ಚುನಾವಣೆ ರಜೆ ವೇಳೆ ಮನಸೋ ಇಚ್ಚೆ ಖಾಸಗಿ ಬಸ್ ಪ್ರಯಾಣ ದರ ಹೆಚ್ಚಿಸಿದರೆ ದಂಡ

Spread the love

ಚುನಾವಣೆ ರಜೆ ವೇಳೆ ಮನಸೋ ಇಚ್ಚೆ ಖಾಸಗಿ ಬಸ್ ಪ್ರಯಾಣ ದರ ಹೆಚ್ಚಿಸಿದರೆ ದಂಡ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಮನಸೋ ಇಚ್ಛೆ ಬಸ್ ಪ್ರಯಾಣ ದರ ಏರಿಕೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಖಾಸಗಿ ಬಸ್‌ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಖಾಸಗಿ ಬಸ್ ಮಾಲೀಕರೊಂದಿಗೆ ಗುರುವಾರ ಸಭೆ ನಡೆಸಲಾಗಿದ್ದು, ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ‌ಲಾಗುವುದೆಂದು ತಿಳಿಸಲಾಗಿದೆ ಎಂದು ಸಾರಿಗೆ ಆಯುಕ್ತ ವಿ.ಪಿ. ಇಕ್ಕೇರಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ನಿಗದಿತ ಪ್ರಯಾಣ ದರಕ್ಕಿಂತ ಎರಡು–ಮೂರುಪಟ್ಟು ಹೆಚ್ಚಳ ಮಾಡಿರುವ ದೂರುಗಳು ಈ ಹಿಂದೆ ಬಂದಿವೆ. ಚುನಾವಣೆ ಸಂದರ್ಭ ದಲ್ಲಿ ಮತ್ತೆ ದೂರುಗಳು ಬಂದರೆ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾ ಗುವುದು, ತಪ್ಪು ಮರುಕಳಿಸಿದರೆ ರಹದಾರಿ ರದ್ದುಗೊಳಿಸಲಾಗುವುದು ಎಂದರು.

ದೀಪಾವಳಿ ಸಂದರ್ಭದಲ್ಲಿ ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದ 59 ಬಸ್‌ಗಳ ರಹದಾರಿ ರದ್ದುಗೊಳಿಸ ಲಾಗಿದೆ. 584 ಬಸ್‌ಗಳ ರಹದಾರಿ ಅಮಾನತುಗಳಿಸಲಾಗಿದೆ ಮತ್ತು ₹1.35 ಕೋಟಿ ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.

‘2014ರಿಂದ ಈಚೆಗೆ ಬಸ್‌ ದರ ಏರಿಕೆ ಮಾಡಿಲ್ಲ. ವಿಶೇಷ ಸಂದರ್ಭ ಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಕೂಡ ಶೇ 20ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಿದೆ. ಹೆಚ್ಚಳಕ್ಕೆ ನಮಗೂ ಅವಕಾಶ ನೀಡಬೇಕು ಎಂದು ಖಾಸಗಿ ಬಸ್ ಮಾಲೀಕರು ಮನವಿ ಮಾಡಿದರು’ ಎಂದು ಹೇಳಿದರು.

ಈ ಸಂಬಂಧ ಚುನಾವಣೆ ಮುಗಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆದರೆ, ಈಗ ಹೆಚ್ಚಳ ಮಾಡಿದರೆ ಬಸ್‌ ಮಾಲೀಕರು ತಮ್ಮ ರಹದಾರಿ ಅನುಮತಿ ಕಳೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಒಪ್ಪಂದದ ಆಧಾರದಲ್ಲಿ ಓಡಾಡುವ ಬಸ್‌ಗಳಿಗೆ ಸದ್ಯ ದರ ನಿಗದಿಯಾಗಿಲ್ಲ. ನಿಗದಿಗೊಳಿಸುವ ಸಂಬಂಧ ಚುನಾವಣೆ ಮುಗಿದ ನಂತರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದೂ ಅವರು ಹೇಳಿದರು.


Spread the love