ಕಾವ್ಯಳದ್ದು ಕೊಲೆಯಲ್ಲ; ಆತ್ಮಹತ್ಯೆ – ಮೂಡಬಿದರೆ ಪೋಲಿಸ್ ಸ್ಪಷ್ಟನೆ

Spread the love

ಕಾವ್ಯಳದ್ದು ಕೊಲೆಯಲ್ಲ; ಆತ್ಮಹತ್ಯೆ – ಮೂಡಬಿದರೆ ಪೋಲಿಸ್ ಸ್ಪಷ್ಟನೆ

ಮೂಡಬಿದರೆ: ನಿಘೂಡವಾಗಿ ಸಾವನಪ್ಪಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳದ್ದು ಕೊಲೆಯಲ್ಲ ಬದಲಾಗಿ ಆತ್ಮಹತ್ಯೆ ಎಂದು ಮೂಡಬಿದರೆ ಪೋಲಿಸರು ತಿಳಿಸಿದ್ದಾರೆ.

ಕಾವ್ಯಳ ಆತ್ಮಹತ್ಯೆ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗುತ್ತಿದ್ದಂತೆ ಮಂಗಳೂರು ನಗರ ಪೊಲಿಸ್ ಕಮೀಷನರ್ ಡಿ ಆರ್ ಸುರೇಶ್ ತನಿಖೆಗೆ ಆದೇಶ ನೀಡಿದ್ದು ಪೋಲಿಸರು ತನಿಖೆಯನ್ನು ಕೈಗೊಂಡಿದ್ದಾರೆ. ಕಾವ್ಯ ಆತ್ಮಹತ್ಯೆಗೆ ಬಳಸಿರುವ ಸೀರೆ ಆಕೆಯ ರೂಮ್ ಮೇಟ್ ಳದ್ದು ಎಂದು ತನಿಖೆಯಿಂದ ತಿಳಿದು ಬಂದಿದೆ ಅಲ್ಲದೆ ಕಾವ್ಯ ತಾನು ಹಿಂದಿ ಪರೀಕ್ಷೆಯಲ್ಲಿ ಪಡೆದಿರುವ ಅಂಕದ ಬಗ್ಗೆ ಆತಂಕಗೊಂಡು ಮಾನಸಿಕವಾಗಿ ಖಿನ್ನಳಾಗಿದ್ದಳು. ಆದ್ದರಿಂದ ಹೆತ್ತವರ ಭಯದಿಂದ ಆತ್ಮಹತ್ಯೆಯ ದಾರಿ ಹಿಡಿದಿರುವ ಸಾಧ್ಯತೆ ಇದೆ ಎಂದು ಪೋಲಿಸರು ತಿಳಿಸಿದ್ದಾರೆ.

ಕಾವ್ಯ ಹೆತ್ತವರಲ್ಲಿ ಫೋನ್ ಮಾಡಿದಾಗ ತನಗೆ ನಾಲ್ಕು ಗಂಟೆಗೆ ತರಬೇತಿಗೆ ಹೋಗಲು ಇದೆ ಎಂದು ತಿಳಿಸಿದ್ದಳು ಆದರೆ ಇದನ್ನು ಕಾಲೇಜು ಆಡಳಿತ ಮಂಡಳಿ ನಿರಾಕರಿಸಿದೆ. ತರಬೇತಿ ಇದ್ದಿರುವುದು ಸಂಜೆ 4 ಗಂಟೆಗೆ. ತರಬೇತಿಗೆಂದು ಟ್ರಾಕ್ ಸೂಟ್ ಧರಿಸಿ ತಯಾರದಾದ ಕಾವ್ಯ ತನ್ನ ಜೊತೆಗಿದ್ದ ಇತರ ವಿದ್ಯಾರ್ಥಿಗಳು ಹೊರಹೋಗುವರೆಗೂ ಕಾದು ನಂತರ ರೂಮಿನೊಳಗೆ ಸೇರಿ ಚಿಲಕ ಹಾಕಿಕೊಂಡು, ನಂತರ ತನ್ನ ಸ್ನೇಹಿತೆಯ ಕಪಾಟಿನಿಂದ ಸೀರೆ ತೆಗೆದು ಫ್ಯಾನಿಗೆ ಕಟ್ಟಿಕೊಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಲಿಸರು ಮಾಹಿತಿ ನೀಡಿದ್ದಾರೆ.

ಘಟನೆಯ ಅರ್ಧಗಂಟೆಯ ಬಳಿಕ ಹೊರಹೋಗಿದ್ದ ವಿದ್ಯಾರ್ಥಿಗಳು ವಾಪಾಸು ಬಂದಿದ್ದು, ಕೊಠಡಿಯ ಬಾಗಿಲಿಗೆ ಒಳಗಿನಿಂದ ಲಾಕ್ ಆಗಿತ್ತು. ಎಷ್ಟು ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರದೆ ಹೋದಾಗ ಸಂಶಯದಿಂದ ಕಿಟಕಿಯಿಂದ ನೋಡಿದಾಗ ಘಟನೆ ಬಯಲಾಗಿತ್ತು. ಈ ಸಂದರ್ಭ ನೇಣು ಬಿಗಿದ ಸ್ಥಿತಿಯಲ್ಲೇ ಕಾವ್ಯ ಅರೆಜೀವದಲ್ಲಿದ್ದದ್ದನ್ನು ವಿದ್ಯಾರ್ಥಿನಿಯರು ಗಮನಿಸಿ ನೇಣಿನಿಂದ ಕಾವ್ಯಾಳನ್ನು ಇಳಿಸಲಾಗಿದೆ. ತಕ್ಷಣವೇ ಕಾಲೇಜು ಆಡಳಿತ ಮಂಡಳಿಯವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಕೆಯನ್ನು ಬದುಕಿಸುವ ಉದ್ದೇಶದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವುದಾಗಿ ಪೋಲಿಸರು ತಿಳಿಸಿದ್ದಾರೆ.


Spread the love

2 Comments

  1. Before just starting the investigation how can the police say like this? Are they astrologers?

  2. Wen d investigation is not completed y the anti alvasians expecting d judgement will be a murder and opposing the news which is stating it as a suicide….by policemen. Wen the social media and news channels and foolish ppl accepting widout knowing alvas…widout knoqing rules ..widout knowing d kid at least can come to a judgement of murder…y not police cant come to a decision of suicide aftr exmaining d roomates…classmates…death area…cc tv footage…etc and all????. Policers are nt astrolgers…but they are brilliant dan us…they can suspect a case which is suicide which is murder…which is robery…Wait fr d complete enquiry and decide wht….unless dnt try to throw words against alvas instititutions and beloved chairman sir. He is our father fr 3 yrs and still in dat position…dnt try to bring down him mentally…

Comments are closed.