ತಿಂಗಳು ಬಾಕಿ ಇದೆ. ಆದರೆ ಮುಂದಿನ ಕಂಬಳ ಋತುವಿನ ಪೂರ್ವಭಾವಿಯಾಗಿ “ಕುದಿ ಕಂಬಳ ಆಗಲೇ ಆರಂಭವಾಗಿದೆ
ಕುದಿ ಕಂಬಳ ಎಂದರೆ ಕಂಬಳ ಋತುವಿನ ಮುನ್ನ ಕೋಣಗಳ ತಾಲೀಮಿಗೆ ಅವಕಾಶ, ಎಪ್ರಿಲ್ ತಿಂಗಳಲ್ಲಿ ಕಂಬಳದ ಋತು ಮುಕ್ತಾಯವಾಗಿ ನವೆಂಬರ್‌ನಲ್ಲಿ ಶುರುವಾಗ ಹೊಸ ಋತುವಿನ ನಡುವೆ ಕೋಣಗಳು ಮತ್ತು ಓಟಗಾರ ರಿಗೆ ಸಿದ್ಧತೆಗಾಗಿ ನಡೆಸಲಾಗುತ್ತದೆ. ಕೋಣ ಗಳ ಓಟದ ಟೈಮಿಂಗ್ಸ್ ಬೇರೆ ಬೇರೆ ಕೋಣಗಳ ಜತೆ ಹೊಂದಾಣಿಕೆಯ ಓಟದ ತಾಲೀಮು ಕೂಡಾ ಇಲ್ಲಿ ನಡೆಯುತ್ತದೆ. ಜತೆಗೆ ಒಳ್ಳೆಯ ಕೋಣಗಳ ಗಮನಿಸುವಿಕೆ, ಖರೀದಿಗೂ ವೇದಿಕೆಯಾಗುತ್ತದೆ.
ಸಾಮಾನ್ಯವಾಗಿ ಕಂಬಳ ಋತು ಆರಂಭಕ್ಕೆ ಒಂದೆರಡು ತಿಂಗಳ ಮೊದಲು ಪ್ರಮುಖ ಕಂಬಳ ಕರೆಗಳಲ್ಲಿ ಕುದಿ ಕಂಬಳಗಳು ಆರಂಭವಾಗುತ್ತವೆ. ಕರೆಗಳನ್ನು ಸ್ವಚ್ಛಗೊಳಿಸಿ, ನೀರು ಹರಿಸಿ ಕೋಣಗಳನ್ನು ಓಡಿಸಲಾಗುತ್ತದೆ. ಕೆಲವು ಕಡೆ ಕಂಬಳ ಕೋಣಗಳ ಯಜಮಾನರೇ ಈ ವ್ಯವಸ್ಥೆ ಮಾಡಿಕೊಂಡರೆ, ಕೆಲವು ಕಡೆ ಕಂಬಳ ಸಂಘಟಕರು ಮಾಡುತ್ತಾರೆ.
ಈಗಾಗಲೇ ಮೀಯಾರುವಿನಲ್ಲಿ ಕುದಿ ನಡೆದಿದೆ. ನರಿಂಗಾನ ಕಂಬಕೋತ್ಸವಕ್ಕೆ ಪೂರ್ವಭಾವಿಯಾಗಿ ಜು. 13ರಂದು ಬೆಳಗ್ಗೆ 7.30ಕ್ಕೆ ಕುದಿ ಕಂಬಳ ಮುಹೂರ್ತ ನಡೆಸಲು ನರಿಂಗಾನ ಕಂಬಳ ಸಮಿತಿ ಅಧ್ಯಕ್ಷ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ನರಿಂಗಾನ ಕಂಬಳ ಸಮಿತಿ ತೀರ್ಮಾನಿಸಿದೆ. ಕಂಬಳ ಕೋಣಗಳಿಗೆ ದೀರ್ಘ ತರಬೇತಿ ದೊರಕುವಂತಾಗಲಿ ಎಂಬ ಕಾರಣದಿಂದ ಕಂಬಳ ದಿನ ನಿಗದಿ ಆಗದಿದ್ದರೂ ಸಂಭವನೀಯ ತಿಂಗಳ ಆಧಾರದಲ್ಲಿ ಸುಮಾರು 5 ತಿಂಗಳ ಮುಂಚಿತವಾಗಿ ಕುದಿಕಂಬಳ ಮುಹೂರ್ತ ನಡೆಸಲಾಗುತ್ತಿದೆ.
