ಕುಟುಂಬ ಜೀವನದಲ್ಲಿ ಆಧ್ಯಾತ್ಮಿಕತೆ ಪ್ರೀತಿ ಒಳ್ಳೆಯ ನಡತೆ ಮೂಡಿಬರಲಿ- ನಿಯೋಜಿತ ಬಿಷಪ್ ಡಾ. ಪೀಟರ್ ಪಾವ್ಲ್  

Spread the love

ಕುಟುಂಬ ಜೀವನದಲ್ಲಿ ಆಧ್ಯಾತ್ಮಿಕತೆ ಪ್ರೀತಿ ಒಳ್ಳೆಯ ನಡತೆ ಮೂಡಿಬರಲಿ- ನಿಯೋಜಿತ ಬಿಷಪ್ ಡಾ. ಪೀಟರ್ ಪಾವ್ಲ್  

ಮಂಗಳೂರು : ಮರಿಯಮ್ಮ ಸೊಡಲಿಟಿ ಮಂಗಳೂರು ಇದರ ಕುಟುಂಬ ಸದಸ್ಯರ ಸಹಮಿಲನವು ಜೆಪ್ಪು ಚರ್ಚ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಗಳಾಗಿ ಪಾಲ್ಗೊಂಡ ನಿಯೋಜಿತ ಬಿಷಪ್ ಮೊನ್ಸಿಜರ್ ಪೀಟರ್ ಪೌಲ್ ಸಲ್ಡಾನ ನವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಹಾಗೂ ಪ್ರತಿಭಾವಂತರನ್ನು ಸನ್ಮಾನಿಸಿ ಮಾತನಾಡಿ ಇಂದು ನಮ್ಮ ಮನೆಯಲ್ಲಿ ಅಧ್ಯಾತ್ಮಿಕ ಜೀವನ ಪ್ರೀತಿ ಒಳ್ಳೆಯ ನಡತೆವಿದ್ದಲ್ಲಿ ಅದು ಸಮಾಜದಲ್ಲಿ ಒಳ್ಳೆಯ ವಾತಾವರಣವನ್ನು ಕಲ್ಪಿಸುತ್ತದೆ ಮಾತ್ರವಲ್ಲ ದೇವರು ಮನುಷ್ಯರಿಗೆ ಕೇವಲ ಆಧ್ಯಾತ್ಮಿಕ ಜೀವನ ಮಾತ್ರವಲ್ಲ ಅದರೊಡನೆ ಪರರಲ್ಲಿ ಅವರನ್ನು ಕಾಣುವುದನ್ನು ಆಶಿಸುತ್ತಾರೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಾತ್ಮಿಕ ನಿಧೇರ್ಶಕರಾದ ವಂ| ಡೈನಿಶಿಯಸ್‍ರವರು ಮಾತನಾಡಿ ನಮ್ಮ ಕುಟುಂಬದಲ್ಲಿ ದಯೆ, ಧನ್ಯವಾದ ಹಾಗೂ ಕ್ಷಮೆ ಎಂಬ ಮೂರು ಶಬ್ದಗಳು ಉಪಯೋಗವಾದಲ್ಲಿ ಕುಟುಂಬ ಜೀವನವು ಅನ್ಯೋನತೆಯಿಂದ ಬಾಳುವುದರಲ್ಲಿ ಸಂಶಯವಿಲ್ಲ. ಕಾರ್ಯಕ್ರಮದಲ್ಲಿ ಹಿರಿಯರ ಜೊತೆಗೆ ಯುವಕರನ್ನು ಪ್ರೋತ್ಸಾಹಿಸುವುದು ನಿಜವಾಗಿಯೂ ಅನುಕರಣಿಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊಫೆಸರ್ ಮರಿಯೋಡಸ್, ಹಿರಿಯ ಸದಸ್ಯರಾದ ಮಾರ್ಕ್ ರೊಡ್ರಿಗಸ್, ಮಾಸ್ಟರ್ ಅಂಜೆಲೊ ನೊರೊನ್ಹ ರªರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಸದಸ್ಯರಿಂದ ವಿವಿಧ ಮನೋರಂಜನೆಯ ಕಾರ್ಯಕ್ರಮ ಎರ್ಪಡಿಸಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಚಾಲಕರಾದ ಸುಶೀಲ್ ನೊರೊನ್ಹಾ, ಜೆಪ್ಪು ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಕ್ಷಿಫರ್ಡ್ ಫೆರ್ನಾಡಿಸ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಮೆಲ್ವಿನ್ ಪಿಂಟೊ ಸ್ವಾಗತಿಸಿ ಕಾರ್ಯದರ್ಶಿ ಲಿಗೋರಿ ಫೆರ್ನಾಂಡಿಸ್ ವಂದಿಸಿದರು. ಶ್ರೀಮತಿ ಸೀಮಾ ತಾವ್ರೊ ನಿರೂಪಿಸಿದರು.


Spread the love