ಕುಂಜಾಲು ಹಸುವಿನ ರುಂಡ ಪ್ರಕರಣವನ್ನು ಕೋಮು ನಿಗ್ರಹ ಪಡೆಗೆ ವಹಿಸಿಲು ಜಿಲ್ಲಾ ಯುವ ಕಾಂಗ್ರೆಸ್ ಮನವಿ
ಉಡುಪಿ: ಕುಂಜಾಲು ಬಳಿ ಹಸುವಿನ ಹತ್ಯೆ ಮಾಡಿದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಕೋಮು ನಿಗ್ರಹ ಪಡೆಗೆ ವರ್ಗಾಯಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜೂನ್ 28 ರಂದು ಕುಂಜಾಲುವಿನಲ್ಲಿ ಹಸುವಿನ ಹತ್ಯೆ ನಡೆದು ಅದರ ರುಂಡವನ್ನು ರಸ್ತೆಯಲ್ಲಿ ಎಸೆದ ಪ್ರಕರಣವನ್ನು 24 ಘಂಟೆಯೊಳಗೆ ಆರೋಪಿಗಳನ್ನೂ ಹಿಡಿದು ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನೆಡೆಯದಂತೆ ನೋಡಿಕೊಂಡಿರುವ ಉಡುಪಿ ಜಿಲ್ಲೆಯ ಪೊಲೀಸ ಕೆಲಸ ಅಭಿನಂದನೀಯ.
ಸದ್ರಿ ಘಟನೆಯು ಉಡುಪಿ ಜಿಲ್ಲೆಯ ಕುಂಜಾಲು ಪರಿಸರದಲ್ಲಿ ಗೋವಿನ ಹತ್ಯೆಯ ಮಾಡಿ ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಡಿಸುವ ಉದ್ದೇಶ ಇಟ್ಟುಕೊಂಡಿರುವ ಪ್ರಭಾವಿ ವ್ಯಕ್ತಿಗಳು ಇರುವ ಶಂಕೆ ಇದ್ದು ಇಂತಹವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡು ಶಾಶ್ವತವಾಗಿ ಇಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ ಹೆಚ್ಚಿನ ತನಿಖೆಗಾಗಿ ಕೋಮು ನಿಗ್ರಹ ಪಡೆಗೆ ವರ್ಗಾಯಿಸುವ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರಾ, ಯುವ ಕಾಂಗ್ರೆಸ್ ಮುಖಂಡ ನವೀನ್ ಸಾಲಿಯಾನ್ ಹಾಗೂ ಇತರರು ಉಪಸ್ಥಿತರಿದ್ದರು.