ಜಿಲ್ಲಾಡಳಿತದ, ಜನಪ್ರತಿನಿದಿಗಳ ಉಡಾಫೆ ವರ್ತನೆಯಿಂದ ಜಿಲ್ಲೆಯ ನಾಗರಿಕರು ಹೈರಾಣು – ವಿಶ್ವಾಸ್ ಅಮೀನ್

Spread the love

ಜಿಲ್ಲಾಡಳಿತದ, ಜನಪ್ರತಿನಿದಿಗಳ ಉಡಾಫೆ ವರ್ತನೆಯಿಂದ ಜಿಲ್ಲೆಯ ನಾಗರಿಕರು ಹೈರಾಣು – ವಿಶ್ವಾಸ್ ಅಮೀನ್

ಉಡುಪಿ:  ಜಿಲ್ಲೆಯಲ್ಲಿ ಕೊರಾನ ಸಮಸ್ಯೆ ಬಂದಾಗಿನಿಂದಲೂ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಮೊನ್ನೆ ಉಡುಪಿ ನಿವಾಸಿ ಶ್ರೀ ರಕ್ಷಾ ಎನ್ನುವ ಮಹಿಳೆಯ ಸಂಶಯಾಸ್ಪದ ಸಾವು & ಕೊರಾನ ಪಾಸಿಟಿವ್ ಎನ್ನುವ ಸುಳ್ಳು ವರದಿ, ಕುಂದಾಪುರದ ಹಿರಿಯ ವ್ಯಕ್ತಿಯ ಮೃತ ದೇಹ ಅದಲುಬದಲು ಪ್ರಕರಣ, ಕೊರಾನ ಸೋಂಕಿತ ರೋಗಿಯ ಕುಟುಂಬಿಕರಿಗೆ ಅಭದ್ರತೆ ಇವೆಲ್ಲವೂ ಉಡುಪಿಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ತೋರಿಸುತ್ತದೆ. ಜಿಲ್ಲಾಡಳಿತದ, ಜನಪ್ರತಿನಿದಿಗಳ ಉಡಾಫೆ ವರ್ತನೆಯಿಂದ ಜಿಲ್ಲೆಯ ನಾಗರಿಕರು ಹೈರಾಣಾಗಿರುವ ಈ ಸಂದರ್ಭದಲ್ಲಿ ಅನ್ಯಾಯಗಳು ನಡೆದಾಗ ಅದನ್ನು ಜನ ಸಾಮಾನ್ಯರು ಪ್ರಶ್ನೆ ಮಾಡುವುದು ಸಹಜ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಹೇಳಿದ್ದಾರೆ

ಜಿಲ್ಲೆಯಲ್ಲಿ ನಡೆಯುವ ಅನ್ಯಾಯಗಳನ್ನು, ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗಳನ್ನು ಪ್ರಶ್ನೆ ಮಾಡಬಾರದು ಎನ್ನುವುದು ಸಂವಿಧಾನ ಜನ ಸಾಮಾನ್ಯನಿಗೆ ನೀಡಿದ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಿದಂತೆ, ಏನು ಜಿಲ್ಲೆಯಲ್ಲಿ ಸರ್ವಾಧಿಕಾರಿ ಸರ್ಕಾರವಿದೆಯೆ…? ಸರ್ಕಾರದ ವೈಫಲ್ಯಗಳನ್ನು ಪ್ರಶ್ನೆ ಮಾಡುವ ಜನ ಸಾಮಾನ್ಯನನ್ನು ಕಿಡಿಗೇಡಿ ಎನ್ನುವುದು, ಕೇಸು ದಾಖಲಿಸುತ್ತೇನೆ ಎನ್ನುವುದು ಹಿಟ್ಲರ್ ಆಡಳಿತವನ್ನು ನೆನಪಿಸುತ್ತದೆ. ಅಧಿಕಾರಿಗಳು ಯಾರೂ ಇಂದ್ರಲೋಕದಿಂದ ಇಳಿದು ಬಂದವರಲ್ಲ, ಜನಪ್ರತಿನಿಧಿಗಳು ಚಂದ್ರಲೋಕದಿಂದ ಇಳಿದು ಬಂದವರಲ್ಲ, ಇವರೆಲ್ಲರೂ ಸಾರ್ವಜನಿಕರ ಸೇವಕರು. ಅನ್ಯಾಯವನ್ನು ಪ್ರಶ್ನಿಸುವ ಜನ ಸಾಮನ್ಯನ ಮೇಲೆ ದರ್ಪ ತೋರುವ ಜನಪ್ರತಿನಿದಿಗಳು, ಅವರನ್ನು ಆಯ್ಕೆ ಮಾಡಿದವರು ಜನ ಸಮಾನ್ಯರು ಎನ್ನುವುದನ್ನು ಮರೆತಂತಿದೆ, ಮತ್ತು ಜನರ ತೆರಿಗೆಯ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಜನರ ಧ್ವನಿಯನ್ನು ಹತ್ತಿಕ್ಕುತ್ತೇವೆ ಎಂದರೆ ಏನರ್ಥ….?

