ಕೊಲೆ ಯತ್ನ ಪ್ರಕರಣದಲ್ಲಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Spread the love

ಕೊಲೆ ಯತ್ನ ಪ್ರಕರಣದಲ್ಲಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

2011 ನೇ ಸಾಲಿನಲ್ಲಿ ಬಂಟ್ವಾಳ, ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣಾ ಅಕ್ರ:35/2011, ಕಲಂ 143,147,148,447,448,504,323,324,326,354, 506,307,427,R/w 149 IPC ನೇ ನೇ ಪ್ರಕರಣದಲ್ಲಿ ಸುಮಾರು 8 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಅಸಾಮಿ ಅಕ್ಬರ್ ಸಿದ್ದಿಕ್, ವಾಸ: ಬಿ ಮೂಡ ಗ್ರಾಮ, ಬಂಟ್ವಾಳ ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಿನಾಂಕ:30-06-2025 ರಂದು ಧರ್ಮಸ್ಥಳದಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರು‌ಪಡಿಸಿದ್ದು, ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.


Spread the love
Subscribe
Notify of

0 Comments
Inline Feedbacks
View all comments