ಕುಂದಾಫುರ ಸಹಾಯಕ ಕಮೀಷನರ್ ಡಾ|ಮಧುಕೇಶ್ವರ್ ಮನೆ ಮೇಲೆ ಎಸಿಬಿ ದಾಳಿ

Spread the love

ಕುಂದಾಫುರ ಸಹಾಯಕ ಕಮೀಷನರ್ ಡಾ|ಮಧುಕೇಶ್ವರ್ ಮನೆ ಮೇಲೆ ಎಸಿಬಿ ದಾಳಿ

ಕುಂದಾಪುರ : ಕುಂದಾಫುರದ ಸಹಾಯಕ ಕಮೀಷನರ್ ಡಾ|ಮಧುಕೇಶ್ವರ್ ಅವರ ಮನೆಯ ಮೇಲೆ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಕುಂದಾಪುರದಿಂದ ವರ್ಗಾವಣೆಯಾದರೂ ಕೂಡ ತಮ್ಮ ಕಚೇರಿಯ ಪಕ್ಕದಲ್ಲೇ ಇರುವ ಸರಕಾರಿ ಬಂಗಲೆಯಲ್ಲಿ ಕುಳಿತು ಕಡತ ವಿಲೇವಾರಿ ಮಾಡುತ್ತಿದ್ದ ಡಾ| ಮಧುಕೇಶ್ವರ್ ಅವರು ಕುರಿತು ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಡತ ವಿಲೇವಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಕುರಿತು ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿದ್ದು, ಗುರುವಾರ ಎಸಿಬಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಹಿರಿಯ ಕೆ ಎ ಎಸ್ ಶ್ರೇಣಿಯ ಅಧಿಕಾರಿಯಾಗಿ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಕುಂದಾಪುರದ ಎಸಿ ಯಾಗಿ ಅಧಿಕಾರ ಸ್ವೀಕರಿಸಿದ ಡಾ. ಮಧುಕೇಶ್ವರ ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಆಗಿ ಪ್ರತಿಯೊಂದು ಕಡತ ವಿಲೇವಾರಿಗೂ ಲಂಚಕ್ಕಾಗಿ ಕೈಚಾಚುತ್ತಿದ್ದರು ಅನ್ನೋ ಆರೋಪವಿದ್ದು ಸಾರ್ವಜನಿಕರು ಹಿಡಿ ಶಾಪ ಹಾಕಿದ್ದ ಘಟನೆಯೂ ನಡೆದಿತ್ತು.
ಡಾ. ಮಧುಕೇಶ್ವರ ಅವರ ಮೇಲೆ ಬಹಳಷ್ಟು ದೂರು ಬಂದ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಡಾ. ಮಧುಕೇಶ್ವರ ಮಂಗಳವಾರವಷ್ಟೇ ಕುಂದಾಪುರ ಉಪವಿಭಾಗದಿಂದ ವರ್ಗಾವಣೆಗೊಂಡಿದ್ದರು. ಆದರೆ ಯಾವ ಸ್ಥಳವೂ ನಿಗಧಿಯಾಗಿರಲಿಲ್ಲ. ಹೊಸದಾಗಿ ಬಂದಿರುವ ಉಪವಿಭಾಗಾಧಿಕಾರಿ ರಾಜು ಕೆ ಅವರಿಗೆ ನಿರ್ಗಮನ ಅಧಿಕಾರಿಯಾಗಿ ಮಧುಕೇಶ್ವರ್ ಮನೆ ಬಿಟ್ಟುಕೊಡಬೇಕಿತ್ತು. ಆದರೆ ಅದೇ ಮನೆಯೊಳಗೆ ಲಂಚ ಪಡೆದು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಸಾರ್ವಜನಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ಉಡುಪಿ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ಇಂದು ದಾಳಿ ನಡೆದಿದೆ. ದಾಳಿ ಸಂದರ್ಭ ಆರೋಪಿ ಮಧುಕೇಶ್ವರ್ ಉಪವಿಭಾಗಾಧಿಕಾರಿಗಳಿಗೆ ಸರ್ಕಾರ ನೀಡಿರುವ ವಸತಿಗೃಹದಲ್ಲಿಯೇ ಕಡತ ವಿಲೇವಾರಿ ಮಾಡುತ್ತಿದ್ದು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಈ ಸಂದರ್ಭ ೨೩ ಕಡತಗಳನ್ನು ಅಕ್ರಮವಾಗಿ ವಿಲೇವಾರಿ ನಡೆಸಲಾಗುತ್ತಿದ್ದು ಕಡತಗಳನ್ನು ಮತ್ತು 1 ಲಕ್ಷ 28 ಸಾವಿರ ರೂಪಾಯಿ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಕೆಲಸ ಮಾಡಿಸಿಕೊಡಲು ಲಂಚ ನೀಡಿದವರನ್ನೂ ಕಚೇರಿಯೊಳಗೆ ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದೆ.


Spread the love