ಕಾವೂರು | ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ : 17 ಮಂದಿಯ ಬಂಧನ
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೊಲ್ಪುಗುಡ್ಡೆ ಗ್ರಾಮದ ಮನೆಯೊಂದರಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದ 17 ಮಂದಿಯನ್ನು ಕಾವೂರು ಪೊಲೀಸರು ಶನಿವಾರ ರಾತ್ರಿ 11:30ಕ್ಕೆ ಬಂಧಿಸಿದ್ದಾರೆ.
ಬಂಧಿತರನ್ನು ದೇರೆಬೈಲ್, ಕೊಂಚಾಡಿ, ಎಯ್ಯಾಡಿಯ ನಿವಾಸಿಗಳಾದ ದಿಕ್ಷೀತ್, ದಯಾನಂದ, ರಾಘವೇಂದ್ರ, ವೈಶಾಕ್ ಶೆಟ್ಟಿ, ಉಮೇಶ್, ಗೌತಮ್, ಫರಂಗಿಪೇಟೆಯ ಪ್ರವೀಣ್ ಕುಮಾರ್, ಕಾಪುವಿನ ಶಾಹುಲ್ ಹಮೀದ್, ಬಜ್ಪೆ ಕಟೀಲು ನಡುಗೋಡುವಿನ ತಿಲಕ್‌ರಾಜ್, ವಾಮಂಜೂರಿನ ಜಯಾನಂದ್ ಎಸ್., ಕೂಳೂರಿನ ಲಾರೆನ್ಸ್ ರಾಜಾ ಡಿಸೋಜ, ಉಳ್ಳಾಲ ಹೊಯ್ಗೆ ಗದ್ದೆಯ ಇನಸ್ ಡಿಸೋಜ, ಉಳ್ಳಾಲ ಬೈಲ್‌ನ ಮುಹಮ್ಮದ್ ಅಶ್ರಫ್, ಪೆರ್ಮನ್ನೂರಿನ ಮುಹಮ್ಮದ್ ಫಯಾಝ್, ಉಳ್ಳಾಲದ ಮುಸ್ತಫ, ಆಡಂಕುದ್ರುವಿನ ಸುನೀಲ್ ಡಿಸೋಜ, ತಮಿಳ್ ನಾಡಿನ ಕಣ್ಣನ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 1.92 ಲಕ್ಷ ರೂ. ನಗದು ಹಾಗೂ 18 ಮೊಬೈಲ್‌ಗಳನ್ನು ವಶಪಡಿಸಲಾಗಿದೆ. ಒಟ್ಟಾರೆ ವಶಪಡಿಸಿಕೊಂಡ ಸೊತ್ತಿನ ಮೌಲ್ಯ 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ಉತ್ತರ ಉಪವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಶ್ರೀಕಾಂತ್ ಕೆ. ಅವರ ಸೂಚನೆಯಂತೆ ಕಾವೂರು ಠಾಣೆಯ ಎಸ್ಸೈ ಮಲ್ಲಿಕಾರ್ಜುನ ಬಿರಾದಾರ ನೇತೃತ್ವದ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತರ ಕಚೇರಿಯ ಸಿಬ್ಬಂದಿಗಳಾದ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಕಾವೂರು ಠಾಣೆಯ ಎಸ್ಸೈ ಜಯರಾಮ್, ಮಂಜುನಾಥ, ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಜೂಜಾಟಕ್ಕೆ ಬಳಸಿದ ಮನೆಯ ಮಾಲಕರು ಮತ್ತು ಬಾಡಿಗೆದಾರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.