ಗಣಿ ಅಧಿಕಾರಿ ಮರು ವರ್ಗಾವಣೆಗೆ ಕುರಿತ ಮಾಧ್ಯಮ ವರದಿಗೆ ಪ್ರಖ್ಯಾತ್ ಶೆಟ್ಟಿ ಸ್ಪಷ್ಟನೆ

Spread the love

ಗಣಿ ಅಧಿಕಾರಿ ಮರು ವರ್ಗಾವಣೆಗೆ ಕುರಿತ ಮಾಧ್ಯಮ ವರದಿಗೆ ಪ್ರಖ್ಯಾತ್ ಶೆಟ್ಟಿ ಸ್ಪಷ್ಟನೆ

ಉಡುಪಿ: ಗಣಿ ಅಧಿಕಾರಿ ಸಂದೀಪ್ ಜಿ ಉಡುಪಿ ಜಿಲ್ಲೆಗೆ ಮರುವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು ಎಂಬ ಶೀರ್ಷಿಕೆಯಡಿ ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿಯವರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಕೊಡಗು ಜಿಲ್ಲೆಗೆ ವರ್ಗಾವಣೆಯಾದ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ್ ಜಿ ಅವರನ್ನು ಮತ್ತೆ ಉಡುಪಿ ಜಿಲ್ಲೆಗೆ ಮರುವರ್ಗಾವಣೆ ಮಾಡಿರುವ ಈ ನಿರ್ಧಾರವು ಜಿಲ್ಲಾ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು, ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಮುಖಂಡರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವವರು ಅವರಿಗೆ ಮನವಿ ಸಲ್ಲಿಸಲಾಗಿದ್ದು ಈ ವೇಳೆ ನಿಯೋಗದಲ್ಲಿ ತಾನು ಇರುವುದಾಗಿ ಸುದ್ದಿಯಲ್ಲಿ ಪ್ರಕಟವಾಗಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ಕೆಲವೊಂದು ವ್ಯಕ್ತಿಗಳು ವಿನಾಕಾರಣ ನನ್ನ ಹೆಸರನ್ನು ಕೆಡಿಸುವ ನಿಟ್ಟಿನಲ್ಲಿ ಮಾಧ್ಯಮ ಪ್ರಕಟಣೆಯನ್ನು ನೀಡುವ ವೇಳೆ ನನ್ನ ಹೆಸರನ್ನು ಕೂಡ ಸೇರಿಸಿದ್ದು ನಾನು ಮನವಿ ನೀಡುವ ಸಮಯದಲ್ಲಿ ಆ ನಿಯೋಗದಲ್ಲಿ ಇರಲಿಲ್ಲ.

ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸದಾ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತಿದ್ದು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವನ್ನು ಮಾಡುತ್ತಿಲ್ಲ. ಕೆಲವೊಂದು ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ನಾಯಕರಿಗೆ ಇರಿಸು ಮುರಿಸು ಮಾಡುವ ಕೆಲಸವನ್ನು ಮಾಡುತ್ತಿದ್ದು ಇದು ಖಂಡನೀಯ. ಅಂತಹ ವ್ಯಕ್ತಿಗಳು ವಿನಾಕಾರಣ ನನ್ನ ಹೆಸರನ್ನು ಕೂಡ ಬಳಸಿದ್ದಲ್ಲಿ ಮುಂದಿನ ದಿನಗಳಲ್ಲಿ ಅಂತಹವರ ವಿರುದ್ದ ಮಾನನಷ್ಠ ಮೊಕದ್ದಮೆ ದಾಖಲಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಪ್ರಖ್ಯಾತ್ ಶೆಟ್ಟಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments