ಕಾಂಗ್ರೆಸ್ ಮುಕ್ತ ಬಿಜೆಪಿ ಅಜೆಂಡಾ ಪಂಚರಾಜ್ಯ ಚುನಾವಣೆಯಲ್ಲಿ ಫಲಿಸಿಲ್ಲ ; ಪ್ರಮೋದ್ ಮಧ್ವರಾಜ್

Spread the love

ಕಾಂಗ್ರೆಸ್ ಮುಕ್ತ ಬಿಜೆಪಿ ಅಜೆಂಡಾ ಪಂಚರಾಜ್ಯ ಚುನಾವಣೆಯಲ್ಲಿ ಫಲಿಸಿಲ್ಲ ; ಪ್ರಮೋದ್ ಮಧ್ವರಾಜ್

ಉಡುಪಿ: ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿಯ ಅಜೆಂಡಾ ಪಂಚರಾಜ್ಯಗಳ ಚುನಾವಣೆಯಲ್ಲಿ ಫಲ ಕಂಡಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಉಡುಪಿಯಲ್ಲಿ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂಬ ಬಿಜೆಪಿ ಅಜೆಂಡಾ ಪಂಜಾಬ್, ಗೋವಾ, ಮತ್ತು ಮಣಿಪುರದಲ್ಲಿ ನಡೆಯಲಿಲ್ಲ, ಉತ್ತರಪ್ರದೇಶ ಮತ್ತು ಉತ್ತರಕಾಂಡದಲ್ಲಿ ಬಿಜೆಪಿ ಉತ್ತಮ ನಿರ್ವಹಣೆ ಮಾಡಿದೆ. ಈ ಬಗ್ಗೆ ಕಾಂಗ್ರೆಸ್ ಕೂಡ ಚಿಂತನೆ ಮಾಡುವ ಅಗತ್ಯ ಇದೆ ಯಾಕೆಂದರೆ ರಾಜಕೀಯವಾಗಿ ಉತ್ತರಪ್ರದೇಶದ ಚುನಾವಣೆ ಹೆಚ್ಚಿನ ಪ್ರಾಮುಖ್ಯತೆ ಪಡೆದ ಚುನಾವಣೆಯಾಗಿತ್ತು. ದೇಶದ ಭವಿಷ್ಯ ರೂಪಿಸಬೇಕಾಗಿದ್ದ ಚುನಾವಣೆ ಇದಾಗಿತ್ತು. ಆದ್ದರಿಂದ ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಪಕ್ಷವನ್ನು ಸಂಘಟಿಸುವ ಬಗ್ಗೆ ಈಗಿನಿಂದಲೇ ಪ್ರಯತ್ನ ಮಾಡದೇ ಹೋದರೆ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಿದೆ. ಆದರೆ ಪಂಜಾಬ್ ಗೋವಾ ಮತ್ತು ಮಣಿಪುರ ಜನರು ವಾಪಾಸ್ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಒಲವನ್ನು ತೋರಿಸಿದ್ದಾರೆ ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

ನೋಟಿನ ಅಪಮೌಲಿಕರಣದ ಪರಿಣಾಮ ಜನರಿಗೆ ಇನ್ನೂ ಗೊತ್ತಾಗಿಲ್ಲ ಅದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಒಂದು ಅಭಿಪ್ರಾಯದ ಪ್ರಕಾರ ನಾವು 10 ವರ್ಷಕ್ಕೆ ಹಿಂದೆ ಹೋಗಿದ್ದೇವೆ ಎನ್ನುತ್ತಾರೆ ವಿಶ್ಲೇಷಕರು. ಜನರು ಈಗ ಎನನ್ನು ಎಣಿಸಿದ್ದಾರೆಂದರೆ ಕೇವಲ ಶ್ರೀಮಂತರಿಗೆ ಮಾತ್ರ ತೊಂದರೆಯಾಗಿದೆ ಎನ್ನುವ ಭಾವನೆಯಲ್ಲಿ ಮಧ್ಯಮವರ್ಗದವರಿದ್ದಾರೆ.  ಸಾಮಾನ್ಯ ಜನರಿಗೆ ತೊಂದರೆಯಾಗುವ ದಿನಗಳು ಮುಂದೆ ಬರಲು ಇದೆ ಆಗ ನಿಜವಾದ ಜ್ಞಾನೋದಯ ಆಗಲಿದೆ ಎಂದರು.

ಈ ಫಲಿತಾಂಶ ಮುಂದೆ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಂಜಾಬ್ ಗೋವಾ ಮಣಿಪುರ ಗೆದ್ದಂತೆ ಮುಂದಿನ ಚುನಾವಣೇಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಗೋವಾದ ಗಾಳಿ ಬೆಳಗಾವಿ ಮೂಲಕ ಕರ್ನಾಟಕಕ್ಕೆ ಪ್ರವೇಶವಾಗಲಿದೆ ಎಂದರು.


Spread the love