ಕಾರವಾರ: ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು – ಯುವತಿ ಸೇರಿ ಮೂವರ ದುರ್ಮರಣ

Spread the love

ಕಾರವಾರ: ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು – ಯುವತಿ ಸೇರಿ ಮೂವರ ದುರ್ಮರಣ

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಳೆಗೆ ಬಿದ್ದು, ಮೂವರು ಮೃತಪಟ್ಟಿರುವ ಘಟನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಡ್ನಮನೆಯಲ್ಲಿ ನಡೆದಿದೆ.

ಕಾರಿನ ನಿಯಂತ್ರಣ ತಪ್ಪಿ ಉಂಚಳ್ಳಿ ಜಲತಾಪಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸೇರಿ ಒಟ್ಟು ಮೂವರು ಕಾರಿನ ಸಮೇತ ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಘಟನೆ ಜರುಗಿದ್ದು, ಕಾರು ಹೊಳೆಗೆ ಬಿದ್ದ ಸಮಯದಲ್ಲಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾರೂ ಕಾರನ್ನು ಗಮನಿಸಿಲ್ಲ. ಇದರಿಂದ ಗುರುವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.

ಕಾರು ಧಾರವಾಡದ ನೋಂದಣಿ ಸಂಖ್ಯೆಯಿದ್ದು, ಹುಬ್ಬಳ್ಳಿಯವರು ಎನ್ನಲಾಗಿದೆ. ಮೂವರೂ 25 ವರ್ಷದ ಒಳಗಿನವರಾಗಿದ್ದು, ಸಿದ್ದಾಪುರದ ಉಂಚಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಿಂದ ಹಿಂತಿರುಗಿ ಬರುವಾಗ ಕೋಡ್ನಗದ್ದೆ ಸಮೀಪದ ತಿರುವಿನಲ್ಲಿ ಆಯತಪ್ಪಿ ಕೋಡ್ನಗದ್ದೆ ಹೊಳೆಗೆ ಕಾರು ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


Spread the love