ಜಲಕೃಷಿಯಲ್ಲಿ ಉದ್ಯಮ ಶೀಲತೆಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿಯ ಅಧ್ಯಯನ 

Spread the love

ಜಲಕೃಷಿಯಲ್ಲಿ ಉದ್ಯಮ ಶೀಲತೆಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿಯ ಅಧ್ಯಯನ 

ಮಂಗಳೂರು :ಜಲಚರ ಜೀವಿಗಳಿಗೆ ತಗಲುವ ರೋಗಗಳ ಚಿಕಿತ್ಸೆ ಮತ್ತು ಮೀನು ಸಾಕಣೆಯಲ್ಲಿ ಉದ್ಯಮ ಶೀಲತೆ ಕುರಿತು ಒಂದು ತಿಂಗಳ ತರಬೇತಿ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಎಸ್. ರವರು ಜನವರಿ 21 ರಂದು ಚಾಲನೆ ಕೊಟ್ಟರು. ಈ ತರಬೇತಿಯನ್ನು ನಗರದ ಮೀನುಗಾರಿಕಾ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ. ಹೈದರಾಬಾದ್‍ನ ರಾಷ್ಟ್ರೀಯ ಕೃಷಿ ವಿಸ್ತರಣೆ ನಿರ್ವಹಣಾ ಸಂಸ್ಥೆಯ ಧನ ಸಹಾಯದೊಂದಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಮೀನುಗಾರಿಕಾ ಪದವೀದರರಲ್ಲದೇ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಹೊಂದಿದವರು ಮತ್ತು ಇಗಾಗಲೇ ಮೀನುಗಾರಿಕೆಯಲ್ಲಿ ಅದರಲ್ಲೂ ಜಲಕೃಷಿಯಲ್ಲಿ ಆಸಕ್ತರಿರುವ ವಿಜ್ಞಾನ ಪದವಿಧರರು ಈ ತರಬೇತಿಯ ಫಲಾನುಭವಿಗಳು. ಒಂದು ತಿಂಗಳ ಈ ಕಾರ್ಯಾಗಾರದಲ್ಲಿ ನುರಿತ ತಜ್ಞರುಗಳಿಂದ ಉದ್ಯಮ ಶೀಲತೆಗೆ ಸಂಭಂದಪಟ್ಟ ವಿವಿಧ ವಿಷಯಗಳ ಭೋದನೆಗಳನ್ನು ಮಂಡಿಸಲಾಗುವುದು. ಜೊತೆಗೆ, ಮೀನುಗಾರಿಕಾ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಗೆ ಒತ್ತುಕೊಟ್ಟು ಮೀನುಕೃಷಿಯಲ್ಲಿ ಮೀನಿನ ಆರೋಗ್ಯ ಕಾಪಾಡುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಜಲ ಪರಿಸರದಲ್ಲಿ ವಿವಿಧ ಬಗೆಯ ಮೀನುಗಳ ಪೆÇೀಷಣೆ, ಆಹಾರ ನೀಡುವ ವಿಧಾನ, ನೀರಿನ ಗುಣಮಟ್ಟ ಕಾಪಾಡುವಿಕೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡುವ ಪ್ರಾತ್ಯಕ್ಷಿಕೆಯನ್ನೂ ಸಹಾ ಹಮ್ಮಿಕೊಳ್ಳಲಾಗುವುದು.

ತರಬೇತಿಯ ನೋಡಲ್ ಆಫೀಸರ್, ಮೀನುಗಾರಿಕಾ ಕಾಲೇಜಿನ ಡೀನ್ ಡಾ. ಹೆಚ್. ಶಿವಾನಂದ ಮೂರ್ತಿ ರವರು ಈ ಕ್ಷೇತ್ರದ ಬೇಟಿಗೆ ಉತ್ತೇಜನ ನೀಡಿ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಪೆÇ್ರೀತ್ಸಾಹಿಸಿದರು.

ಕ್ಷೇತ್ರಗಳ ಭೇಟಿಯ ಅಂಗವಾಗಿ ಜನವರಿ 26 ರಂದು ವಾಮಂಜೂರಿನ ಹತ್ತಿರವಿರುವ ಖಾಸಗಿ ಅಲಂಕಾರಿಕ ಮೀನುಗಳ ಸಾಕಣೆ ಮತ್ತು ಮರಿ ಉತ್ಪಾದನಾ ಘಟಕಕ್ಕೆ ಪ್ರಾತ್ಯಕ್ಷಿಕೆಯ ಮೂಲಕ ಅಧ್ಯಯನ ನಡೆಸಿದ 30 ಅಭ್ಯರ್ಥಿಗಳ ತಂಡ ಮಾಹಿತಿ ಸಂಗ್ರಹಿಸಿತು. ತರಬೇತಿ ಕಾರ್ಯಕ್ರಮದ ಸಂಯೋಜಕರಾದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಧ ಡಾ. ಎ.ಟಿ.ರಾಮಚಂದ್ರ ನಾಯ್ಕರವರು ಮಾಹಿತಿ ಸಂಗ್ರಣೆಯ ಭೇಟಿಯನ್ನು ನಡೆಸಿ ಖುದ್ದಾಗಿ ಅಭ್ಯರ್ಥಿಗಳೊಂದಿಗೆ ಜೊತೆಯಾಗಿದ್ದರು.

ಬಣ್ಣಬಣ್ಣದ ಮೀನುಗಳ ಚಲನವಲನೆ ಮತ್ತು ಅವುಗಳ ಆರೋಗ್ಯ ಕಾಪಾಡುವ ವಿಧಾನಗಳ ಬಗ್ಗೆ ಘಟಕದ ಮುಖ್ಯಸ್ಥಕರುಗಳಾದ ಡಾ. ಅಶ್ವಿನ್ ರೈ ಮತ್ತು ರೊನಾಲ್ಡ್ ಡಿಸೋಜ ರವರುಗಳಿಂದ ಪ್ರವಚಿಸಿದರು. ಅಕ್ವೇರಿಯಂ ಮೀನುಗಳ ಸಾಕಣೆ ಮತ್ತು ಇದನ್ನು ಒಂದು ಉದ್ದಿಮೆಯಾಗಿ ಮಾಡಲು ಪರಿಶ್ರಮಿಸಿದ ಹಾಗೂ ಸಾಗಿಬಂದ ಹಾದಿಯ ಬಗ್ಗೆ ತರಬೇತಿಯ ಶಿಬಿರಾರ್ತಿಗಳೊಂದಿಗೆ ಹಂಚಿಕೊಂಡರು. ಉದ್ಯಮಿ ಅಕ್ಷಯ್‍ಕುಮಾರ್ ಮೀನು ಮರಿ ಉತ್ಪಾದನೆಯ ವಿಧಾನಗಳನ್ನು ತಿಳಿಸಿಕೊಟ್ಟರು.


Spread the love