ಜುಲೈ 28 : ಪಿಲಿಕುಳದಲ್ಲಿ ಅಂತರಾಷ್ಟ್ರೀಯ ಹುಲಿ  ದಿನಾಚರಣೆ 

Spread the love

ಜುಲೈ 28 : ಪಿಲಿಕುಳದಲ್ಲಿ ಅಂತರಾಷ್ಟ್ರೀಯ ಹುಲಿ  ದಿನಾಚರಣೆ 

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಅಂತರಾಷ್ಟ್ರೀಯ ಹುಲಿಯ ದಿನಾಚರಣೆ – 2019 ಕಾರ್ಯಕ್ರಮದ ಪ್ರಯುಕ್ತ ಜುಲೈ 28 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಹುಲಿ ಸಂರಕ್ಷಣೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ತೇಪಣೆ/ಕೊಲಾಜ್ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಯ ನಿಯಮಗಳು ಇಂತಿವೆ: ತೇಪಣೆ/ಕೊಲಾಜ್ ಮಾಡಲು ನೀಡುವ ಸಮಯ 1 ಗಂಟೆ. ಪತ್ರಿಕೆಗಳು, ಮಾಗ್ಜಿನ್‍ಗಳು, ಅಂಟು, ಬಣ್ಣಗಳನ್ನು ಸ್ಪರ್ಧಿಗಳೇ ತರಬೇಕು. ಸ್ಪರ್ಧಿಗಳು ಕತ್ತರಿಯನ್ನು ಉಪಯೋಗಿಸುವಂತಿಲ್ಲ. ಸ್ಪರ್ಧೆಯ ವಿಷಯ ಹುಲಿಗಳ ಸಂರಕ್ಷಣೆ ನಮ್ಮ ಕೈಯಲ್ಲಿ, ಹಾಳೆಯನ್ನು ಸ್ಥಳದಲ್ಲಿಯೇ ನೀಡಲಾಗುವುದು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಹುಲಿಗಳ ಸಂರಕ್ಷಣೆ ವಿಷಯದ ಮೇಲೆ ಪ್ರಶ್ನೆಯನ್ನು ಕೇಳಲಾಗುವುದು. ನೀಡುವ ಸಮಯ 1 ಗಂಟೆ. ಪ್ರತೀ ಪ್ರಶ್ನೆಗಳಿಗೆ 3 ಸುಳಿವುಗಳನ್ನು ನೀಡಲಾಗುವುದು, ಸರಿ ಉತ್ತರಕ್ಕೆ ಗುರುತು ಹಾಕಬೇಕು. ಪ್ರತೀ ಸರಿ ಉತ್ತರಗಳಿಗೆ 1 ಅಂಕವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ -0824-2263300, +919738363450 ಸಂಪರ್ಕಿಸಬಹುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರಾದ ಹೆಚ್.ಜೆ. ಭಂಡಾರಿ ಇವರ ಪ್ರಕಟಣೆ ತಿಳಿಸಿದೆ.


Spread the love