ಕರಾರ.ಸಾ.ಸಂಸ್ಥೆಯ ಪಾಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸೂಚನೆ

Spread the love

ಕರಾರ.ಸಾ.ಸಂಸ್ಥೆಯ ಪಾಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸೂಚನೆ

ಉಡುಪಿ: ಕರಾರ.ಸಾ.ಸಂಸ್ಥೆಯು ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸಿರುತ್ತದೆ. 2016ನೇ ಸಾಲಿನಲ್ಲಿ ವಿತರಿಸಿರುವ ಸದ್ರಿ ರಿಯಾಯಿತಿ ಬಸ್ಸು ಪಾಸುಗಳ ಅವಧಿಯು ದಿನಾಂಕ: 31.12.2016 ಕ್ಕೆ ಮುಕ್ತಾಯಗೊಳ್ಳಲಿದ್ದು, 2017ನೇ ಸಾಲಿಗಾಗಿ ಈ ಬಸ್ಸು ಪಾಸುಗಳನ್ನು ಜನವರಿ 2, 2017 ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಹೊಸ ಪಾಸುಗಳನ್ನು ನೀಡಲಾಗುವುದು.

ವಿಕಲಚೇತನರ ರಿಯಾಯಿತಿ ಬಸ್ಸು ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2016ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು ದಿ: 28.02.2017 ರವರೆಗೆ ಮಾನ್ಯ ಮಾಡಲಾಗುವುದು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು (ಮೂಡಬಿದ್ರೆ ಸೇರಿದಂತೆ) ಹಾಗೂ ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ ತಾಲೂಕು ಹಾಗೂ ಕುಂದಾಪುರ ತಾಲೂಕಿನ ವಿಕಲಚೇತನರು, ವಿಕಲಚೇತನರ ರಿಯಾಯಿತಿ ದರದ ಹೊಸ ಪಾಸು ಮತ್ತು ನವೀಕರಣದ ಪಾಸನ್ನು ಪಡೆದುಕೊಳ್ಳಲು ಈ ವಿಭಾಗಕ್ಕೆ ಬಂದು ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು. ಹೊಸ/ ನವೀಕರಣದ ವಿಕಲಚೇತನರ ಬಸ್ಸು ಪಾಸು ಪಡೆದುಕೊಳ್ಳುವವರು ಅರ್ಜಿಯೊಂದಿಗೆ ನಗದು ರೂಪದಲ್ಲಿ ರೂ: 660/-ರ ನ್ನು ಸಲ್ಲಿಸುವುದು. ಹಾಗೂ ಅರ್ಜಿಯೊಂದಿಗೆ 3 ಪಾಸ್‍ಪೋರ್ಟ್ ಸೈಜಿನ ಫೊಟೋಗಳನ್ನು ಸಲ್ಲಿಸುವುದು. ವಿಕಲಚೇತನರು ಸರಕಾರಿ ನೌಕರಿಯಲ್ಲಿದ್ದ ಪಕ್ಷದಲ್ಲಿ ಮೇಲ್ಕಂಡ ರಿಯಾಯಿತಿದರದ ಬಸ್ಸು ಪಾಸನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ.

ನವೀಕರಣದ ಬಗ್ಗೆ :
ಹಳೆಯ ಪಾಸು ಕಾರ್ಡನ್ನು ಕಡ್ಡಾಯವಾಗಿ ಹಿಂತಿರುಗಿಸುವುದು.
ರೂ:660/-ನ್ನು ನಗದು ರೂಪದಲ್ಲಿ ನೀಡುವುದು.
3 ಪಾಸ್ ಪೋರ್ಟ್ ಸೈಜಿನ ಫೋಟೋಗಳು.
ವಿಕಲಚೇತನರ ರಿಯಾಯಿತಿ ಬಸ್ಸು ಪಾಸ್ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿತರಿಸಿರುವ ದೃಢೀಕರಣ ದಾಖಲಾತಿ
ವಿಳಾಸದ ದೃಢೀಕರಣ ದಾಖಲಾತಿ.
ಪಾಸುಗಳನ್ನು ನವೀಕರಿಸಲು ಕೊನೆಯ ದಿನಾಂಕ: 28.02.2017 ರವರೆಗೆ ಇರುತ್ತದೆ. ನಂತರ ನವೀಕರಿಸಲು ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
2016ನೇ ಸಾಲಿನಲ್ಲಿ ವಿಭಾಗದಿಂದ ವಿತರಿಸಿರುವ/ನವೀಕರಿಸಿರುವ ವಿಕಲಚೇತನರ/ಅಂಧರ ಪಾಸುಗಳಿಗೆ ಸಂಬಂಧಿಸಿದ ಗುರುತಿನ ಚೀಟಿಯನ್ನು ವಿತರಿಸಿದ ನಿರ್ದೇಶನಾಲಯದ ಅಧಿಕಾರಿಗಳಿಂದ, ದೃಢೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸದರಿ ಕಛೇರಿಯಿಂದ ದೃಢೀಕರಿಸಲಾದ ಗುರುತಿನ ಚೀಟಿಯನ್ನು ಹೊಂದಿದ ಪಾಸುಗಳನ್ನು ಮಾತ್ರ 2017ನೇ ಸಾಲಿನಲ್ಲಿ ನವೀಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ


Spread the love