ಜಾರ್ಖಂಡ್ನಲ್ಲಿ ಪಾಪ್ಯುಲರ್ ಫ್ರಂಟ್ ನಿಷೇಧದ ವರದಿಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ – ಪಾಪ್ಯುಲರ್ ಫ್ರಂಟ್

Spread the love

ಜಾರ್ಖಂಡ್ನಲ್ಲಿ ಪಾಪ್ಯುಲರ್ ಫ್ರಂಟ್ ನಿಷೇಧದ ವರದಿಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ – ಪಾಪ್ಯುಲರ್ ಫ್ರಂಟ್

ಜಾರ್ಖಂಡ್ ಸರಕಾರವು ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿ ಗೃಹ ಇಲಾಖೆಯ ಮೂಲಕ ನೋಟೀಸ್ ಜಾರಿಗೊಳಿಸಿರುವ ಮಾಹಿತಿಯು ಮಾಧ್ಯಮದ ಕೆಲವು ವರ್ಗವು ಪ್ರಸಾರ ಮಾಡಿದ ಸುದ್ದಿಯ ಮೂಲಕ ನಮ್ಮ ಗಮನಕ್ಕೆ ಬಂದಿರುತ್ತದೆ. ಈ ರೀತಿ ನಿಷೇಧಿಸುತ್ತಿರುವುದು ಇದು ಎರಡನೆಯ ಬಾರಿಯಾಗಿದ್ದು; ಸರಕಾರದ ಈ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ನಾವು ತೀಕ್ಷ್ಣವಾಗಿ ಖಂಡಿಸುತ್ತಿದ್ದೇವೆ. ಗೃಹ ಇಲಾಖೆಯ ನೋಟೀಸಿನಲ್ಲಿ ಪ್ರಸ್ತಾಪಿಸಲಾಗಿರುವ ಆರೋಪಗಳು ನಿರಾಧಾರವಾಗಿದ್ದು, ಸಂಪೂರ್ಣವಾಗಿ ಅಸತ್ಯ ಮತ್ತು ದುರುದ್ದೇಶಪೀಡಿತವಾಗಿವೆ. ಇಂತಹ ದಮನಕಾರಿ ಕ್ರಮಗಳಿಗೆ ಪಾಪ್ಯುಲರ್ ಫ್ರಂಟ್ ಎದೆಗುಂದದೆ ಸಾಂವಿಧಾನಾತ್ಮಕವಾಗಿ ಅನ್ಯಾಯದ ವಿರುದ್ಧ ಹೋರಾಡಲಿದೆ.

2018ರ ಫೆಬ್ರವರಿ 21ರಂದು ಜಾರ್ಖಂಡ್ ಸರಕಾರವು ತನ್ನ ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್  ಸಂಘಟನೆಗೆ ಹೇರಿದ್ದ ನಿಷೇಧವನ್ನು 2018ರ ಆಗಸ್ಟ್ 27ರಂದು ಜಾರ್ಖಂಡ್ ಹೈಕೋರ್ಟು ತೆರವುಗೊಳಿಸಿತ್ತು.   ರಾಜ್ಯ ಸರಕಾರವು ಪಾಪ್ಯುಲರ್ ಫ್ರಂಟ್ ಮೇಲೆ ಹೊರಿಸಿರುವ ದೋಷಾರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಸೂಚಿಸಿತ್ತು.

ಜಾರ್ಖಂಡ್ ನಲ್ಲಿ ನಡೆದಿದ್ದ ಗುಂಪು ಹತ್ಯೆ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಸಹಕಾರದಿಂದಾಗಿ ಸಂತ್ರಸ್ತರಿಗೆ ಕಾನೂನು ಜಯ ದೊರಕಿತ್ತು. ಪಾಪ್ಯುಲರ್ ಫ್ರಂಟ್ ತನ್ನದಾಗಿಸಿಕೊಂಡಿರುವ ಪರಿಣಾಮಕಾರಿ ಕಾನೂನು ಸಮರ ಮತ್ತು ಪ್ರಜಾಸತ್ತಾತ್ಮಕ ಹೋರಾಟ ಶೈಲಿಯನ್ನು ಹತ್ತಿಕ್ಕುವುದು ಇಂತಹ ನಿಷೇಧ ಕ್ರಮದ ಹಿಂದಿರುವ ಪ್ರೇರಣೆಯಾಗಿರುತ್ತದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಭರವಸೆಯನ್ನು ಇರಿಸಿದೆ ಮತ್ತು ಮತ್ತೊಮ್ಮೆ ನಾವು ಈ ನಿಷೇಧವನ್ನು ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಅವಕಾಶವಿರುವ ಪ್ರಜಾಸತ್ತಾತ್ಮಕ ಹಾಗೂ ಕಾನೂನು ಹೋರಾಟಗಳ ಮೂಲಕ ಅತಿಜಯಿಸಲಿದ್ದೇವೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ.


Spread the love