ಜೀವ ನದಿ ವರಾಹಿಯನ್ನು ಬರದಾಗಿಸಬೇಡಿ – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಬೇರೆ, ಬೇರೆ ಯೋಜನೆ ಹೆಸರಿನಲ್ಲಿ ವರಾಹಿ ನದಿಗೆ ಅಡ್ಡಲಾಗಿ ಹೋರಿಯಬ್ಬೆಯಲ್ಲಿ ನಿರ್ಮಿಸಿರುವ ಅಣೆಕಟ್ಟುವಿನಿಂದ ಯವರ ನೀರನ್ನು ಎತ್ತಿದರೆ ಇನ್ನು ಕೆಲವೇ ವರ್ಷಗಳಲ್ಲಿ ಜೀವನದಿ ವರಾಹಿ ಬರಿದಾಗುವುದರಲ್ಲಿ ಯಾವುದೇ ಅನುಮಾನವಿಲ್ಲಾ ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ವರಾಹಿ ನದಿಗೆ ಅಡ್ಡಲಾಗಿ ಕಟ್ಟಿದ ಹೋರಿಯಬ್ಬೆಯ ಅಣೆಕಟ್ಟುವಿನಿಂದ ನೀರನ್ನು ಯಾವುದೇ ಯೋಜನೆಗೆ ಹಾಯಿಸಿದರೆ ವರಾಹಿ ನದಿಯಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲಾ, ಆಗ ಯಾವುದೇ ನದಿಯಲ್ಲಿ ನೀರಿನ ಹರಿಯುವಿಕೆ ಕಡಿಮೆಯಾದರೆ ಅದರ ಹೊಡೆತವಾಗುವುದು ಅಂತರ್ಜಲ ವೃದ್ಧಿಗೆ ಆಗ ಬಳ್ಕೂರಿನಲ್ಲಿ ಉಪ್ಪು ನೀರು ತಡೆಗೋಡೆ ಇದ್ದರೂ ಸಹ ನೀರಿನ ಹರಿಯುವಿಕೆ ಪ್ರಮಾಣ ಕಡಿಮೆಯಾದಾಗ ಉಪ್ಪು ನೀರು ಮೇಲ್ಮುಖವಾಗಿ ಹರಿದು ಹೆಚ್ಚುಕಡಿಮೆ ಹಾಲಾಡಿ ತನಕ ವರಾಹಿ ನದಿಯಲ್ಲಿ ಉಪ್ಪು ನೀರು ಹರಿಯುತ್ತದೆ ಆಗ ವರಾಹಿ ನದಿನೀರನ್ನು ಕುಡಿಯಲು ನಂಬಿರುವ ಕುಂದಾಪುರ ಪುರಸಭೆ, ಜಪ್ತಿ, ಬಳ್ಕೂರು, ಬಸ್ರೂರು, ಕಂದಾವರ, ಕೋಣಿ, ಆನಗಳ್ಳಿ, ಹಂಗ್ಳೂರು, ಕೋಟೇಶ್ವರ ಗ್ರಾಮ ಪಂಚಾಯತ್ ಜನರು ಉಪ್ಪು ನೀರು ಕುಡಿಯಬೇಕಾಗುತ್ತದೆ ಮತ್ತು ವರಾಹಿ ನದಿ ನೀರು ನಂಬಿ ಕೃಷಿ ಮಾಡಿರುವ ಶಂಕರನಾರಾಯಣ, ಅಂಪಾರು, ಕಾವ್ರಾಡಿ ಮತ್ತು ಹಳ್ನಾಡು ಗ್ರಾಮದ ಕೃಷಿಕರು ಉಪ್ಪು ನೀರಿನಿಂದ ಅಡಿಕೆ, ತೆಂಗು, ಭತ್ತ ಮತ್ತು ಇತರೆ ತರಕಾರಿ ಬೆಳೆಯುವುದನ್ನು ಸಂಪೂರ್ಣ ನಿಲ್ಲಿಸಬೇಕಾಗುತ್ತದೆ. ಇದರ ಜೊತೆ ವರಾಹಿ ಎಡ ದಂಡೆ, ಬಲ ದಂಡೆ ಹಾಗೂ ಏತ ನೀರಾವರಿ ಯೋಜನೆಯ ಮೂಲ ಯೋಜನೆಯಲ್ಲಿ ಇರುವ 18,000 ಹೆಕ್ಟೇರ್ ಕೃಷಿ ಭೂಮಿಗೆ ನೀರಿನ ಕೊರತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲಾ. ಆದುದರಿಂದ ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಹೋರಿಯಬ್ಬೆ ಅಣೆಕಟ್ಟು ಮೂಲಕ ನೀರನ್ನು ಎತ್ತುವುದಕ್ಕಿಂತ ವಾರಾಹಿ ನದಿಯ ಕೆಳಭಾಗದಲ್ಲಿ ಜಾಕ್ ವೆಲ್ ನಿರ್ಮಾಣ ಮಾಡಿ ಅಲ್ಲಿನ ಭಾಗದ ರೈತರಿಗೆ, ಜನಸಾಮಾನ್ಯರಿಗೆ ನೀರನ್ನು ನೀಡುವುದು ಉತ್ತಮವೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಅಗ್ರಹಿಸಿದ್ದಾರೆ.













