ಕಟ್ಟಡ ನಿರ್ಮಾಣ ಸಂಸ್ಥೆಯಿಂದ ಕಾರ್ಮಿಕರಿಗೆ ಅನ್ಯಾಯ – ತುರವೇ ನೇತ್ರತ್ವದಲ್ಲಿ ಪ್ರತಿಭಟನೆ

Spread the love

ಕಟ್ಟಡ ನಿರ್ಮಾಣ ಸಂಸ್ಥೆಯಿಂದ ಕಾರ್ಮಿಕರಿಗೆ ಅನ್ಯಾಯ – ತುರವೇ ನೇತ್ರತ್ವದಲ್ಲಿ ಪ್ರತಿಭಟನೆ

ಮಂಗಳೂರು: ನಗರದ ಬಾವುಟಗುಟ್ಟದಲ್ಲಿ ನಿರ್ಮಾಣ ಹಂತದಲ್ಲಿರುವ ಮೆನೆರೋವಾ ಪ್ರೈ. ಲಿ. ಕಟ್ಟಡ ನಿರ್ಮಾಣ ಸಂಸ್ಥೆಯ ಯೋಜನೆಯಾದ ಅಲೆಕ್ಷಾಂಡ್ರಿಯಾ ಬಹು ಮಹಡಿ ವಸತಿ ಸಮಚ್ಚಯ ಕಳೆದ ಹಲವಾರು ವರುಷಗಳಿಂದ ನಿರ್ಮಾಣ ಹಂತದಲ್ಲಿದೆ, ಈ ಸಂಸ್ಥೆಯಲ್ಲಿ ನೂರಾರು ಹೊರ ರಾಜ್ಯಗಳ ಕಾರ್ಮಿಕರು ದುಡಿಯುತ್ತಿದ್ದಾರೆ, ಇದೀಗ ಈ ಕಟ್ಟದ ದ 75% ಕಾಮಗಾರಿ ಪೂರ್ಣಗೊಂಡಿದ್ದು, ಆದರೆ ಕಾರ್ಮಿಕರಿಗೆ ಇಲ್ಲಿ ವೇತನ ಕೊಡದೆ ನಿರಂತರ ಸತಾಯುತ್ತಿದ್ದಾರೆ, ಹಲವಾರು ಕಾರ್ಮಿಕರು ಈ ಬಗ್ಗೆ ತುಳುನಾಡ ರಕ್ಷಣಾ ವೇದಿಕೆಗೆ ದೂರನ್ನು ನೀಡಿದ್ದು, ಇದೀಗ ತುಳುನಾಡ ರಕ್ಷಣಾ ವೇದಿಕೆ ಕಾರ್ಮಿಕರ ಬೆಂಬಲಕ್ಕೆ ನಿಂತಿದೆ,

ಅಲೆಕ್ಷಾಂಡ್ರಿಯಾ ವಸತಿ ಸಮಚ್ಚಯದ ಮುಂಭಾಗದಲ್ಲಿ ನೂರಾರು ಕಾರ್ಮಿಕರ ಪರವಾಗಿ ತುರವೇ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪುರವರ ನೇತ್ರತ್ವದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಯುತ್ತಿದೆ, ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ತುರವೇ ಇವರು ತುರವೇ ಹಲವಾರು ವರುಷಗಳಿಂದ ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿದ್ದೆ ಕಾರ್ಮಿಕರಿಗೆ ಯಾವುದೇ ಜಾತಿ , ಭಾಷೆ, ಗಡಿಯ ಬೇದಭಾವವಿಲ್ಲ, ದೇಶದ ಅಭಿವೃದ್ದಿಗೆ ಅವಿರತವಾಗಿ ದುಡಿಯುತ್ತಿರು ಕಾರ್ಮಿಕ ವರ್ಗ ಇದೀಗ ಸಂಕಸ್ಠದಲ್ಲಿದೆ, ಮಂಗಳೂರು ಸ್ಮಾರ್ಟ್ ಸಿಟಿಯ ಹಂತದಲ್ಲಿದೆ ನಗರದ ಅಭಿವೃದ್ದಿಗೆ ಪೂರಕವಾದ ಬಹುಮಹಡಿ ಕಟ್ಟಡಗಳು ಕಾರ್ಮಿಕರ ದುಡಿಮೆಯಿಂದ ಸಾದ್ಯವಾಗಿದೆ ಆದರೆ ಇದೀಗ ಕಾರ್ಮಿಕರಿಗೆ ನಿರಂತರ ಅನ್ಯಾಯವಾಗುತ್ತಿದೆ, ಕಾರ್ಮಿಕರಿಗೆ ಅವರ ದುಡಿಮೆಯ ವೇತನವನ್ನು ಕೊಡದೆ ಸತಾಯಿಸುತ್ತಿರುವುದು ಅಕ್ಷಮ್ಯ, ಕಾರ್ಮಿಕರಿಗೆ ಸರಕಾರ ಒದಗಿಸಿದ ಕಾಯಿದೆಗಳನ್ನು ನಿರ್ಮಾಣ ಸಂಸ್ಥೆಯವರು ಸಮರ್ಪಕವಾಗಿ ಕಾರ್ಮಿಕರಿಗೆ ಒದಗಿಸಿ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ, ಇಲ್ಲಿ ಕಾರ್ಮಿಕರು ದುಡಿಯುವ ಸಂಧರ್ಭದಲ್ಲಿ ಮೃತರಾದರೆ ಅಥವಾ ಗಾಯಾಳುವಾದರೆ ಸೂಕ್ತ ಸ್ಪಂದನೆ ನೀಡುವುದಿಲ್ಲ, ಕಾರ್ಮಿಕರು ತಮ್ಮ ಕುಟುಂಭದಿಂದ ದೂರ ಬಂದು ಇಲ್ಲಿ ದುಡಿಯುತ್ತಿದ್ದಾರೆ ಇವರನ್ನು ನಂಬಿಕೊಂಡಿರುವ ಕುಟುಂಬ ಸಂಕಸ್ಟಕ್ಕೆ ಒಳಗಾಗಿದೆ, ಆದ್ದರಿಂದ ಕೂಡಲೇ ಈ ಬಗ್ಗೆ ಸಂಭಂಧಪ್ಪಟ್ಟವರು ಇವರ ಸಿಗಬೇಕದ ವೇತನವನ್ನು ಶೀಘ್ರವೇ ಪಾವತಿಸಿ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕೆಂದು ಆಗ್ರಹಿಸಿದರು.

ಈ ಸಂಧರ್ಬದಲ್ಲಿ ತುರವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾಧ್ಯಕ್ಷರಾದ ರಮೇಶ್ ಪೂಜಾರಿ ಶೀರೂರು, ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಎಂ.ಸಿರಾಜ್ ಅಡ್ಕರೆ, ಕಾಸರಗೋಡು ಜಿಲ್ಲಾಧ್ಯಕ್ಷರಾದ ಭಾಸ್ಕರ್ ಕುಂಬ್ಲೆ, ತುರವೇ ಕಾರ್ಮಿಕ ಮುಖಂಡರಾದ ಅನಿಲ್ ಪೂಜರಿ, ಶೇಖ್ ಮತೀನ್ , ಗುರುಚೇತನ್, ಅಜಯ್, ಮುಂತಾದವರು ಉಪಸ್ಥಿತರಿದ್ದರು.


Spread the love