ಕುಂದಾಫುರ: ಶಾಸಕ ಹಾಲಾಡಿಯವರಿಗೆ ಮತ್ತೆ ಕರೆ; ಹಣಬೇಡ-ಇನ್ನು ಕರೆ ಮಾಡುವುದಿಲ್ಲ ಎಂದು ವ್ಯಕ್ತಿ

Spread the love

ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಳೆದ ಎರಡು ದಿನಗಳಿಂದ ಬರುತ್ತಿದ್ದ ಬೆದರಿಕೆ ಕರೆ ಬುಧವಾರವೂ ಬಂದಿದೆ. ಸಾಯಂಕಾಲ 4.30-5 ಗಂಟೆಯ ನಡುವಿನ ವೇಳೆಯಲ್ಲಿ ಕರೆ ಬಂದಿದ್ದು. ಕರೆಯನ್ನು ಶಾಸಕರೇ ಸ್ವೀಕರಿಸಿದ್ದಾರೆ.

ಕರೆ ಮಾಡಿದ ವ್ಯಕ್ತಿ ` ನನಗೆ ನಿಮ್ಮ ಹಣ ಬೇಡ. ನೀವು ಬಡವರಿಗೆ ಸಹಾಯ ಮಾಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದೀರಿ. ಆದರೆ ಅದರೊಟ್ಟಿಗೆ ಒಬ್ಬ ವ್ಯಕ್ತಿಗೆ ಸಹಾಯ ಮಾಡುತ್ತಿದ್ದೀರಿ. ಆ ವ್ಯಕ್ತಿ ಒಳ್ಳೆಯವನಲ್ಲ ಅವನಿಗೆ ಸಹಾಯ ಮಾಡುವುದು ಬೇಡ. ಇನ್ನು ಮುಂದೆ ನಾನು  ಕರೆ ಮಾಡುವುದಿಲ್ಲ” ಎಂದು ಹೇಳಿದ್ದಾನೆ ಎಂದು ಶಾಸಕರು  ತಿಳಿಸಿದ್ದಾರೆ.

ಸೋಮವಾರದಿಂದ ಬೇರೆ ಬೇರೆ ನಂಬರ್‍ಗಳಿಂದ ಶಾಸಕರ ಮೊಬೈಲ್‍ಗೆ ಇಂಟರ್‍ನೆಟ್ ಕರೆ ಬಂದಿದೆ. ಮೊದಲ ಬಾರಿಗೆ ಸೋಮವಾರ ಮಧ್ಯಾಹ್ನ ಕರೆ ಮಾಡಿದಾಗ `ತಾನು ಭೂಗತ ಪಾತಕಿ ರವಿಪೂಜಾರಿ, ತನಗೆ ಹಣ ನೀಡದಿದ್ದರೆ ಕೊಲೆ ಮಾಡುತ್ತೇನೆ’ ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿದ್ದ.

ಬೆದರಿಕೆ ಕರೆ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕರ ಮನೆಗೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಶಾಸಕರಿಗೆ  ಗನ್‍ಮ್ಯಾನ್ ಹಾಗೂ ಮನೆಗೆ ಸೆಕ್ಯುರಿಟಿ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಜೊತಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಇದರ ನಡುವೆ ಮಂಗಳವಾರ ಮತ್ತೆ  ಕರೆ ಬಂದಿತ್ತು. ಒಂದೆ ಸಲ ಕರೆಯನ್ನು ಆಪ್ತ ಸಹಾಯಕರು ಸ್ವೀಕರಿಸಿದ್ದರು. ಶಾಸಕರು ಇಲ್ಲ ಎಂದು ಹೇಳಿದ್ದಕ್ಕೆ ಕರೆ ಕಟ್ ಆಗಿತ್ತು. ಬಳಿಕ ಹಲವು ಬಾರಿ ಕರೆ ಬಂದರೂ ಪೆÇಲೀಸರ ಆದೇಶದ ಹಿನ್ನೆಲೆಯಲ್ಲಿ ಸ್ವೀಕರಿಸಲಾಗಿಲ್ಲ. ಬುಧವಾರ ಮತ್ತೆ ಬೇರೆ ನಂಬರ್‍ನಿಂದ ಕರೆ ಬಂದಿದ್ದು, ಇದರೆ ಕರೆ ಮಾಡಿದಾಗ `ಹಣ ಬೇಡ-ಇನ್ನು ಕರೆ ಮಾಡುವುದಿಲ್ಲ’ ಎಂದು ಹೇಳಿದ್ದು ಆಶ್ಚರ್ಯ ಮೂಡಿಸುತ್ತದೆ.

ಕರೆ ಮಾಡಿದವರು ಯಾರೇ ಆಗಿರಲಿ ಶಾಸಕರಿಗೆ ಬೆದರಿಕೆ ಕರೆ ಮಾಡಿ ಅವರು ಅಪರಾಧ ಮಾಡಿದ್ದಾರೆ. ಪೆÇಲೀಸ್ ಸ್ಟೇಷನಲ್ಲಿ ಪ್ರಕರಣ ದಾಖಲಾಗಿರುವುದರಿಂದ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತೇವೆ.ಕರೆ ಮಾಡಿದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಪೋಲಿಸ್ ಅಧಿಕ್ಷಕ್ ಅಣ್ಣಾಮಲೈ ತಿಳಿಸಿದ್ದಾರೆ


Spread the love