ಕೆಥೋಲಿಕ್ ಮಹಾ ಸಮಾವೇಶದ ನಿರ್ಣಯ ಈಡೇರಿಕೆಗೆ ಆಗ್ರಹ: ಪಾವ್ಲ್ ರೊಲ್ಫಿ ಡಿಕೋಸ್ತಾ

Spread the love

ಕೆಥೋಲಿಕ್ ಮಹಾ ಸಮಾವೇಶದ ನಿರ್ಣಯ ಈಡೇರಿಕೆಗೆ ಆಗ್ರಹ: ಪಾವ್ಲ್ ರೊಲ್ಫಿ ಡಿಕೋಸ್ತಾ

ಮಂಗಳೂರು: ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಫೆ.2ರಂದು ನಡೆದ ಕೆಥೋಲಿಕ್ ಮಹಾ ಸಮಾವೇಶದಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಫೆ.22ರ ಬಳಿಕ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕರಿಗೆ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೋಸ್ತಾ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಂಗಳೂರು, ಬೆಳ್ತಂಗಡಿ, ಪುತ್ತೂರು ಧರ್ಮ ಪ್ರಾಂತಗಳ ಕೆಥೋಲಿಕ್ ಕ್ರೈಸ್ತರನ್ನು ಒಗ್ಗೂಡಿಸಿ ನಡೆಸಲಾದ ಈ ಸಮಾವೇಶದಲ್ಲಿ 35,000 ಮಂದಿ ಭಾಗವಹಿಸಿದ್ದರು. ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋ. ರೂ. ಅನುದಾನ ನೀಡುವುದು, ಆಪ್ತ ಸಮಾಲೋಚನ ಕೇಂದ್ರ ಸ್ಥಾಪನೆಗೆ ನಿವೇಶನ ಮತ್ತು ಅನುದಾನ ಒದಗಿಸುವುದು, ಡ್ರಗ್ಸ್ ಮತ್ತು ಅಪಾಯಕಾರಿ ಪಬ್‌ಜಿ ಮೊಬೈಲ್ ಗೇಮ್ಸ್ ನಿಷೇಧಿಸುವುದು, ಕ್ರೈಸ್ತರ ಜನಸಂಖ್ಯೆ ಆಧಾರದಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ಕಲ್ಪಿಸಬೇಕು ಎಂಬ ಹಕ್ಕೊತ್ತಾಯದ ನಿರ್ಣಯಗಳನ್ನು ಸಮಾವೇಶ ಅಂಗೀಕರಿಸಿದೆ. ಅವುಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಮೂರು ಧರ್ಮ ಪ್ರಾಂತಗಳ ಬಿಷಪರಾದ ರೈ.ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ, ರೈ.ರೆ.ಡಾ. ಲಾರೆನ್ಸ್ ಮುಕ್ಕುಝಿ ಮತ್ತು ರೈ.ರೆ.ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಸಮ್ಮುಖ ನಿರ್ಣಯ ಅಂಗೀಕರಿಸಲಾಗಿದೆ. ಹಾಗಾಗಿ ಸರಕಾರ ಮತ್ತು ಪ್ರತಿಪಕ್ಷಗಳು ಇದರತ್ತ ಗಮನ ಹರಿಸಬೇಕು ಎಂದರು.


Spread the love