ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ತಜ್ಞ ವೈದ್ಯರ ಸಮಾಲೋಚನೆಗಾಗಿ ‘ಸಂಜೆ ಕ್ಲಿನಿಕ್’ ಆರಂಭ
ಮಂಗಳೂರು, ಜುಲೈ 21: ಸಾಮಾನ್ಯ ಕೆಲಸದ ಸಮಯದ ನಂತರವೂ ಸುಲಭವಾಗಿ ಆರೋಗ್ಯ ಸೇವೆ ಪಡೆಯುವ ಅಗತ್ಯ ಹೆಚ್ಚುತ್ತಿರುವುದನ್ನು ಮನಗಂಡು, ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು, ತಜ್ಞ ವೈದ್ಯರ ಸಮಾಲೋಚನೆಯನ್ನು ಇನ್ನಷ್ಟು ಅನುಕೂಲಕರವಾಗಿಸಲು ವಿಶೇಷ ‘ಸಂಜೆ ಕ್ಲಿನಿಕ್’ ಅನ್ನು ಆರಂಭಿಸಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಹಗಲಿನ ವೇಳೆ ಆಸ್ಪತ್ರೆಗೆ ಭೇಟಿ ನೀಡಲು ಕಷ್ಟಪಡುವವರಿಗೆ ಈ ಸೇವೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.
ಸಂಜೆ ಕ್ಲಿನಿಕ್ ಸಂಜೆ 5:00 ರಿಂದ 7:00 ರವರೆಗೆ ಕಾರ್ಯನಿರ್ವಹಿಸಲಿದ್ದು, ಆರಾಮದಾಯಕ ಹಾಗೂ ರೋಗಿ-ಸ್ನೇಹಿ ವಾತಾವರಣದಲ್ಲಿ ವಿವಿಧ ವಿಭಾಗಗಳ ಅನುಭವಿ ತಜ್ಞ ವೈದ್ಯರ ಸಮಾಲೋಚನೆ ಪಡೆಯಲು ರೋಗಿಗಳಿಗೆ ಅವಕಾಶ ಕಲ್ಪಿಸಲಿದೆ. ಕೆಲಸದಿಂದ ರಜೆ ಪಡೆಯುವ ಅಥವಾ ಮುಖ್ಯ ಬದ್ಧತೆಗಳನ್ನು ತಪ್ಪಿಸಿಕೊಳ್ಳುವ ಅನಾನುಕೂಲತೆಯಿಲ್ಲದೆ, ಸಕಾಲದಲ್ಲಿ ವೈದ್ಯಕೀಯ ಸೇವೆ ಪಡೆಯಲು ಈ ಕ್ಲಿನಿಕ್ ನೆರವಾಗಲಿದೆ.
ಈ ಕ್ಲಿನಿಕ್‌ನಲ್ಲಿ ಈ ಕೆಳಗಿನ ವಿಭಾಗಗಳಲ್ಲಿ ಸಮಾಲೋಚನೆ ಲಭ್ಯವಿರುತ್ತದೆ: ಹೃದ್ರೋಗ ಶಾಸ್ತ್ರ (ಕಾರ್ಡಿಯಾಲಜಿ), ಸಾಮಾನ್ಯ ವೈದ್ಯಕೀಯ (ಜನರಲ್ ಮೆಡಿಸಿನ್), ಹಸ್ತ ಶಸ್ತ್ರಚಿಕಿತ್ಸೆ (ಹ್ಯಾಂಡ್ ಸರ್ಜರಿ), ಮೂತ್ರಪಿಂಡ ಶಾಸ್ತ್ರ (ನೆಫ್ರಾಲಜಿ), ಮೆದುಳಿನ ಶಸ್ತ್ರಚಿಕಿತ್ಸೆ (ನ್ಯೂರೋಸರ್ಜರಿ), ಪ್ರಸೂತಿ ಹಾಗೂ ಸ್ತ್ರೀ ರೋಗ ಶಾಸ್ತ್ರ (ಒಬಿಜಿ / OBG), ಕ್ಯಾನ್ಸರ್ ಶಾಸ್ತ್ರ (ಆಂಕೋಲಜಿ), ಮೂಳೆ ಶಾಸ್ತ್ರ (ಆರ್ಥೋಪೆಡಿಕ್ಸ್), ಮಕ್ಕಳ ಶಾಸ್ತ್ರ (ಪೀಡಿಯಾಟ್ರಿಕ್ಸ್), ಪ್ಲಾಸ್ಟಿಕ್ ಹಾಗೂ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ, ಮಾನಸಿಕ ತಜ್ಞರು (ಸೈಕಿಯಾಟ್ರಿ), ಶ್ವಾಸಕೋಶ ಶಾಸ್ತ್ರ (ರೆಸ್ಪಿರೇಟರಿ ಮೆಡಿಸಿನ್) ಹಾಗೂ ಜೀರ್ಣಾಂಗ ಶಸ್ತ್ರಚಿಕಿತ್ಸೆ (ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ).
