ಗಾಮಾ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಮಂಗಳೂರಿನ ನಿಖಿಲ್ ಶೆಟ್ಟಿಗೆ ಬೆಳ್ಳಿ ಪದಕ
ಮಂಗಳೂರು: ಮಂಗಳೂರಿನ ನಿಖಿಲ್ ಶೆಟ್ಟಿ ಅವರು ಮಲೇಷ್ಯಾದ ಪುತ್ರಜಯದಲ್ಲಿ ಜುಲೈ 28ರಿಂದ ಆಗಸ್ಟ್ 2ರವರೆಗೆ ನಡೆದ ಗಾಮಾ ಏಷ್ಯನ್ ಚಾಂಪಿಯನ್ಶಿಪ್–2026ರ 74.9 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಭಾರತವನ್ನು ಪ್ರತಿನಿಧಿಸಿದ್ದ ನಿಖಿಲ್ ಅವರು ಏಷ್ಯಾದ ವಿವಿಧ ದೇಶಗಳ ಪ್ರಮುಖ ಹವ್ಯಾಸಿ ಮಿಶ್ರ ಸಮರ ಕಲೆ (ಎಂಎAಎ) ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಈ ಸಾಧನೆ ಮಾಡಿದ್ದಾರೆ. ಇದು ಅವರ ಹವ್ಯಾಸಿ ಎಂಎAಎ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ನಗರದ ಬೆಳೆಯುತ್ತಿರುವ ಮಿಶ್ರ ಸಮರ ಕಲೆ ಸಮುದಾಯಕ್ಕೂ ಗಮನಾರ್ಹ ಸಾಧನೆಯಾಗಿದೆ.
ನಿಖಿಲ್ ಅವರು ಕೋಚ್ ಕೌಶಿಕ್ ಬೊಳೂರು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಮೋಹಿತ್ ಕರ್ಕೇರ, ಸುದೀಪ್ ಕೊಟ್ಟಾರಿ ಹಾಗೂ ಕಾರ್ತಿಕ್ ಪುತ್ರನ್ ಅವರೊಂದಿಗೆ ತರಬೇತಿಯನ್ನು ಮುಂದುವರಿಸಿದ್ದಾರೆ. ಅವರು ಪ್ರಸ್ತುತ ಕಶಾರ್ಪ್ ಫಿಟ್ನೆಸ್ ಹಾಗೂ ದಿ ಡೆನ್ನಲ್ಲಿ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.












