ಕೊಂಕಣಿ ವೊವ್ಯೊ-ವೇರ್ಸ್-ಸೋಭಾನೆ ಕಾರ್ಯನಿರ್ವಹಣಾ ತರಬೇತಿ

Spread the love

ಕೊಂಕಣಿ ವೊವ್ಯೊ-ವೇರ್ಸ್-ಸೋಭಾನೆ ಕಾರ್ಯನಿರ್ವಹಣಾ ತರಬೇತಿ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಸ್ಥೆಯ ಸಹಯೋಗದಲ್ಲಿ ಕೊಂಕಣಿ ವಿದ್ಯಾರ್ಥಿಗಳಿಗಾಗಿ 30 ಗಂಟೆಗಳ “ವೊವ್ಯೊ-ವೇರ್ಸ್-ಸೋಭಾನೆ ಹಾಡುಗಳ ಕಾರ್ಯನಿರ್ವಹಣಾ ತರಬೇತಿ ಶಿಬಿರ (ಸರ್ಟಿಫಿಕೇಟ್ ಕೋರ್ಸ್)” ವನ್ನು ಸಪ್ಟೆಂಬರ್ 3 ರಂದು ಪ್ರಾರಂಭಿಸಲಾಗಿತ್ತು.

ಈ ಸರ್ಟಿಫಿಕೇಟ್ ಕೋರ್ಸ್‍ನ ಸಮಾರೋಪ ಸಮಾರಂಭವನ್ನು ದಿನಾಂಕ 08.12.2018 ರಂದು ಸಂಜೆ 4.00 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಅರುಪ್ಪೆ ಬ್ಲಾಕ್ ಸಭಾಂಗಣದಲ್ಲಿ ನಡೆಸಲಾಯಿತು.

ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿಂದಿನ ಸಂಸ್ಕೃತಿಯನ್ನು ಜೀವಂತ ಉಳಿಸುವಲ್ಲಿ ಯುವ ಪೀಳಿಗೆಯನ್ನು ಪೆÇ್ರೀತ್ಸಾಹಿಸಬೇಕಾಗಿರುವುದನ್ನು ಮನಗಂಡ ಅಕಾಡೆಮಿಯು ಇದೊಂದು ವಿನೂತನ ಪ್ರಯೋಗವನ್ನು ಸಂತ ಅಲೋಶಿಯಸ ಕಾಲೇಜಿನಲ್ಲಿ ಪ್ರಾರಂಭಿಸಿರುತ್ತದೆ. ಇದಕ್ಕೆ ಕಾಲೇಜಿನ ಮುಖ್ಯಸ್ಥರು ಸಹಕಾರ ನೀಡಿ ಮುಂದೆ ಬಂಸಿರುವುದು ಶ್ಲಾಘನೀಯ ಎಂದು ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥರನ್ನು ಅಭಿನಂಧಿಸಿದರು.

ಸಾಹಿತಿಗಳಾದ ಡಾ ಶಿವರಾಮ್ ಕಾಮತ್, ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ| ಡಾ. ಪ್ರವೀಣ್ ಮಾರ್ಟಿಸ್ ರೇಡಿಯೊ ಸಾರಂಗ್‍ನ ನಿರ್ದೇಶಕರಾದ ರೆ| ಡಾ ಮಲ್ವಿನ್ ಪಿಂಟೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೆನಿಸ್ಸ ಡಿಸೋಜಾ ಮತ್ತು ತಂಡದಿಂದ ಪ್ರಾರ್ಥನೆ ಅಕಾಡೆಮಿಯ ಸದಸ್ಯರಾದ ಲಕ್ಷ್ಮಣ ಪ್ರಭು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಪೆÇ್ಲೀರಾ ಕ್ಯಾಸ್ತಲಿನೊ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರಾರ್ಥಿ ಪರವಾಗಿ ಅನಿಲ್ ಡಿಸೋಜಾ ಶಿಬಿರದ ಮಾಹಿತಿ ನೀಡಿದರು. ಶಿಬಿರಾರ್ಥಿ ಕು ನೊಯ್ಲಾ ಮಸ್ಕರೇನಸ್ ವಂದಿಸಿದರು. ಕು ರುಪಲ್ ಡಿಸೋಜಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು ನಂತರ ತರಬೇತಿ ವಿದ್ಯಾರ್ಥಿತಂಡದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.


Spread the love