ಕರೋನಾ ನಿರ್ಮೂಲನೆವರೆಗೂ ಕಾಂಗ್ರೆಸ್ ಸೇವಾಕಾರ್ಯ ಮುಂದುವರಿಕೆ – ಕೆ.ಹರೀಶ್ ಕುಮಾರ್

Spread the love

ಕರೋನಾ ನಿರ್ಮೂಲನೆವರೆಗೂ ಕಾಂಗ್ರೆಸ್ ಸೇವಾಕಾರ್ಯ ಮುಂದುವರಿಕೆ – ಕೆ.ಹರೀಶ್ ಕುಮಾರ್

ಜಗತ್ತನ್ನೇ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್ ನಿಂದಾಗಿ ಕಂಗೆಟ್ಟಿರುವ ಬಡವರ ಹಸಿವನ್ನು ನೀಗಿಸುವಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಮರೋಪಾದಿಯಲ್ಲಿ ನಡೆಯುತ್ತಿರುವ ಸೇವಾಕಾರ್ಯವು ಕೊರೋನಾ ನಿರ್ಮೂಲನವಾಗುವವರೆಗೂ ಮುಂದುವರಿಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ಮುಖಂಡರಾದ ಸಿದ್ಧರಾಮಯ್ಯರ ನಿರ್ದೇಶನದಂತೆ ರಾಜ್ಯದಲ್ಲೂ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು ಪಕ್ಷದ ಮಾಜಿ ಸಚಿವರು,ಹಾಲಿ,ಮಾಜಿ ಶಾಸಕರು,ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರು,ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಸೇರಿದಂತೆ ಎಲ್ಲಾ ಮುಂಚೂಣಿ ಘಟಕಗಳು, ನಗರ ಪಾಲಿಕೆ ಸದಸ್ಯರು,ಕಾಂಗ್ರೆಸ್ ಸೇವಾದಳ,ಜಿಲ್ಲಾ , ತಾಲೂಕು ಹಾಗೂ ಗ್ರಾಮಪಂಚಾಯತ್ ಸದಸ್ಯರು,ಜಿಲ್ಲೆಯಾದ್ಯಂತ ಪಕ್ಷದ ಸಾವಿರಾರು ಕಾರ್ಯಕರ್ತರು ಬಡವರಿಗೆ ಆಹಾರ ಸಾಮಗ್ರಿ,ದಿನಬಳಕೆ ವಸ್ತುಗಳನ್ನು ಉಚಿತವಾಗಿ ಪೂರೈಸುವುದರ ಜೊತೆಗೆ ಅನ್ನದಾನ ಕಾರ್ಯಕ್ರಮ ಕೈಗೊಂಡು ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ಹರೀಶ್ ಕುಮಾರ್   ತಿಳಿಸಿದ್ದಾರೆ.


Spread the love