ಜಪ್ಪಿನಮೊಗರು – ಬಜಲ್ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

Spread the love

ಜಪ್ಪಿನಮೊಗರು – ಬಜಲ್ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

ಮಂಗಳೂರು: ಜಪ್ಪಿನಮೊಗರುವಿನಿಂದ ಬಜಾಲ್‍ಗೆ ಹೋಗುವ ಮುಖ್ಯ ರಸ್ತೆಯ ಕಾಂಕ್ರಿಟೀಕರಗೊಂಡ ಕಾಮಗಾರಿಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ. ಜೆ.ಆರ್ ಲೋಬೊರವರು ಉದ್ಘಾಟಿಸಿದರು.

ಶಾಸಕರ ಶಿಫಾರಿಸಿನ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ನಿಧಿಯಿಂದ ಸುಮಾರು ರೂ. 1.5 ಕೋಟಿ ವೆಚ್ಚದಲ್ಲಿ ಕಾಮಗಾರಿಯು ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶ್ರೀ ಜೆ.ಆರ್ ಲೋಬೊರವರು ಈ ಜಪ್ಪಿನಮೊಗರು ಮುಖ್ಯ ರಸ್ತೆಯು ಬಹಳ ದುಸ್ಥಿತಿಯಲ್ಲಿದ್ದು, ಬಹಳಷ್ಟು ಅಪಘಾತಗಳು ಈ ಹಿಂದೆ ಸಂಭವಿಸಿ, ಸಾರ್ವಜನಿಕರಿಗೆ ಬಹಳ ತೊಂದರೆಯನ್ನುಂಟು ಮಾಡಿತ್ತು. ಇಲ್ಲಿನ ಸಾರ್ವಜನಿಕರ ಮನವಿಯ ಮೇರೆಗೆ ಮುಖ್ಯಮಂತ್ರಿಗಳೊಂದಿಗೆ ಸಮಲೋಚಿಸಿ ಈ ಅನುದಾನವನ್ನು ತಂದಿದ್ದೇನೆ.. ಬಹಳಷ್ಟು ಉತ್ತಮ ರೀತಿಯಲ್ಲಿ ಕಾಂಕ್ರಿಟಿಕರಣ ರಸ್ತೆ ನಿರ್ಮಾಣಗೊಂಡು ಸಾರ್ವಜನಿಕರಿಗೆ ಮುಕ್ತವಾಗಿದೆ. ರಸ್ತೆಗಳು ಅಭಿವೃದ್ದಿಯಾದರೆ, ಪ್ರದೇಶವು ಅಭಿವೃದ್ಧಿಯಾಗುತ್ತದೆ. ಮಾತ್ರವಲ್ಲದೇ ಒಳ್ಳೆಯ ಬೆಲೆ ಬರುತ್ತದೆ. ಗ್ರಾಮೀಣ ಪ್ರದೇಶಗಳ ರಸ್ತೆಗಳು ಉತ್ತಮಗೊಂಡರೆ, ನಗರ ಪ್ರದೇಶದಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಮಂಗಳೂರಿಗೆ ದೊಡ್ಡ ದೊಡ್ಡ ಯೋಜನೆಗಳು ಬಂದರೆ ಬಹಳಷ್ಟು ಪ್ರಯೋಜನವಾಗುತ್ತದೆ. ದೊಡ್ಡ ಮೊತ್ತದ ಬಂಡವಾಳಗಳು ಹರಿದು ಬರುತ್ತದೆ. ಜನರ ಸಹಕಾರ ಇದಕ್ಕೆ ಅತೀ ಮುಖ್ಯ. ಮುಂದಿನ ದಿನಗಳಲ್ಲಿ ನೇತ್ರಾವತಿ ನದಿ ತೀರದ ಮೂಲಕ ರಾಷ್ಟ್ರೀಯ ಹೆದ್ದಾರಿ ಕಣ್ಣೂರು ಬಳಿ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಈಗಾಗಲೇ ಯೋಜನಾ ವರದಿಯನ್ನು ಸಲ್ಲಿಸಲು ಅನುಮೋದನೆ ದೊರಕಿದೆ. ಅದಲ್ಲದೇ ಜಪ್ಪಿನಮೊಗರುವಿನ ಕಡೇಕಾರು ರಸ್ತೆ ಅಭಿವೃದ್ಧಿಗೆ ರೂ. 75ಲಕ್ಷ ಮಂಜುರಾಗಿದೆ. ಜಪ್ಪಿನಮೊಗರುವಿನ ವಿವಿಧ ಸ್ಥಳಗಳಿಗೆ ರೂ. 75ಲಕ್ಷ ಮೀಸಲಿರಿಸಲಾಗಿದೆ ಎಂದರು.

ಕಾಪೋರೇಟರ್‍ಗಳಾದ ಪ್ರವೀಣ್‍ಚಂದ್ರ ಆಳ್ವ, ಸುರೇಂದ್ರ ಹಾಗೂ ಮಾಜಿ ಕೆನರಾ ಬ್ಯಾಂಕ್ ನಿರ್ದೇಶಕ ಉಮೇಶ್‍ಚಂದ್ರ, ದಿನೇಶ್ ಅಂಚನ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಂ, ಪ್ರಭಾಕರ ಶ್ರೀಯಾನ್, ಅನಿಲ್ ಶೆಟ್ಟಿ, ಕೇಶವ ಅಂಗಡಿಮಾರ್, ಟಿ.ಕೆ ಸುಧೀರ್ ಶೆಟ್ಟಿ, ಸೇಸಮ್ಮ, ನೀರಜ್‍ಪಾಲ್, ವರುಣ್‍ರಾಜ್ ಅಂಬಟ್, ಭರತೇಶ್ ಅಮಿನ್, ನವೀನ, ಅಬೂಬಕ್ಕರ್, ಹರ್ಬಟ್ ಡಿಸೋಜ, ಗುತ್ತಿಗೆದಾರ ಸುಧಾಕರ ಪೂಂಜಾ ಮೊದಲಾದವರು ಉಪಸ್ಥಿತರಿದ್ದರು. ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಜಪ್ಪಿನಮೊಗರು ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ. ಜೆ ಕಾರ್ಯಕ್ರಮ ನಿರೂಪಿಸಿದರು.


Spread the love