ಕನ್ನಡ ಸಂಘ ಅಲ್ಐನ್ ಸಂಘಟನೆಯ21ನೇ ವಾರ್ಷಿಕ ಸ್ನೇಹಮಿಲನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿಇರುವ ಕನ್ನಡ ಸಂಘ ಅಲ್ಐನ್ ತನ್ನ 21ನೇ ವಾರ್ಷಿಕ ಸ್ನೇಹಮಿಲನ “ವಿವಿಧತೆಯಲ್ಲಿಏಕತೆ” ಸಂದೇಶದೊAದಿಗೆ ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು.
 
 
 
 
2024 ಮೇ 5ನೇ ತಾರೀಕಿನಂದು ಬ್ಲುರಾಡಿಸ್ಸನ್ ಹೋಟೆಲ್ ಅಲ್ಐನ್ ನ ಬಾಲ್ರೂಂ ನಲ್ಲಿ ಬೆಳಗ್ಗೆ 10.00ಗಂಟೆಯಿAದ ಸಂಜೆ5.00ಗAಟೆಯವರೆಗೆ ಕಾರ್ಯಕ್ರಮ ನಡೆಯಿತು. ಪೂರ್ಣಕುಂಭ ಸ್ವಾಗತದೊಂದಿಗೆ ಮುಖ್ಯ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕನ್ನಡ ಸಂಘ ಅಲ್ಐನ್ ಮುಖ್ಯ ಸಂಘಟಕರಾದ ಶ್ರೀ ಯು.ಪಿ.ಹರೀಶ್ ಸರ್ವರನ್ನು ಸ್ವಾಗತಿಸಿದರು. ಉದ್ಯಮಿ, ಗಾಯಕರು, ನಟರು ಹಾಗೂ ಮೆರಿಟ್ ಫ್ರೆöÊಟ್ ಸಂಸ್ಥೆಯಎA.ಡಿ. ಶ್ರೀ ಜೋಸೆಫ್ ಮಥಾಯಸ್, ಉದ್ಯಮಿ ಗಾಯಕರು ಆಕ್ಮೆ ಸಂಸ್ಥೆಯಎA.ಡಿ. ಶ್ರೀ ಹರೀಶ್ ಶೇರಿಗಾರ್, ಶ್ರೀ ಮಹ್ಮದ್ ಇಬ್ರಾಹಿಂ, ಶ್ರೀಜಾನ್ ಲ್ಯಾನ್ಸಿ ಡಿಸೋಜಾ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಕ್ರಿಯಾತ್ಮಕ ಕಲಾ ನಿರ್ದೇಶಕ ಶ್ರೀ ಬಿ. ಕೆ.ಗಣೇಶ್ ರೈಯವರು ಹಾಗೂ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರುಗಳು ಗೌರವ ಅತಿಥಿಗಳಾಗಿ ಆಗಮಿಸಿದ್ದು ಕನ್ನಡ ಸಂಘದ ಮುಖ್ಯಸ್ಥರು ಶ್ರೀ ಯು. ಪಿ. ಹರೀಶ್ ಹಾಗೂ ಕಾರ್ಯಕಾರಿ ಸಮಿತಿ ಹಾಗೂ ಮಹಿಳಾ ಸದಸ್ಯರುಗಳ ಸಮ್ಮುಖದಲ್ಲಿಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.
ಶ್ರೀಯುತರುಗಳಾದ ಜೋಸೆಫ್ ಮಥಾಯಸ್, ಹರೀಶ್ ಶೇರಿಗಾರ್, ಶ್ರೀ ಅರ್ಶದ್ ಶರೀಪ್, ಮತ್ತುಜಾನ್ ಲ್ಯಾನ್ಸಿ ಡಿಸೋಜಾರವರನ್ನು ಕನ್ನಡ ಸಂಘ ಅಲ್ಐನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಸಂಘ ಶಾರ್ಜಾ ಪೂರ್ವ ಅಧ್ಯಕ್ಷರು ಶ್ರೀ ಬಿ. ಕೆ ಗಣೇಶ್, ಅಬುಧಾಬಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಮನೋಹರ್ ತೋನ್ಸೆ, ಕರ್ನಾಟಕ ಸಂಘ ದುಬಾಯಿ ಅಧ್ಯಕ್ಷರು ಶ್ರೀ ಶಶಿಧರ್ ನಾಗರಾಜಪ್ಪ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸತೀಶ್ ಪೂಜಾರಿ, ಶ್ರೀ ನೋವೆಲ್ ಡಿ ಅಲ್ಮೆಡಾ, ಶ್ರೀ ಮಲ್ಲಿಕಾರ್ಜುನ ಗೌಡ, ಶ್ರೀ ಮನೋಹರ್ ಹೆಗ್ಡೆ, ಇಂಡಿಯಾ ಸೊಶಿಯಲ್ ಸೆಂಟರ್ , ಇಂಡಿಯನ್ ಪೀಪಲ್ ಫೋರಂ ಮತ್ತು ಇನ್ನಿತರ ಭಾಷಾ ಸಂಘಟನೆಗಳ ಮುಖ್ಯಸ್ಥರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಕನ್ನಡ ಸಂಘ ಅಲ್ಐನ್ ನ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿವ ಸದಸ್ಯರನ್ನು ಆಯ್ಕೆ ಮಾಡಿ ಪ್ರತಿವರ್ಷ ನೀಡಲಾಗುತ್ತಿರುವ ದೇವಾ ಸಾಧಕ, ಸಾಧಕಿ ಸನ್ಮಾನ ಗೌರವವನ್ನು ಶ್ರೀಮತಿ ಶ್ಯಾಮಲ ಗಣಪತಿ, ಶ್ರೀ ವಿಕಾಶ್ ಶೆಟ್ಟಿ, ಡಾ. ಪ್ರದೀಪ್ಚಂದ್ರ ಇವರುಗಳಿಗೆ ನೀಡಿ ಗೌರವಿಸಲಾಯಿತು.
 