ಕಳೆದ ವರ್ಷ ನವೆಂಬರ್ ಎರಡನೇ ವಾರದಲ್ಲಿ ಕಂಬಳ ಆರಂಭವಾಗಿತ್ತು. ಆದರೆ, ಈ ಬಾರಿ ಅಕ್ಟೋಬರ್ ಕೊನೆಯಲ್ಲಿಯೇ ಕಂಬಳ ಆರಂಭಿಸುವ ನಿಟ್ಟಿನಲ್ಲಿ ಚರ್ಚೆ ಆರಂಭವಾಗಿದೆ. ಇದು ಸಾಧ್ಯವಾದರೆ ಮಾರ್ಚ್‌ನಲ್ಲಿ ಕಂಬಳ ಮುಗಿಸಬಹುದು ಎಂಬುದು ಲೆಕ್ಕಾಚಾರ, ಎಪ್ರಿಲ್‌ನ ಬಿಸಿಲಿನ ಸಮಸ್ಯೆ ಎದುರಾಗಲಾರದು.
ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ (ಜು. 15ರಿಂದ ಆ. 15) ಕೋಣಗಳನ್ನು ಓಡಿಸಲು ಆರಂಭಿಸುವ ಕುರಿ ನಡೆಸಲು ಅಗುವುದಿಲ್ಲ. ಹೀಗಾಗಿ ಸೋಣದವರೆಗೆ (ಆಗಸ್ಟ್ 16) ಕೋಡಾಗಳು ಕಾಯಬೇಕಾಗುತ್ತದೆ. ಈ ಕಾರಣದಿಂದ ಆಟಿಗೂ ಮುನ್ನವೇ ಕುದಿ ನಡೆಸಿದರೆ ಕೋಣಗಳ ಅಭ್ಯಾಸಕ್ಕೆ ತೊಡನು. ಉಂಟಾಗುವುದಿಲ್ಲ ಎಂಬುದು ಹೊಸ ಲೆಕ್ಕಾಚಾರ.
ಕಂಬಳ ಕರೆ ಇರುವಲ್ಲಿ ಗದ್ದೆಗೆ ನೀರು ಹಾಕುವ ಸಂಪ್ರದಾಯ ಕುದಿ ಮುಖೇನ ನಡೆಯುತ್ತದೆ. ಬಳಿಕ ಅಲ್ಲಿ ಸ್ಥಳೀಯ ಪರಿಸರದ ಕೋಡಾಗಳ ಅಭ್ಯಾಸ ಮಾಡಲು ಅಮಾನ ಆಗುತ್ತದೆ. ಸ್ಥಳೀಯವಾಗಿ ಸಬ್‌ಜೂನಿಯರ್ ಸ್ನೇಹ ಕೂಟಗಳು ಕಂಬಳ ಆರಂಭಕ್ಕೂ ಮುನ್ನ ಕೆಲವೆಡೆ ನಡೆಯುವ ಕಾರಣದಿಂದ ಇಂತಹ ಕೋಣಗಳನ್ನು ಸಿದ್ಧಪಡಿಸಲು ಕುದಿ ನಡೆಸಿದ ಕಂಬಳ ಗದ್ದೆಯಲ್ಲಿ ಅನುಕೂಲವಾಗುತ್ತದೆ. ಜತೆಗೆ ಕೆಲವು ಸೋಣಗಳಿಗೆ ಕೃಷಿಯಲ್ಲಿ ಭಾಗವಹಿಸಲು ಗದ್ದೆ ಇಲ್ಲ. ಹಾಗಾಗಿ ಆ ಕೋಣಗಳಿಗೆ ವ್ಯಾಯಾಮ ದೊರಕಿಸುವ ನಿಟ್ಟಿನಲ್ಲಿ ಕುದಿ ಕಂಬಳದತ್ತ ಹೆಚ್ಚಾಗಿ ಭಾಗವಹಿಸುತ್ತಾರೆ.