ಅಮಾಯಕ ಮಹಿಳೆ ಶ್ರೀ ರಕ್ಷಾ ಸಾವಿನ ತನಿಖೆಯನ್ನು ಜಿಲ್ಲಾಧಿಕಾರಿಗಳು DHOಗೆ ವಹಿಸಿಕೊಟ್ಟಿದ್ದಾರೆ, ಜಿಲ್ಲಾಧಿಕಾರಿಗಳ ಈ ಆದೇಶದ ಒಂದು ಗಂಟೆಯ ಒಳಗೆ ಶಾಸಕ ರಘುಪತಿ ಭಟ್ ಅವರು ಜಿಲ್ಲಾಧಿಕಾರಿಗಳ ಆದೇಶವನ್ನು ತಡೆಹಿಡಿದು CODಗೆ ತನಿಖೆಯನ್ನು ನೀಡುತ್ತಾರೆ….!!

ಯಾಕೆ ಈ ಗೊಂದಲ..? ಶಾಸಕರ ಈ ನಡೆ ಏನನ್ನು ಸೂಚಿಸುತ್ತದೆ..?
ಇಲ್ಲಿನ ಶಾಸಕರುಗಳಿಗೆ ಜಿಲ್ಲೆಯ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ…? ಅಧಿಕಾರಿಗಳ ಮೇಲೆ ನಂಬಿಕೆಯೇ ಇಲ್ಲದಿದ್ದರೆ ಹೇಗೆ ಆಡಳಿತ ನಡೆಸುತ್ತೀರಿ ಮತ್ತು ಜನ ಸಾಮಾನ್ಯನ ಅಳಲಿಗೆ ಹೇಗೆ ಸ್ಪಂದಿಸುತ್ತೀರಿ..?

ಜನರ ಪರವಾಗಿ ಶಾಸಕರುಗಳನ್ನು, ಅಧಿಕಾರಿಗಳನ್ನು, ನಾವು ಪ್ರಶ್ನೆ ಮಾಡಿಯೇ ಮಾಡುತ್ತೇವೆ, ಪ್ರಕರಣ ದಾಖಲಿಸಲು ಅಷ್ಟೊಂದು ಉತ್ಸುಕರಾಗಿದ್ದರೆ ನನ್ನ ಮೇಲೆ ಪ್ರಕರಣ ದಾಖಲಿಸಿ, ಜನರಿಗಾಗಿ ಯಾವ ಪ್ರಕರಣವನ್ನು ಎದುರಿಸಲೂ ನಾನು ಸಿದ್ದನಿದ್ದೇನೆ ಎಂದು ಅವರು ಹೇಳಿದ್ದಾರೆ.


Spread the love