ಚಿಕ್ಕಮಗಳೂರು  ವಿನಾಯಕ ಜ್ಯುವೆಲರಿ ಕಳ್ಳತನ; ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

Spread the love

ಚಿಕ್ಕಮಗಳೂರು  ವಿನಾಯಕ ಜ್ಯುವೆಲರಿ ಕಳ್ಳತನ; ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ಶ್ರೀ ವಿನಾಯಕ ಜ್ಯಯೆಲ್ಲರಿ  ಶಾಪ್ ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸಾಗರ, ಶಿವಮೊಗ್ಗ ನಿವಾಸಿ ಶ್ರೀಕಾಂತ್ ಆರ್ (24) ಮತ್ತು ತಮಿಳುನಾಡು ನಿವಾಸಿ ಉಮೇಶ್ ಬಳೇಗಾರ್ (40) ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿರುವ ಶ್ರೀ ವಿನಾಯಕ ಜ್ಯಯೆಲ್ಲರಿ ವರ್ಕ್ ಶಾಪ್ ನಲ್ಲಿ ಸಪ್ಟೆಂಬರ್ 5 ರಂದು ರಾತ್ರಿ ವೇಳೆ ಅಂಗಡಿಯ ಮೇಲ್ಛಾವಣಿಯ ಹೆಂಚು ತೆಗೆದು ಯಾರೋ ಕಳ್ಳರು ಅಂಗಡಿಯೊಳಗೆ ಪ್ರವೇಶಿಸಿ 4 ಕೆ.ಜಿ. 350 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಮತ್ತು 25 ಗ್ರಾಂ ತೂಕದ ಬಂಗಾರದ ವಸ್ತುಗಳು ಒಟ್ಟು ಸುಮಾರು 1,95,000/- ರೂ.ಗಳ ಬೆಳ್ಳಿಯ ಮತ್ತು ಬಂಗಾರದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ  ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

 ಈ ಪ್ರಕರಣದ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ಹಾಗೂ ಪೊಲೀಸ್ ಉಪಾಧೀಕ್ಷಕರು, ಚಿಕ್ಕಮಗಳೂರು ಉಪ-ವಿಭಾಗ, ಚಿಕ್ಕಮಗಳೂರು ರವರ ಮಾರ್ಗದರ್ಶನದಂತೆ ಚಿಕ್ಕಮಗಳೂರು ನಗರ ವೃತ್ತದ ವೃತ್ತ ನಿರೀಕ್ಷಕರಾದ ಕೆ. ಈ. ನಿರಂಜನ್ ಕುಮರ್ ರವರ ನೇತೃತ್ವದಲ್ಲಿ ಗಿರೀಶ್ ಕುಮಾರ್, ಪಿ.ಎಸ್.ಐ ಬಸವನಹಳ್ಳಿ ಪೊಲೀಸ್ ಠಾಣೆ, ಮಲ್ಲೇಗೌಡ, ಸಿ.ಹೆಚ್.ಸಿ, ಗಿರೀಶ್, ಸಿಪಿಸಿ, ರಘು, ಸಿಪಿಸಿ-, ಮಂಜುನಾಥ ನಾಯ್ಕ, ಸಿಪಿಸಿ-, ಯುವರಾಜ್, ಸಿ.ಪಿ.ಸಿ, ಸಿ.ಕೆ. ಜಗದೀಶ್, ಎ.ಹೆಚ್.ಸಿ- ರವರುಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.

ಚಿಕ್ಕಮಗಳೂರು ನಗರದ ವೃತ್ತ ನಿರೀಕ್ಷಕರ ನೇತೃತ್ವದಲ್ಲಿನ ಮೇಲ್ಕಂಡ ತಂಡ ಈ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು  ಹೊಸೂರಿನಲ್ಲಿ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ಚಿಕ್ಕಮಗಳೂರು ನಗರದ ವಿನಾಯಕ ಜ್ಯುಯೆಲ್ಲರಿ ಶಾಪ್ ಮತ್ತು ಜಿಲ್ಲೆಯ ಶೃಂಗೇರಿಯಲ್ಲಿ ಎರಡು ಕಡೆಗಳಲ್ಲಿ, ಶಿರಸಿಯಲ್ಲಿ ಒಂದು ಕಡೆಯಲ್ಲಿ ಸಹ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದರಿಂದ ಸದರಿಯವರಿಂದ ಒಟ್ಟು 4 ಪ್ರಕರಣಗಳಲ್ಲಿ ಸುಮಾರು 4,50,000/- ರೂ. ಬೆಲೆ ಬಾಳುವ ಸುಮಾರು 80 ಗ್ರಾಂ ಚಿನ್ನ ಮತ್ತು 5.5. ಕೆ.ಜಿ. ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸದರಿ ಆರೋಪಿತರು ಈ ಹಿಂದೆ ಕೇರಳ, ಗೋವಾ, ಬಂಟ್ವಾಳ, ಮಡಿಕೇರಿ, ಮಂಗಳೂರು ಕಡೆಗಳಲ್ಲಿ ಕಳ್ಳತನ ಮಾಡಿ ಜೈಲು ಶಿಕ್ಷೆ ಅನುಭವಿಸಿದ ರೂಢಿಗತ ಅಪರಾಧಿಗಳಾಗಿರುತ್ತಾರೆ. ಆರೋಪಿ ಉಮೇಶ್ ಬಳೆಗಾರನ ಸಂಬಂಧಿಕರಾದ ನಾಗರಾಜ, ಮುತ್ತಪ್ಪ, ಸುದರ್ಶನ ಇವರುಗಳೂ ಸಹ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿದ ಆರೋಪಿತರುಗಳಾಗಿರುತ್ತಾರೆ.

ಆರೋಪಿಗಳನ್ನು ಪತ್ತೆಮಾಡುವಲ್ಲಿ ಸಹಕರಿಸಿದ ತಂಡಕ್ಕೆ   ಪೊಲೀಸ್ ಅಧೀಕ್ಷಕರಾದ ಅಣ್ಣಾಮಲೈ ಅವರು  ಪ್ರಶಂಶಿಸಿ, ರೂ. 10,000/- ನಗದು ಪುರಸ್ಕಾರ ಮತ್ತು ಎಲ್ಲರಿಗೂ ಉತ್ತಮ ಸೇವಾ ನಮೂದಾತಿಯನ್ನು ಮಂಜೂರು ಮಾಡಿದ್ದಾರೆ.


Spread the love