ಕೆಎಸ್ ಆರ್ ಟಿಸಿ ಹೈದ್ರಾಬಾದ್ ಮಲ್ಟಿ ಆಕ್ಸೆಲ್ ಬಸ್ ಸೌಲಭ್ಯ

Spread the love

ಕೆಎಸ್ ಆರ್ ಟಿಸಿ ಹೈದ್ರಾಬಾದ್ ಮಲ್ಟಿ ಆಕ್ಸೆಲ್ ಬಸ್ ಸೌಲಭ್ಯ

ಉಡುಪಿ: ಕರಾರಸಾ.ನಿಗಮ ಮಂಗಳೂರು ವಿಭಾಗದಿಂದ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಮಂಗಳೂರಿನಿಂದ ಹೈದ್ರಾಬಾದ್ ವೋಲ್ವೋ ಮಲ್ಟಿಆಕ್ಸ್‍ಲ್ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಂಜೆ 4 ಗಂಟೆಯ ಬದಲಾಗಿ ಸಂಜೆ 3 ಗಂಟೆಗೆ ಕಾರ್ಯಾಚರಿಸಲು ಕ್ರಮಕೈಗೊಳ್ಳಲಾಗಿರುತ್ತದೆ.

ಮಂಗಳೂರಿನಿಂದ ಹೈದ್ರಾಬಾದ್‍ಗೆ ಮಲ್ಟಿಆಕ್ಸ್‍ಲ್ ಸಾರಿಗೆಯನ್ನು ಸಂಜೆ 3 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣದಿಂದ, ಸಂಜೆ 3.45 ಗಂಟೆಗೆ ಉಡುಪಿ ಬಸ್ಸು ನಿಲ್ದಾಣದಿಂದ, 4 ಗಂಟೆಗೆ ಮಣಿಪಾಲ ಬಸ್ಸು ನಿಲ್ದಾಣದಿಂದ ಹಾಗೂ 4.45 ಗಂಟೆಗೆ ಕುಂದಾಪುರ ಬಸ್ಸು ನಿಲ್ದಾಣದಿಂದ ನಿರ್ಗಮಿಸುವಂತೆ ಡಿಸೆಂಬರ್ 1 ರಿಂದ ಪ್ರತಿದಿನ ಕಾರ್ಯಾಚರಿಸಲಾಗುತ್ತಿದೆ.

ಈ ಸಾರಿಗೆಯು ಹುಬ್ಬಳ್ಳಿ ಬಸ್ಸು ನಿಲ್ದಾಣಕ್ಕೆ ರಾತ್ರಿ 10.40 ಹಾಗೂ ರಾಯಚೂರು ಬಸ್ಸು ನಿಲ್ದಾಣಕ್ಕೆ ಮರುದಿನ ಬೆಳಿಗ್ಗೆ 5 ಗಂಟೆಗೆ ತಲುಪಿ ಹೈದ್ರಾಬಾದ್ ನಗರಕ್ಕೆ ಮರುದಿನ ಬೆಳಗ್ಗೆ 7.30ಕ್ಕೆ ತಲುಪಲಿದೆ. ಸದರಿ ಸಾರಿಗೆಯು ಹೈದ್ರಾಬಾದ್‍ನ ಮಹಾತ್ಮಾಗಾಂಧಿ ಬಸ್ಸು ಟರ್ಮಿನಲ್ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ಏಕೈಕ ಸಾರಿಗೆಯಾಗಿರುತ್ತದೆ. ಆದುದರಿಂದ ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಯ ಉಪಯೋಗವನ್ನು ಪಡೆದುಕೊಳ್ಳುವಚಿತೆ ಕರಾರಸಾ.ನಿಗಮದ ಘಟಕ ವ್ಯವಸ್ಥಾಪಕರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.


Spread the love