ಕೆ ಎಸ್ ಸಿ ಸಿ ವತಿಯಿಂದ ರಕ್ತದಾನ ಶಿಬಿರ 

Spread the love

ಕೆ ಎಸ್ ಸಿ ಸಿ ವತಿಯಿಂದ ರಕ್ತದಾನ ಶಿಬಿರ 

ದುಬೈ: ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಇದರ ವತಿಯಿಂದ ಹಾಗು ದುಬೈ ಆರೋಗ್ಯ ಇಲಾಖೆ ಇದರ ಸಹಯೋಗದೊಂದಿಗೆ   ಅಲ್ ವಸಲ್ ಕ್ಲಬ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾದ ರಕ್ತನಾದ ಶಿಬಿರವು ಸಂಜೆ ನಾಲ್ಕು ಗಂಟೆಯವರೆಗೆ ನಡೆದಿತ್ತು,ಇದರಲ್ಲಿ ಸುಮಾರು 60 ರಷ್ಟು ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.ಪ್ರಸಕ್ತ ಸಾಂಕ್ರಾಮಿಕ ಕೋರೋಣ ರೋಗವು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಶಿಬಿರದಲ್ಲಿ ಭಾಗವಹಿಸಿದರು.

ರಕ್ತದಾನ ಮಾಡುವುದರಿಂದ ತುರ್ತು ಅಗತ್ಯ ಇರುವ ರೋಗಿಗಳಿಗೆ ಅನುಕೂಲವಾಗಲಿದ್ದು ಅಮೂಲ್ಯ ಜೀವ ಉಳಿಸಲು ನೆರವಾಗುತ್ತದೆ,ಮತ್ತು ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂಧರ್ಭದಲ್ಲಿ ಯಾವುದೇ ಭಯವಿಲ್ಲದೆ ರಕ್ತದಾನ ಮಾಡಿದ ದಾನಿಗಳ ಕಾರ್ಯವನ್ನು ಕೆ ಎಸ್ ಸಿ ಸಿ ಮ್ಯಾನೇಜರ್ ಮುಹಮ್ಮದ್ ಶಾಫಿ ಮುಕ್ಕ ಮುಕ್ತಕಂಠದಿಂದ ಶ್ಲಾಘಿಸಿದರು.ಅದಲ್ಲದೇ ರಕ್ತದಾನ ಶಿಬಿರಕ್ಕೆ ಅವಕಾಶ ಮಾಡಿಕೊಟ್ಟ ಕಮ್ಯುನಿಟಿ ಡೆವೆಲೊಪ್ಮೆಂಟ್ ಅಥಾರಿಟಿ (ಸಿ ಡಿ ಎ ) ಹಾಗು ದುಬೈ ಹೆಲ್ತ್ ಅಥಾರಿಟಿ (ಡಿ ಎಚ್ ಎ ) ಈ ಸಂಧರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.ಕೆ ಎಸ್ ಸಿ ಸಿ ಯ ಸ್ವಯಂ ಸೇವಕರು ಸುಸೂತ್ರ ರಕ್ತದಾನ ಶಿಬಿರ ನಡೆಯಲು ಸಹಕರಿಸಿದರು,ಈ ಸಂಧರ್ಭದಲ್ಲಿ ಕೆ ಎಸ್ ಸಿ ಸಿ ಯ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Spread the love