ಕರಾವಳಿ ಮೀನು ನಿಷೇಧ ಹಿಂಪಡೆದ ಗೋವಾ ಸರಕಾರಕ್ಕೆ ಯಶ್ ಪಾಲ್ ಸುವರ್ಣ ಅಭಿನಂಧನೆ

Spread the love

ಕರಾವಳಿ ಮೀನು ನಿಷೇಧ ಹಿಂಪಡೆದ ಗೋವಾ ಸರಕಾರಕ್ಕೆ ಯಶ್ ಪಾಲ್ ಸುವರ್ಣ ಅಭಿನಂಧನೆ

ಉಡುಪಿ: ಕರಾವಳಿ ಕರ್ನಾಟಕದ ಮೀನು ಆಮದು ನಿಷೇಧವನ್ನು ಹಿಂಪಡೆದ ಗೋವಾ ಸರಕಾರದ ನಿರ್ಧಾರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ  ಯಶ್ ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.

  ಗೋವಾ ಸರಕಾರ ಕಳೆದ 6 ತಿಂಗಳಿನಿಂದ ಹೊರ ರಾಜ್ಯದ ಮೀನು ಆಮದು ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಕರಾವಳಿ ಭಾಗದ  ಮೀನುಗಾರರ ನಿಯೋಗ  ನವೆಂಬರ್ 27 ರಂದು ಭೇಟಿ ಮಾಡಿ  ನಿಷೇಧ ಹಿಂಪಡೆಯುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಗೋವಾ ಸರಕಾರದ ಮುಖ್ಯಮಂತ್ರಿ ಶ್ರೀ ಮನೋಹರ್ ಪಾರಿಕ್ಕರ್, ಆರೋಗ್ಯ ಸಚಿವರಾದ  ವಿಶ್ವಜಿತ್ ರಾಣೆ ಹಾಗೂ ಗೋವಾ ವಿಧಾನಸಭಾ ಸಭಾಪತಿ   ಪ್ರಮೋದ್ ಸಾವಂತ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

  ಈ ನಿಷೇಧ ನೀತಿಯಿಂದ ಕರಾವಳಿ ಜಿಲ್ಲೆಯ ಮೀನುಗಾರಿಕೆ ಮೇಲೆ ಉಂಟಾದ ಸಮಸ್ಯೆಯ ಗಂಭೀರತೆಯನ್ನು ಮನಗಂಡು ಗೋವಾಕ್ಕೆ ಭೇಟಿ ನೀಡಿದ ಮೀನುಗಾರರ ನಿಯೋಗದ ನೇತೃತ್ವ ವಹಿಸಿ ಗೋವಾ ಸರಕಾರಕ್ಕೆ ಸಮಸ್ಯೆಯ ಅರಿವು ಮೂಡಿಸಿ ನಿಷೇಧ ಹಿಂಪಡೆಯುವಂತೆ ಮನವೊಲಿಸುವಲ್ಲಿ  ಅವಿರತ ಪ್ರಯತ್ನ ಮಾಡಿದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲು, ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಕರಾವಳಿ ಜಿಲ್ಲೆಯ ಶಾಸಕರುಗಳಾದ ರಘುಪತಿ ಭಟ್, ಭರತ್ ಶೆಟ್ಟಿ ವೇದವ್ಯಾಸ ಕಾಮತ್, ರೂಪಾಲಿ ನಾಯ್ಕ್ ದಿನಕರ ಶೆಟ್ಟಿ ಹಾಗೂ ಮೀನುಗಾರ ಮುಖಂಡರಿಗೆ ಧನ್ಯವಾದ ತಿಳಿಸಿದ್ದಾರೆ.

 ಮುಂಬರುವ ದಿನಗಳಲ್ಲಿಯೂ  ಕರಾವಳಿ ಭಾಗದ ಮೀನುಗಾರರು ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಈ ಹಿಂದಿನಂತೆ ಪ್ರಾಮಾಣಿಕವಾಗಿ ಮೀನು ವ್ಯಾಪಾರವನ್ನು ಗೋವಾ ರಾಜ್ಯದೊಂದಿಗೆ  ನಡೆಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love