ಕಾರ್ಯಕ್ರಮಕ್ಕೆ ಗೈರಾದರೂ ಮೊಯ್ಲಿ, ಗೌಡರಿಗೆ ಕರಿಪತಾಕೆ ಪ್ರದರ್ಶನ

Spread the love

ಮಂಗಳೂರು: ಸ್ಥಳೀಯ ಸುದ್ದಿ ವಾಹಿನಿಯೊಂದರ ದಶಮಾನೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ವೀರಪ್ಪ ಮೊಯ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸದೇ ಇದ್ದರೂ ಕುಡ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಶನಿವಾರ ಕರಿಪತಾಕೆ ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರು, ಮಿನಿ ವಿಧಾನಸೌಧದಿಂದ ಪುರಭವನದ ತನಕ ಮೆರವಣಿಗೆಯಲ್ಲಿ ಆಗಮಿಸಿ ಡಿವಿಎಸ್ ಹಾಗೂ ಮೊಯ್ಲಿ ವಿರುದ್ದ ಘೋಷಣೆಗಳನ್ನು ಕೂಗಿ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುವಂತೆ ಆಗ್ರಹಿಸಿದರು.

image001special-adalat-mini-vidhana-soudha-th-20160611-001 image001nrss-protest--20160611-001

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಅವರು ಸ್ಥಳೀಯ ಚಾನೆಲಿನ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ನಮ್ಮ ಉದ್ದೇಶವಲ್ಲ ಬದಲಾಗಿ ಈ ಕಾರ್ಯಕ್ರಮದಲ್ಲಿ ಸದಾನಂದಗೌಡ ಹಾಗೂ ವೀರಪ್ಪ ಮೊಯ್ಲಿ ಅವರು ಭಾಗವಹಿಸುತ್ತಾರೆ ಎಂಬ ಮಾಹಿತಿಯ ಮೇರೆಗೆ ಅವರಿಗೆ ಕರಿಪತಾಕೆ ಹಿಡಿಯಲು ಬಂದಿರತ್ತೇವೆ. ಆದರೆ ನಮ್ಮ ಪ್ರತಿಭಟನೆಯ ಬಗ್ಗೆ ಮೊದಲೇ ಅರಿವಿದ್ದ ಕಾರಣ ಇಬ್ಬರೂ ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿಯೂ ಇಬ್ಬರಿಗೂ ಕೂಡ ನಗರದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುವುದಿಲ್ಲ ಎಂದರು.
ನಗರಲ್ಲಿನ ಎಲ್ಲಾ ಸಂಘಸಂಸ್ಥೆಗಳು ಇಬ್ಬರೂ ನಾಯಕರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದ ಶೆಟ್ಟಿ, ಇನ್ನೂ ತಡವಾಗಿಲ್ಲ ಇಬರಿಬ್ಬರೂ ಸರಕಾರದ ಮನವೊಲಿಸಿ ಯೋಜನೆಯನ್ನು ಹಿಂಪಡೆಯಬಹುದು. ಯೋಜನೆಯನ್ನು ಕೈಬಿಡುವವರೆಗೆ ಮೊಯ್ಲಿ ಹಾಗೂ ಗೌಡರನ್ನು ನಗರಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಸತ್ಯಜಿತ್ ಸುರತ್ಕಲ್, ಎಮ್ ಜಿ ಹೆಗ್ಡೆ, ಕೆ ಎನ್ ಸೋಮಶೇಖರ್, ಹರಿಕ್ವೃಷ್ಣ ಬಂಟ್ವಾಳ್, ದಿನಕರ್ ಶೆಟ್ಟಿ ಯೋಗಿಶ್ ಶೆಟ್ಟಿ, ಸತ್ಯಜಿತ್ ಸುರತ್ಕಲ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Spread the love