ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಸಾರ್ವಜನಿಕರ ಮಧ್ಯಪ್ರವೇಶ

Spread the love

ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಸಾರ್ವಜನಿಕರ ಮಧ್ಯಪ್ರವೇಶ

ಬಂಟ್ವಾಳ : ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ನಡೆದಿದೆ.

ಜುಲೈ 9 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಎಂಬುದಾಗಿ ಮಾಹಿತಿ ಬಂದಿದ್ದು ಅದರಂತೆ ಬಂಟ್ವಾಳ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶೈಲೇಶ್ ಟಿ ರವರು ಇಲಾಖಾ ವಾಹನದಲ್ಲಿ ಪಿಸಿ 2449 ನೇ ನಿರಂಜನ್ ರವರೊಂದಿಗೆ ತೆರಳಿದ್ದರು.

ಸದ್ರಿ ಸ್ಥಳಕ್ಕೆ ಹೆಚ್ ಸಿ ದೇವಪ್ಪ ಹಾಗೂ ಪಿಸಿ ಮಲ್ಲಿಕಸಾಬ್ ರವರನ್ನು ಬರಹೇಳಿ ಸದ್ರಿ ಸ್ಥಳಕ್ಕೆ ಬೇಟಿ ನೀಡಲಾಗಿ ಸ್ಥಳದಲ್ಲಿ ಕೈಯಲ್ಲಿ ಮಾರಕಾಯುಧವಾದ ಕಬ್ಬಿಣದ ರಾಡನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಗೋಳ್ತಮಜಲು ನಿವಾಸಿ ಅಬ್ದುಲ್ ಸಲಾಂ (28) ಎಂಬಾತನ ಬಳಿ ತೆರಳಿ ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಆ ವ್ಯಕ್ತಿಯು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಕೈಯಲ್ಲಿದ್ದ ಮಾರಕಾಯುಧವಾದ ಕಬ್ಬಿಣದ ರಾಡಿನಲ್ಲಿ ಏಕಾಏಕಿಯಾಗಿ ಕೊಲೆ ಮಾಡುವ ಉದ್ದೇಶದಿಂದ ಪೊಲೀಸರಿಗೆ ಹಲ್ಲೆ ನಡೆಸಿದ್ದಿ ಹಾಗೂ ಸ್ಥಳದಲ್ಲಿದ್ದ ಇಲಾಖಾ ವಾಹನವನ್ನು ರಾಡ್ ನಿಂದ ಹೊಡೆದು ಕಾಲಿನಿಂದ ತುಳಿದು ಕೈಯಿಂದ ಹೊಡೆದು ಜಖಂಗೊಳಿಸಿ ಸುಮಾರು 10,000 ರೂಗಳ ನಷ್ಟವುಂಟು ಮಾಡಿರುವುದಾಗಿ ಆರೋಪಿಸಲಾಗಿದೆ

ಈ ಸಂದರ್ಭದಲ್ಲಿ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಹಲ್ಲೆ ನಡೆಯುವುದನ್ನು ತಡೆಯಲು ಬಂದು ಆರೋಪಿಗೆ ಸಾರ್ವಜನಿಕವಾಗಿ ಥಳಿಸಿದ್ದು ಈತನಿಗೂ ಗಾಯ ನೋವುಗಳಾಗಿರುತ್ತದೆ.

ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕ ರಾದ ಶೈಲೇಶ್ ಟಿ ಮತ್ತು ಇತರ 3 ಪೊಲೀಸರು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಹಾಗೂ ಆರೋಪಿಯನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love