ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳಿಂದ ಖಾಸಗಿ ಕಾರ್ಯಕ್ರಮಕ್ಕೆ ಪರವಾನಿಗೆ ಇದ್ದರೂ ದಾಳಿ

Spread the love

ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳಿಂದ ಖಾಸಗಿ ಕಾರ್ಯಕ್ರಮಕ್ಕೆ ಪರವಾನಿಗೆ ಇದ್ದರೂ ದಾಳಿ

ಉಡುಪಿ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು ಈಗಾಗಲೇ ಖಾಸಗಿ ಕಾರ್ಯಕ್ರಮಗಳಿಗೆ ಪರವಾನಿಗೆ ಬೇಕಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ಸ್ಷಷ್ಟವಾಗಿ ಮಾಹಿತಿ ನೀಡಿದರೂ ಕೂಡ ಕೆಲವೊಂದ ಅಧಿಕಾರಿಗಳು ಸರ್ವಾಧಿಕಾರಗಳಂತೆ ವರ್ತಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಉಡುಪಿಯ ಸ್ಥಳೀಯ ಬಿಜೆಪಿ ನಾಯಕ ರಾಘವೇಂದ್ರ ಕಿಣಿಯವರ ಮನೆಗೆ ಚುನಾವಣಾಧಿಕಾರಿಗಳು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿ ಭಯದ ವಾತಾವರಣ ಮೂಡಿಸಿರುವುದು. ರಾಘವೇಂದ್ರ ಕಿಣಿ ತನ್ನ ಮಗ ರಿತ್ವಿಕ್ ಕಿಣಿ ಜೊತೆಗೆ ಇತರ 21 ವಿವಿಧ ಜಾತಿಯ ಮಕ್ಕಳಿಗೆ ಸಾಮೂಹಿಕ ಉಪನಯನ ಮಾಡಲು ಹೊರಟಿದ್ದರು. ಇದಕ್ಕೆ 21ಮಕ್ಕಳ ತಾಯಂದಿರಿಗೆ,ತನ್ನ ಮನೆಯ ಮಹಿಳೆಯರಿಗೆ ಸೀರೆ ವಿತರಿಸಲು ಬೆಂಗಳೂರಿನಿಂದ ಬಸ್ಸಿನಲ್ಲಿ ಒಟ್ಟು 50ಸೀರೆಗಳನ್ನು ತರಿಸಿದ್ದರು. ಈ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಗುರುವಾರ ಸಂಜೆ ಕಿಣಿಯವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಖಾಸಗಿ ಮನೆಯ ಕಾರ್ಯಕ್ರಮಗಳಿಗೆ ಅನುಮತಿ ಇದ್ದರೆ ತೊಂದರೆ ಕೊಡಬಾರದು ಎಂದು ಆದೇಶ ನೀಡಿದ್ದರು ಆದರೆ ಉಡುಪಿಯ ಚುನಾವಣಾಧಿಕಾರಿಗಳು ದೂರಿನ ಹಿನ್ನಲೆಯಲ್ಲಿ ಸಂಜೆ ರಾಘವೇಂದ್ರ ಕಿಣಿಯವರ ಮನೆಗೆ ಹಾಗೂ ಕನ್ಸಲ್ಟೆನ್ಸಿ ಕಚೇರಿಗೆ ದಾಳಿ ನಡೆಸಿದ್ದಾರೆ. ಇಲ್ಲಿ ಕಚೇರಿಗೆ ನಾಲ್ಕು ಅಧಿಕಾರಿಗಳು ತಪಾಸಣೆ ನಡೆಸಿದರೆ, ಮನೆಯಲ್ಲಿ ಸುಮಾರು 40ಮಂದಿ ದಾಳಿ ನಡೆಸಿದ್ದಾರೆ. ಸುಮಾರು 18ಮಂದಿ ಪೊಲೀಸರು ಮನೆಯನ್ನು ಸುತ್ತುವರೆದು ಕಾಂಪೌಂಡ್ ಕೂಡ ಹತ್ತಿ ಮನೆಮಂದಿಯನ್ನು ಗುರಿಯಾಗಿಡಿಸಿ ಮನೆಯನ್ನು ಸರ್ಚ್ ವಾರೆಂಟ್ ಮೂಲಕ ತಪಾಸಣೆ ನಡೆಸಿ ಮನೆಯೊಳಗೆ ವೀಡಿಯೋ ಚಿತ್ರೀಕರಣ ನಡೆಸಿದ್ದಾರೆ.

