ಕುಡುಪು ದೇವಳದಲ್ಲಿ ಜಿಲ್ಲೆಯ ಪ್ರಸಿದ್ಧ ಬ್ರಹ್ಮವಾಚಕರಿಗೆ ಗೌರಪಾರ್ಪಣೆ

Spread the love

ಕುಡುಪು ದೇವಾಳದಲ್ಲಿ ಜಿಲ್ಲೆಯ ಪ್ರಸಿದ್ಧ ಬ್ರಹ್ಮವಾಚಕರಿಗೆ ಗೌರಪಾರ್ಪಣೆ

ಮಂಗಳೂರು : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಳದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯುತ್ತಿದ್ದ ಈ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಸುಮಾರು 30 ಮಂದಿ ಬ್ರಹ್ಮ ವಾಹಕರಿಗೆ (ದೇವರು ಹೊರುವವರು) ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸನ್ಮಾನವನ್ನು ದೇವರು ಹೊರುವವರಾದ (ಬ್ರಹ್ಮವಾಹಕರು) ಕೃಷ್ಣ ಮೂರ್ತಿ ಭಟ್ ಮಂಗಳಾದೇವಿ, ಹರಿಪ್ರಸಾದ್ ಭಟ್ ಮಂಗಳಾದೇವಿ, ಕೃಷ್ಣಭಟ್ ಕದ್ರಿ, ಲಕ್ಷ್ಮೀ ನಾರಾಯಣಭಟ್ ಕುತ್ಯಾರು, ಮೋಹನ ಭಟ್ ಹೊೈಗೆ ಗುಡ್ಡೆ, ಲಕ್ಷ್ಮೀನಾರಾಯಣ ಭಟ್ ಹೊೈಗೆ ಗುಡ್ಡೆ, ಕೇಶವ ಭಟ್ ಹೊೈಗೆಗುಡ್ಡೆ, ಅಚ್ಯುತ ಭಟ್ ಪಾವಂಜೆ, ಬಾಲಕೃಷ್ಣ ತಂತ್ರಿ ಕಟೀಲು, ಗೋಪಾಲಕೃಷ್ಣ ಭಟ್ ಕುಂಬಳೆ, ಕೃಷ್ಣಭಟ್ ಬಿರ್ಲಾಯಿ ಪುತ್ತಿಗೆ, ಗೊಪಾಲಭಟ್ ಬಿರ್ಲಾಯಿ ಪುತ್ತಿಗೆ, ಹರಿನಾರಾಯಣ ಮಯ್ಯ, ಜಗನ್ನಾಥ ಭಟ್ ಹೊೈಗೆಗುಡ್ಡೆ, ಉಮೇಶ ಅಗ್ನಿತ್ತಾಯ, ಕೃಷ್ಣ ಹೊಳ್ಳ ಬಾರೆ, ವಿಷ್ಣು ಮೂರ್ತಿ ಕಾರಂತ ಕುಳಾಯಿ, ಮಾಧವ ಮಯ್ಯ ಪೊಳಲಿ, ಮಹಾದೇವ ಭಟ್ ಕೇರ್ವಾಶೆÉ. ನಾರಾಯಣ ಮಯ್ಯ ಅರಸಿಕಟ್ಟೆ, ಉದಯ ಕುಮಾರ್ ಕಲ್ಲುರಾಯ ಮಧೂರು, ರಾಜ ಐತಾಳ್ ಪೊಳಲಿ, ಸದಾಶಿವ ಭಟ್ ರೆಂಜಾಳ, ಧನಂಜಯ ಕೆಕ್ಕುಣ್ಣಾಯ, ಮಧೂರು, ಪ್ರದೀಪ್ ಪಣಂಬೂರು, ನರೇಶ ಕಾರಂತ ಕುಳಾಯಿ, ಸುಬ್ರಮ್ಮಣ್ಯ ಉಪರ್ಣ ಪದ್ಮುಂಜೆ, ಹರಿಪ್ರಸಾದ ಉಪಾಧ್ಯಾಯ ಶರವೂರು, ಲಕ್ಷ್ಮೀನಾರಾಯಣ ಭಟ್ ಪಚ್ಚನಾಡಿಯವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ ನರಸಿಂಹ ತಂತ್ರಿ, ಕಾರ್ಯಾಧ್ಯಕ್ಷರಾದ ಮೊಕ್ತೇಸರರಾದ ಭಾಸ್ಕರ. ಕೆ, ಉಪಾಧ್ಯಕ್ಷರಾದ ಕೆ. ಮನೋಹರ ಭಟ್, ಪದ್ಮನಾಭ ಪೆದಮಲೆ, ಪಂಜ ಭಾಸ್ಕರ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಆಧ್ಯಕ್ಷರಾದ ಕೆ.ಸುದರ್ಶನ ಕುಡುಪು, ದೇವಳದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಉಪಸ್ಥಿತರಿದ್ದರು.

ಹರಿಯರಾದ ವಿದ್ವಾನ್ ಪಂಜ ಬಾಸ್ಕರ ಭಟ್‍ರವರು ಬ್ರಹ್ಮವಾಹಕದ ಕೆಲಸದ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷರಾದ ಕೆ ಕೃಷ್ಣರಾಜ ತಂತ್ರಿಯವರು ಎಲ್ಲಾ ಬ್ರಹ್ಮವಾಹಕದ ಕುರಿತು ಸ್ಥೂಲವಾದ ವ್ಯಕ್ತಿ ಪರಿಚಯ ಮಾಡಿದರು. ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು.


Spread the love