ಕರಾವಳಿ ಬ್ಯಾಂಕುಗಳನ್ನು ಉಳಿಸಿ ಹಕ್ಕೊತ್ತಾಯ ಸಭೆ ಮಾರ್ಚ್ 15ಕ್ಕೆ ಮುಂದೂಡಿಕೆ

Spread the love

ಕರಾವಳಿ ಬ್ಯಾಂಕುಗಳನ್ನು ಉಳಿಸಿ ಹಕ್ಕೊತ್ತಾಯ ಸಭೆ ಮಾರ್ಚ್ 15ಕ್ಕೆ ಮುಂದೂಡಿಕೆ

ಮಂಗಳೂರು: ಕರಾವಳಿ ಬ್ಯಾಂಕುಗಳನ್ನು ಉಳಿಸಲು ಫೆಬ್ರವರಿ 25ರಂಉ ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯನ್ನು ಮಾರ್ಚ್ 15ಕ್ಕೆ ಮುಂದೂಡಲಾಗಿದೆ ಮಾರ್ಚ್ 15 ರಂದು ಮಂಗಳೂರಿನಲ್ಲಿ ಇರುವ ಶಾಲೆಯ ಎದುರುಗಡೆ ಇರುವ ಸಭಾಂಗಣದಲ್ಲಿ ಸಭೆ ನಡೆಸಲಾಗುವುದು.

ಕರಾವಳಿ ಬ್ಯಾಂಕ್ ಗಳಾದ ಸಿಂಡಿಕೇಟ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗಳನ್ನು ಇತರ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವುದಾಗಿ 2019 30ರಂದು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದರು ಸರ್ಕಾರದ ನಿರ್ಧಾರದಿಂದ ಆರ್ಥಿಕ ಬೆಳವಣಿಗೆಗೆ ತೊಂದರೆಯುಂಟಾಗುತ್ತದೆ ಎಂದು ಕರಾವಳಿ ಭಾಗದಲ್ಲಿ ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗಿವೆ ಎಂದು ಕರಾವಳಿ ಭಾಗದಲ್ಲಿ ನಿರ್ಧಾರವನ್ನು ಹಿಂಪಡೆಯುವಂತೆ ಕೋರಿ ಕರಾವಳಿ ಹೋರಾಟ ಸಮಿತಿ ಮುಖಾಂತರ ಈಗಾಗಲೇ ಮನವಿ ಸಲ್ಲಿಸಲಾಗಿದೆ ಅಲ್ಲದೆ ದೇಶದ ಎಲ್ಲಾ ಸಂಸದರಿಗೂ ಕೂಡ ಲಿಖಿತವಾಗಿ ಪತ್ರಗಳನ್ನು ಬರೆದು ಸರಕಾರದ ಕರಾವಳಿ ಬ್ಯಾಂಕುಗಳ ಇಲ್ಲಿನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ವಿನಂತಿಸಿಕೊಳ್ಳಲಾಗಿದೆ

ಕಾನೂನಿನ ಪ್ರಕಾರ ಬ್ಯಾಂಕ್ ವಿಲೀನ ಪ್ರಕ್ರಿಯೆ ಮಾಡಬೇಕಾದರೆ ನಿರ್ಧಾರವಾಗಬೇಕಾಗಿದೆ ಪ್ರಸ್ತುತ ಬ್ಯಾಂಕ್ ವಿಲೀನದ ವಿಚಾರವಾಗಿ ಕ್ಯಾಬಿನೆಟ್ ಸಭೆ ನಡೆಯುವ ಸಮಯ ಸೇರಿಸಲಾಗಿತ್ತಾದರೂ ಈ ವಿಷಯದ ಮೇಲೆ ಯಾವುದೇ ಚರ್ಚೆ ಮತ್ತು ನಿರ್ಣಯಗಳು ಅಂತಿಮಗೊಂಡಿಲ್ಲ ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡ ವಿಲೀನ ಮಾಡಿದ ಬಳಿಕ ಆರ್ಥಿಕ ವ್ಯವಸ್ಥೆ ಅಭಿವೃದ್ಧಿಗೊಂಡ ಬಗ್ಗೆ ಯಾವುದೇ ಸೂಚನೆಗಳನ್ನು ಕಂಡುಬಂದಿಲ್ಲ ವಿಲೀನಗೊಂಡ ಅಂತಹ ಬ್ಯಾಂಕುಗಳು ಕೂಡ ಚೇತನ ಗೊಂಡಿಲ್ಲ ಬ್ಯಾಂಕ್ ವಿಲೀನದಿಂದ ಯಾವುದೇ ಫಲಿತಾಂಶ ಕಂಡು ಬಾರದೆ ಇರುವುದು ಇರುವ ಕಾರಣ ಕೇಂದ್ರ ಸರ್ಕಾರ ಕೂಡ ತನ್ನ ನಿರ್ಧಾರದ ಬಗ್ಗೆ ಗೊಂದಲ ವಿದ್ದಂತೆ ಕಾಣುತ್ತಿದೆ.

ಈ ಸಭೆಯು ಕರಾವಳಿ ವ್ಯಾಪ್ತಿಗೆ ಒಳಪಟ್ಟ ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆ ಮತ್ತು ಕಾರವಾರ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷದ ನಾಯಕರುಗಳನ್ನು ಆಹ್ವಾನಿಸಿ ಕರಾವಳಿ ಭಾಗದ ಬ್ಯಾಂಕುಗಳನ್ನು ಉಳಿಸುವ ನಿಟ್ಟಿನಲ್ಲಿ ಹಕ್ಕೊತ್ತಾಯವನ್ನು ಮಾಡಲಾಗುವುದು.

ಕರಾವಳಿ ವ್ಯಾಪ್ತಿಯಲ್ಲಿರುವ ಮೂರು ಜಿಲ್ಲೆಗಳನ್ನು ಪ್ರತಿನಿಧಿಸುವ ಸಂಸದರು ಗಳಾದ ನಳಿನ್ ಕುಮಾರ್ ಕಟೀಲ್ ಶೋಭಾ ಕರಂದ್ಲಾಜೆ ಮತ್ತು ಅನಂತ್ ಕುಮಾರ್ ಹೆಗಡೆ ಇವರುಗಳು ಕಚೇರಿಗೆ ಬೈಕ್ ರಾಲಿ ಮೂಲಕ ತೆರಳಿ ಹಕ್ಕೊತ್ತಾಯ ಸಭೆ ಆಹ್ವಾನಿಸಲಾಗುವುದು.


Spread the love