ಈ ಕ್ಲಿನಿಕ್ ಕೆಎಂಸಿ ಆಸ್ಪತ್ರೆ ಅತ್ತಾವರದ ಟವರ್ 2 ರ ಸೂಪರ್ ಸ್ಪೆಶಾಲಿಟಿ ಒಪಿಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರತಿ ಸೋಮವಾರದಿಂದ ಶನಿವಾರದವರೆಗೆ ತೆರೆದಿರುತ್ತದೆ. ಭಾನುವಾರ ಮತ್ತು ಪ್ರತಿ ಮೂರನೆಯ ಶನಿವಾರ ರಜೆ ಇರಲಿದೆ.
ಸಂಜೆ ಕ್ಲಿನಿಕ್‌ಗೆ ಭೇಟಿ ನೀಡುವ ರೋಗಿಗಳಿಗೆ ಕಡಿಮೆ ಕಾಯುವಿಕೆ ಸಮಯ, ಸಾಕಷ್ಟು ವಾಹನ ನಿಲ್ದಾಣ, ಸುಧಾರಿತ ಒಪಿಡಿ ಮೂಲಸೌಲಭ್ಯಗಳು ಹಾಗೂ ಒಂದೇ ಸ್ಥಳದಲ್ಲಿ ತಜ್ಞ ವೈದ್ಯರ ಸುಲಭ ಲಭ್ಯತೆಯ ಪ್ರಯೋಜನ ದೊರೆಯಲಿದೆ. ಸಂಜೆಯ ವೇಳೆಗೂ ಹೊರರೋಗಿ ಸೇವೆ ವಿಸ್ತರಿಸುವುದರಿಂದ ಆರೈಕೆಯ ನಿರಂತರತೆ ಹೆಚ್ಚಾಗುವುದರೊಂದಿಗೆ ಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಇನ್ನಷ್ಟು ಸುಲಭವಾಗಿ ದೊರೆಯಲಿದೆ ಎಂದು ಆಸ್ಪತ್ರೆ ನಂಬಿದೆ.
ಕ್ಲಿನಿಕ್ ಆರಂಭದ ಕುರಿತು ಮಾತನಾಡಿದ ಡಾ. ಚಕ್ರಪಾಣಿ ಎಂ., ವೈದ್ಯಕೀಯ ಅಧೀಕ್ಷಕರು, ಕೆಎಂಸಿ ಆಸ್ಪತ್ರೆ ಅತ್ತಾವರ, “ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ರೋಗಿಗಳ ಅನುಕೂಲತೆ ನಮ್ಮ ಅತ್ಯಂತ ಮುಖ್ಯ ಆದ್ಯತೆಗಳಲ್ಲಿ ಒಂದಾಗಿದೆ. ಹಲವಾರು ವ್ಯಕ್ತಿಗಳು ಸಾಮಾನ್ಯ ಕೆಲಸದ ಸಮಯದಲ್ಲಿ ಚಿಕಿತ್ಸಾ ಸೇವೆ ಪಡೆಯಲು ಕಷ್ಟಪಡುವುದನ್ನು ನಾವು ಮನಗಂಡಿದ್ದೇವೆ. ಗುಣಮಟ್ಟದಲ್ಲಿ ರಾಜಿಯಾಗದೆ, ಸಂಜೆ ವೇಳೆ ತಜ್ಞ ವೈದ್ಯರ ಸಮಾಲೋಚನೆ ಪಡೆಯುವ ಅವಕಾಶ ಕಲ್ಪಿಸುವ ಮೂಲಕ ನಾವು ಈ ಕೊರತೆಯನ್ನು ನಿವಾರಿಸಿದ್ದೇವೆ. ಎಲ್ಲರೂ ಈ ಸೇವೆಯನ್ನು ಪ್ರಯೋಜನವಾಗಿಸಿಕೊಂಡು, ತಮ್ಮ ಅನುಕೂಲದಲ್ಲಿ ಗುಣಮಟ್ಟದ ಆರೈಕೆಯನ್ನು ಅನುಭವಿಸಿ ಎಂದು ನಾವು ಸ್ವಾಗತಿಸುತ್ತೇವೆ” ಎಂದು ಹೇಳಿದರು.
ಸಂಜೆ ಕ್ಲಿನಿಕ್‌ಗೆ ಮುಂಗಡ ಪಡೆಯಲು 88615 86249 ಸಂಖ್ಯೆಗೆ ಕರೆ ಮಾಡಿ ಅಥವಾ www.kmchattavar.com ವೆಬ್‌ಸೈಟ್‌ಅನ್ನು ಸಂದರ್ಶಿಸಬಹುದು.