ಈ ದಾಳಿ ನಡೆದಿರುವುದು ಸಾವಿರಾರು ಸೀರೆ, ಕೋಟ್ಯಾಂತರ ಹಣ ವಿದೆ ಅನ್ನೋ ರೀತಿಯಿತ್ತು ಆದರೆ ದಾಳಿ ವೇಳೆ ಸಿಕ್ಕಿರುವುದು ಕೇವಲ 38 ನೀಲಿ ಬಣ್ಣದ ಸೀರೆ, ಲಡ್ಡು ಪ್ಯಾಕೆಟ್, ಪಂಚೆ, ಬ್ರಹ್ಮೋಪದೇಶ ಮಕ್ಕಳಿಗೆ ನೀಡುವ ವಸ್ತ್ರ ಮಾತ್ರ. ರಾಘವೇಂದ್ರ ಕಿಣಿಯವರು 6ತಿಂಗಳ ಹಿಂದೆ ಅಂದರೆ ಗಾಂಧಿ ಜಯಂತಿಯ ದಿನ ಸಾಮೂಹಿಕ ಉಪನಯನ ನಡೆಸುವ ಕುರಿತು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು.

ಚುನಾವಣೆ ಘೋಷಣೆಯಾ ನಾಲ್ಕು ದಿನಗಳ ಬಳಿಕ ಕಾನೂನಾತ್ಮವಾಗಿ ರಾಘವೇಂದ್ರ ಕಿಣಿಯವರು ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಅನುಮತಿ ಪತ್ರವನ್ನು ಮಾಡಿಸಿಕೊಂಡಿದ್ದು, ಧಾಳಿ ವೇಳೆ ಅನುಮತಿ ಪತ್ರ, ಪೊಲೀಸ್ ಅನುಮತಿ, ಹೀಗೆ ಎಲ್ಲಾ ಕಾನೂನು ರೀತಿಯ ಅನುಮತಿ ಪತ್ರ, ರಿಸಿಪ್ಟ್ ತೋರಿಸಿಯೂ ಸಾಮೂಹಿಕ ಬ್ರಹ್ಮೋಪದೇಶ ಎಂದರೂ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.

ಇಲ್ಲಿ ಮುಖ್ಯಾಧಿಕಾರಿಗಳು ಹಿಂದಿ ಭಾಷಿಗರಾದ ಕಾರಣ ಕನ್ನಡದಲ್ಲಿ ಬರೆದ ಆಮಂತ್ರಣ ಓದಲು ಬಾರದೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ಪೂವಿತ ಎಂಬ ಮುಖ್ಯಾಧಿಕಾರಿ ಇಲ್ಲಿನ ಧಾರ್ಮಿಕ ಆಚರಣೆ ಅರಿವಿಲ್ಲದೆ ಉತ್ತರಿಸಲಾಗದ ಪ್ರಶ್ನೆಗಳೊಂದಿಗೆ ಸಾಮೂಹಿಕ ಉಪನಯನದಲ್ಲಿ ಬರೋ ಮಕ್ಕಳಿಗೂ ತಮಗೂ ಸಂಬಂಧವೇನು ಎಂಬ ಅಸಂಬಂಧ ಪ್ರಶ್ನೆ ಕೇಳುವ ಮೂಲಕ ಹಿಂಸೆ ನೀಡಿದ್ದಾರೆ ಎಂದು ರಾಘವೇಂದ್ರ ಕಿಣಿಯವರು ಅಸಮಧಾನ ಹೊರಹಾಕಿದ್ದಾರೆ.


Spread the love

1 Comment

Comments are closed.