ಗಣೇಶ ಚತುರ್ಥಿ- ಪರಿಸರ ರಕ್ಷಿಸಿ : ಜಿಲ್ಲಾಧಿಕಾರಿ

Spread the love

ಗಣೇಶ ಚತುರ್ಥಿ- ಪರಿಸರ ರಕ್ಷಿಸಿ : ಜಿಲ್ಲಾಧಿಕಾರಿ

ಉಡುಪಿ:- ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬದ ಸಲುವಾಗಿ ಗಣೇಶ ವಿಗ್ರಹಗಳನ್ನು ಮಾಡಲಾಗುತ್ತಿದ್ದು, ಪೂಜೆಯ ನಂತರ ಪ್ಲಾಸ್ಟರ್ ಆಫ್ ಪ್ಯಾರೀಸ್/ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜನೆಯನ್ನು ಮಾಡುವುದರಿಂದ ನೀರು ಕಲುಷಿತಗೊಂಡು, ಜಲ ಮೂಲಗಳ ಮೇಲೆ ಅವಲಂಬಿತವಾದ ಪಶು, ಪಕ್ಷಿ, ಪ್ರಾಣಿಗಳು ಮತ್ತು ಇತರೆ ಜಲಚರಗಳ ಜೀವಕ್ಕೆ ಅಪಾಯವುಂಟಾಗುವುದರೊಂದಿಗೆ ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ದಕ್ಕೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ಅಧಿಸೂಚನೆಯಲ್ಲಿ, ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಮಾಡಿದ/ಬಣ್ಣದ ವಿಗ್ರಹಗಳ ವಿಸರ್ಜನೆಯನ್ನು ನಿಷೇಧಿಸಿರುತ್ತದೆ.

ಆದುದರಿಂದ, ವಿಗ್ರಹಗಳು ಮತ್ತು ಮಂಟಪಗಳನ್ನು ತಯಾರಿಸುವ ಸಂದರ್ಭದಲ್ಲಿ ನೈಸರ್ಗಿಕವಾಗಿ ತಯಾರಿಸಲಾಗಿರುವ ಹಾಗೂ ಪರಿಸರಕ್ಕೆ ಹಾನಿಯಾಗದಂತಹ ಬಣ್ಣಗಳನ್ನು ಹಾಗೂ ಸಾಮಗ್ರಿಗಳನ್ನು ಉಪಯೋಗಿಸುವುದರೊಂದಿಗೆ ಈ ಮುಂದಿನ ಸೂಚನೆಗಳನ್ನು ವಿಗ್ರಹ ತಯಾರಕರು/ ಸಾರ್ವಜನಿಕರು ಪರಿಸರ ಸಂರಕ್ಷಣೆ ಹಿತದೃಷ್ಠ್ಠಿಯಿಂದ ಪಾಲಿಸಬೇಕು.

ನೀರಿನಲ್ಲಿ ಕರಗದ/ತೇಲುವ ಪರಿಸರಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಗಣೇಶ ಮೂರ್ತಿಗಳನ್ನು ತಯಾರಿ/ಮಾರಾಟ ಮಾಡದಂತೆ ಸೂಚಿಸಲಾಗಿದೆ. ಗಣೇಶ ಮೂರ್ತಿಗಳನ್ನು ತಯಾರಿಸುವಾಗ ನೀರಿನಲ್ಲಿ ಕರಗುವಂತಹ ಬಣ್ಣಗಳು ಹಾಗೂ ವಿಷಯುಕ್ತವಲ್ಲದ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸುವುದು.

ಸಾರ್ವಜನಿಕರು ಸಾದ್ಯವಿದ್ದಷ್ಟು ನೈಸರ್ಗಿಕ ¨ಣ್ಣದಿಂದ ಅಥವಾ ಮಣ್ಣಿನಿಂದ ಮಾಡಿದ ಚಿಕ್ಕದಾದ ಮೂರ್ತಿಗಳನ್ನು ಪೂಜೆಗೆ ಬಳಸುವುದು.
ತೈಲ ಬಣ್ಣಗಳು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿರುತ್ತವೆ. ಆದ್ದರಿಂದ ಜೇಡಿ ಮಣ್ಣಿನಿಂದ ಮಾಡಿದ ಹಾಗೂ ನೈಸರ್ಗಿಕ ಬಣ್ಣ ಬಳಸಿದ ಮೂರ್ತಿಗಳನ್ನು ಮಾತ್ರ ಖರೀದಿಸಿ.  ಗಣೇಶ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಯವರು ನಿರ್ಮಿಸಿದ ತಾತ್ಕಾಲಿಕ ಹೊಂಡ ಮತ್ತು ತೊಟ್ಟಿಗಳಲ್ಲಿ ವಿಸರ್ಜನೆ ಮಾಡಬೇಕು.  ಗಣೇಶ ಮೂರ್ತಿಯನ್ನು ಬಕೇಟ್‍ನಲ್ಲಿಯೂ ವಿಸರ್ಜಿಸಬಹುದಾಗಿರುತ್ತದೆ.  ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದಕ್ಕಿಂತ ಮುಂಚೆ ಮೂರ್ತಿಗಳಿಗೆ ಪೂಜೆ ಮಾಡಲು ಉಪಯೋಗಿಸಿದ ಹೂವು, ವಸ್ತ್ರ, ಅಲಂಕಾರಿಕ ಸಾಮಗ್ರಿಗಳನ್ನು ತೆಗೆದಿಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love