 
ಅದರ್ಶ ವಿದ್ಯಾರ್ಥಿ ಪುರಸ್ಕಾರವನ್ನು ವಿಧ್ಯಾರ್ಥಿಗಳಾದ ನಿಶ್ಚಲ್ ನಿತ್ಯನಂದ ಶೆಟ್ಟಿ, ಮಿತುಲ್ ವಸಂತ್ ಕುಮಾರ್ ಇವರುಗಳಿಗೆ ಫಲಕ ನೀಡಿ ಗೌರವಿಸಲಾಯಿತು.
ಅಲ್ಐನ್ ಜೂನಿಯರ್ ಹೈಸ್ಕೂಲ್ ಕನ್ನಡ ಅಧ್ಯಾಪಕಿ ಶ್ರೀಮತಿ ರುಬೀನಾ ಮತ್ತು ಕನ್ನಡ ಪಾಠ ಶಾಲೆ ದುಬಾಯಿ ಹದಿನೆಂಟು ಶಿಕ್ಷಕಿಯರಿಗೆ ವಿದ್ಯಾರ್ಥಿಗಳು ಪಾದ ಪೂಜೆ ಮಾಡಿ ಗುರುವಂದನೆ ಸಲ್ಲಿಸಿದರು ಫಲಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಬೆಂಬಲ ಪ್ರೋತ್ಸಾಹ ನೀಡಿರುವಎಲ್ಲಾ ಪ್ರಾಯೋಜಕರುಗಳನ್ನು ವೇದಿಕೆಗೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಸಂಘ ಅಲ್ ಐನ್ ಸಂಘಟನೆಯ ಸದಸ್ಯರುಗಳು ಹಾಗೂ ಮಕ್ಕಳ ಪ್ರತಿಭೆ ಅನಾವರಣವಾಯಿತು. ಶರವ್ ಮತ್ತು ಆರ್ಯ ಇವರ ನಿರೂಪಣೆಯಲ್ಲಿ ಸಮಗ್ರ ಕರ್ನಾಟಕ ದರ್ಶನ ನೃತ್ಯರೂಪಕದಲ್ಲಿ ಕನ್ನಡ ಸಾಂಸೃತಿಕ ವೈಭವದ ಅನಾವರಣವಾಯಿತು. ಹಾಗೂ ಪುಟ್ಟ ಕಂದಮ್ಮಗಳ ಸಮೂಹ ನೃತ್ಯ, ಸಂಘಟನೆಯ ಸದಸ್ಯರ ಬೈಲಾ ಗೀತಾ ನೃತ್ಯ ಹಲವಾರು ಮಂದಿ ಭಾಗವಹಿಸಿದ್ದರು.
 
 
 
ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯ ಜವಬ್ಧಾರಿಯನ್ನು ಶ್ರೀಮತಿ ಶ್ಯಾಮಲ, ಶ್ರೀಮತಿ ಆಯಿಶಾ, ಶ್ರೀಮತಿ ಸವಿತಾ ನಾಯಕ್, ಮತ್ತು ಶ್ರೀ ಉಮ್ಮರ್ ಫಾರೂಕ್ ಯಶಸ್ವಿಯಾಗಿ ನಡೆಸಿಕೊಟ್ಟರು
ಶ್ರೀಯುತರುಗಳಾದ ಮುಖ್ಯ ಸಂಘಟಕರು ಹರೀಶ್ಯು.ಪಿ., ಮತ್ತುರಮೇಶ್ ಕೆ. ಬಿ. ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳ ಪೂರ್ವಭಾವಿ ತಯಾರಿಯೊಂದಿಗೆ ಆಯೋಜಿಸಿದ 21ನೇ ವಾರ್ಷಿಕೋತ್ಸವ ಯಶಸ್ವಿಯಾಗಿ ನಡೆಯಿತು.
            











