ಕೋವಿಡ್ ಸಂಪೂರ್ಣ ಮುಗಿದಿದೆ ಎಂಬ ಭ್ರಮೆ ಬೇಡ – ಎಚ್ಚರವಾಗಿರಲು ದಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸೂಚನೆ

Spread the love

ಕೋವಿಡ್ ಸಂಪೂರ್ಣ ಮುಗಿದಿದೆ ಎಂಬ ಭ್ರಮೆ ಬೇಡ – ಎಚ್ಚರವಾಗಿರಲು ದಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸೂಚನೆ

ಮಂಗಳೂರು: ಲಾಕ್ ಡೌನ್ ಸಮಯ ಮುಗಿದು ಅನ್ ಲಾಕ್ ಸಮಯ ಆರಂಭವಾದ ಬಳಿಕ ಹಲವರು ಕೋವಿಡ್ ಸಂಪೂರ್ಣ ಹೋಗಿದೆ ಎನ್ನುವ ರೀತಿಯಲ್ಲಿ ವರ್ತಿಸುವುದು ಕಂಡು ಬರುತ್ತಿದೆ ಅದನ್ನು ಮರೆತು ಪ್ರತಿಯೊಬ್ಬರೂ ಕೂಡ ಕೋರೊನಾ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ದಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.

ಜೂನ್ ತಿಂಗಳಿನಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗಿದ್ದು ಇದಕ್ಕೆ ಹಲವಾರು ಕಾರಣಗಳಿವೆ. ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 3500 ಮಂದಿ ವಿದೇಶಿ ಪ್ರಯಾಣಿಕರು ಬಂದಿದ್ದು ಅದರಲ್ಲಿ 300 ಕೋವಿಡ್ ಪಾಸಿಟಿವ್ ಬಂದಿದ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದು ಕೆಲವರು ಗುಣಮುಖರಾಗಿದ್ದಾರೆ.

ಕೆಲವರಿಗೆ ಇಲಿ ಹಾಗೂ ಸಾರಿ ಪ್ರಕರಣದಲ್ಲಿ ಕೂಡ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 566 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 150 ಸಕ್ರಿಯ ಪ್ರಕರಣಗಳಿವೆ.

ಲಾಕ್ ಡೌನ್ ಸಮಯ ಮುಗಿದು ಅನ್ ಲಾಕ್ ಸಮಯ ಆರಂಭವಾದ ಬಳಿಕ ಹಲವರು ಕೋವಿಡ್ ಸಂಪೂರ್ಣ ಹೋಗಿದೆ ಎನ್ನುವ ರೀತಿಯಲ್ಲಿ ವರ್ತಿಸುವುದು ಕಂಡು ಬರುತ್ತಿದೆ. ಹಲವರು ಕಾರಣವಿಲ್ಲದೆ ತಿರುಗಾಡುವುದು ಇನ್ನಿತರ ವರ್ತನೆ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಪ್ರತಿಯೊಬ್ಬರು ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವುದ ಕಡ್ಡಾಯವಾಗಿದೆ. ಈ ಎಲ್ಲಾ ವಿಚಾರ ಪ್ರತಿಬಾರಿ ಸಾರ್ವಜನಿಕರ ಗಮನಕ್ಕೆ ತರಲಾಗುತ್ತಿದೆ. ಜಿಲ್ಲಾಡಳಿತದ ಮನವಿಯನ್ನು ಹಲವಾರು ಮಂದಿ ಪಾಲಿಸುತ್ತಿದ್ದು ಇನ್ನೂ ಹಲವು ಮಂದಿ ಇದನ್ನು ನಿರ್ಲಕ್ಷಿಸಿರುವುದು ನಮ್ಮ ಗಮನಕ್ಕೆ ಬಂದಿದೆ.

ಅಲ್ಲದೆ ಹೋಮ್ ಕ್ವಾರಂಟೈನ್ ಆಗಿರುವ ವಿದೇಶದಿಂದ, ಬೇರೆ ರಾಜ್ಯದಿಂದ ಬಂದವರು, ಕೋವಿಡ್ ಗುಣಮುಖರಾಗಿ ಮನೆಗೆ ತೆರಳಿರುವವರು ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಅಂತವರು ಕೂಡ ಕಡ್ಡಾಯವಾಗಿ ಮನೆಯಲ್ಲಿ ಇರಬೇಕು. ಮನೆಯಲ್ಲಿದ್ದಾಗ ಕೂಡ ಮನೆಯವರೊಂದಿಗೆ ಅಂತರ ಕಾಯ್ದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಈ ಸೋಂಕು ಬಹು ಬೇಗ ಹರಡುವುದರಿಂದ ಹೋಮ್ ಕ್ವಾರಂಟೈನ್ ಇರುವವರು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.

ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾದಂತೆ ಜಿಲ್ಲೆಯಲ್ಲಿ ಕಂಟೈನ್ ಮೆಂಟ್ ಜೋನ್ ಕೂಡ ಹೆಚ್ಚಾಗಿದ್ದು ಈಗ ಪ್ರಸ್ತುತ ಜಿಲ್ಲೆಯಲ್ಲಿ 100 ಕಂಟೈನ್ ಮೆಂಟ್ ಝೋನ್ ಗಳಿವೆ. ಕಂಟೈನ್ ಮೆಂಟ್ ಝೋನ್ ಆಗಿರುವ ಮನೆ ಹಾಗೂ ಸುತ್ತಮುತ್ತಲಿನವರು ಎಲ್ಲಾ ರೀತಿಯ ಸರಕಾರದ ಸೂಚನೆಗಳನ್ನು ಪಾಲಿಸಬೇಕು


Spread the love