ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಿ.ಎಸ್. ಬಿ. ದೇವಳಗಳ ಒಕ್ಕೂಟದಿಂದ ಮನವಿ

Spread the love

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಿ.ಎಸ್. ಬಿ. ದೇವಳಗಳ ಒಕ್ಕೂಟದಿಂದ ಮನವಿ

ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ರಾಜ್ಯದಲ್ಲಿರುವ ಬ್ರಾಹ್ಮಣ ಸಮುದಾಯದವರಿಗೆ ಸರಕಾರದಿಂದ ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸೌಲಭ್ಯಗಳ ನೆರವನ್ನು ನೀಡಲಾಗುವ ಉದ್ದೇಶಗಳಿರುವ ಮಹತ್ತಾದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದಾರೆ.

ರಾಜ್ಯದಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ಗೌಡ ಸಾರಸ್ವತ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಜನೆಗಾಗಿ ಸವಲತ್ತು ನೀಡುವಂತೆ ರಾಜ್ಯ ಸರಕಾರವನ್ನು ವಿನಂತಿಸಿ ಇತ್ತೀಚಿಗೆ ಮಂಗಳೂರಿಗೆ ಆಗಮಿಸಿದ ಕಂದಾಯ ಮಂತ್ರಿಗಳಾದ ಆರ್. ಅಶೋಕ ಅವರಿಗೆ ಗೌಡ ಸಾರಸ್ವತ ಬ್ರಾಹ್ಮಣ ದೇವಳಗಳ ಒಕ್ಕೂಟದ ಅಧ್ಯಕ್ಷ  ಸಿ.ಎ. ಜಗನ್ನಾಥ ಕಾಮತ ಮತ್ತು ಸಮಾಜ ಸೇವಕ ಹನುಮಂತ ಕಾಮತ ಅವರು ಭಿನ್ನವತ್ತಳೆಯನ್ನು ನೀಡಿದರು.

 ವೇದವ್ಯಾಸ ಕಾಮತ (ಎಮ್. ಎಲ್. ಎ) ಮತ್ತು ಪ್ರತಾಪ ಸಿಂಹ ನಾಯಕ (ಎಮ್. ಎಲ್. ಸಿ) ಹಾಗೂ ಸಮಾಜದ ಇತರ ಮುಖಂಡರು ಹಾಜರಿದ್ದರು. ಮಾನ್ಯ ಸಚಿವರು ತಾನು ಬೆಂಗಳೂರಿಗೆ ಹಿಂದಿರುಗಿದ ಕೂಡಲೇ  ಮುಖ್ಯಮಂತ್ರಿಗಳವರೊಡನೆ ಶೀಘ್ರದಲ್ಲಿಯೇ ಚರ್ಚಿಸಿ ರಾಜ್ಯ ಸರಕಾರದಿಂದ ನಿರ್ಣಯ ಕೈಗೊಳ್ಳುವಂತೆ ಆಶ್ವಾಸನೆ ನೀಡಿದರು.


Spread the love