ಕೈದಿಗೆ ಮಾದಕ ವಸ್ತು ನೀಡಿದ ಪ್ರಕರಣ: ಮಂಗಳೂರು ಜೈಲಿಗೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ

Spread the love

ಕೈದಿಗೆ ಮಾದಕ ವಸ್ತು ನೀಡಿದ ಪ್ರಕರಣ: ಮಂಗಳೂರು ಜೈಲಿಗೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಮಹಿಳೆಯೊಬ್ಬರು ನಿಷೇಧಿತ ಮಾದಕವಸ್ತು ಎಂಡಿಎಂಎ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸರು- ಎಸ್‌ಎಎಫ್ (ಸ್ಪೆಷಲ್ ಆಕ್ಷನ್ ಫೋರ್ಸ್) ತಂಡ ಜಂಟಿಯಾಗಿ ದಾಳಿ ನಡೆಸಿ, ತಪಾಸಣೆ ನಡೆಸಿದೆ.

ಜು.10ರಂದು ರಮ್‌ಸೋನಾ ಎಂಬಾಕೆಯು ಬೇಕರಿ ತಿಂಡಿಗಳ ಪ್ಯಾಕೆಟ್‌ನಲ್ಲಿ ಅಲ್ಯೂಮೀನಿಯಂ ಫಾಯಿಲ್‌ನಲ್ಲಿ ಸುತ್ತಿದ 5 ಸಣ್ಣ ಪೊಟ್ಟಣಗಳನ್ನು ವಿಚಾರಣಾಧೀನ ಕೈದಿ ಮುಹಮ್ಮದ್ ಅಸ್ಕರ್ ಎಂಬಾತನಿಗೆ ನೀಡಲು ತಂದಿದ್ದಳು ಎನ್ನಲಾಗಿದೆ. ಜೈಲಿನ ಸಿಬ್ಬಂದಿ ತಿಂಡಿಯ ಪ್ಯಾಕೆಟ್‌ಗಳನ್ನು ಪರಿಶೀಲನೆ ನಡೆಸುವಾಗ ಮಾದಕ ವಸ್ತುಗಳ ಪ್ಯಾಕೆಟ್‌ಗಳು ಪತ್ತೆಯಾಗಿದ್ದವು. ಮಹಿಳೆಯ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೈಲಿಗೆ ಮಾದಕ ವಸ್ತುಗಳನ್ನು ತಂದಿರುವ ಮಹಿಳೆಯನ್ನು ಬಂಧಿಸಲಾಗಿದೆ. ಜೈಲಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಜೈಲಿಗೆ ದಾಳಿ ನಡೆಸಿದ್ದಾರೆ.


Spread the love