ಚಿತ್ರಕಲಾ ಕೃತಿಗಳು ಅಬ್ಬಕ್ಕ ಉತ್ಸವಕ್ಕೆ ಪೂರಕವಾಗಿರಲಿ-ಡಾ ಸೆಲ್ವಮಣಿ 

Spread the love

ಚಿತ್ರಕಲಾ ಕೃತಿಗಳು ಅಬ್ಬಕ್ಕ ಉತ್ಸವಕ್ಕೆ ಪೂರಕವಾಗಿರಲಿ-ಡಾ ಸೆಲ್ವಮಣಿ  

ಮಂಗಳೂರು :  ಚಿತ್ರಕಲಾ ಕೃತಿಗಳು ಅಬ್ಬಕ್ಕ ಉತ್ಸವಕ್ಕೆ ಇನ್ನಷ್ಟು ಮೆರುಗು ಹಾಗೂ ಅರ್ಥವನ್ನು ನೀಡಲಿ ಎಂದು ಅಬ್ಬಕ್ಕ ಉತ್ಸವ- 2019ರ ಪ್ರಯುಕ್ತ ಚಿತ್ರಕಲಾ ಕೃತಿಗಳ ರಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅಬ್ಬಕ್ಕ ಉತ್ಸವ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಸೆಲ್ವಮಣಿ ಆರ್ ಚಾಲನೆ ಹೇಳಿದರು.

ಅವರಿಂದು ಉಳ್ಳಾಲದ ಮೊಗವೀರ ಅನುದಾನಿತ ಶಾಲೆ, ಉಳ್ಳಾಲ ಇಲ್ಲಿ ಫೆ. 27ರಿಂದ ಮಾರ್ಚ್ 1ರವರೆಗೆ ಆಯೋಜಿಸಲಾದ ಕಾರ್ಯಾಗಾರದಲ್ಲಿ ಮಾತನಾಡಿ, ಉತ್ಸವಗಳನ್ನು ಅರ್ಥಪೂರ್ಣವಾಗಿ ಆಯೋಜಿಸುವಲ್ಲಿ ಚಿತ್ರಕಲಾ ಶಿಕ್ಷಕರ ಭಾಗವಹಿಸುವಿಕೆಯನ್ನು ಪ್ರಶಂಸಿಸಿದ ಅವರು, ರಚಿಸಲ್ಪಟ್ಟ ಚಿತ್ರಗಳನ್ನು ಸಂರಕ್ಷಿಸಿ, ಉಪಯೋಗಿಸಲಾಗುವುದು ಎಂದರು.

ವಿದ್ಯಾಂಗ ಇಲಾಖೆಯ ಉಪನಿರ್ದೇಶಕರಾದ ಶಿವರಾಮಯ್ಯ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಶಿರ್ತಾಡಿಯಲ್ಲಿ ಆಯೋಜನೆಗೊಂಡ ಕಾರ್ಯಾಗಾರದಂತೆ ಈ ಬಾರಿಯೂ ಶಿಬಿರದಿಂದ ಅತ್ಯುತ್ತಮ ಚಿತ್ರಗಳು ಮೂಡಿಬರಲಿ, ಚಿತ್ರ ಶಿಕ್ಷಕರು ರಾಣಿ ಅಬ್ಬಕ್ಕನ ಕುರಿತು ಹಿರಿಯರಾದ ಅಮೃತ ಸೋಮೇಶ್ವರ ಇವರನ್ನು ಭೇಟಿಯಾಗಿ ಪೂರ್ವಮಾಹಿತಿ ಪಡೆದಿರುವರಲ್ಲದೆ, ಸಾಕಷ್ಟು ಸಿದ್ಧತೆಗಳೊಂದಿಗೆ ಕಾರ್ಯಾಗಾರಕ್ಕೆ ಆಗಮಿಸಿರುತ್ತಾರೆ ಎಂದರು.

ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಮೀಳಾ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಳ್ಳಾಲ ನಗರಸಭೆಯ ಸದಸ್ಯರಾದ ಮಮತಾ, ಆಯುಕ್ತರಾದ ವಾಣಿ ವಿ ಆಳ್ವ, ಶಾಲೆಯ ಮುಖ್ಯೋಪಾಧ್ಯಾಯರಾದ ವೇದಾವತಿ ಪಾಲ್ಗೊಂಡರು. ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಸ್ವಾಗತಿಸಿ ವಂದಿಸಿದರು.


Spread the love